ಪರಿಶ್ರಮ,ಛಲವಿದ್ದರೆ ಸಾಧನೆ ಅಂಗವೈಕಲ್ಯ ಅಡ್ಡಿಯಾಗದು: ಐ.ಆರ್. ಮಠಪತಿ

KannadaprabhaNewsNetwork |  
Published : May 18, 2026, 04:00 AM IST
ಲೋಕಾಪುರ ಪಟ್ಟಣದ ವಿಕಲಚೇತನ ಅಂತರರಾಷ್ಟಿçÃಯ ಪ್ಯಾರ ಕ್ರೀಡಾಪಟು ಲೋಕಣ್ಣ ಹೊಳಬಸಪ್ಪ ಪರಣ್ಣನವರ ಅವರನ್ನು ಗೆಳೆಯರ ಬಗಳದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಆಯ್.ಆರ್.ಮಠಪತಿ, ಶಿವಾನಂದ ಉದಪುಡಿ, ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ರಾಜು ಕಡೇಬಾಗಿಲ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಅಂಗವೈಕಲ್ಯ ದೈಹಿಕ ಮಿತಿಯಷ್ಟೇ ಹೊರತು, ಅದು ಎಂದಿಗೂ ಸಾಧನೆಗೆ ಅಡ್ಡಿಯಾಗುವುದಿಲ್ಲ, ದೃಢವಾದ ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಅಂಗವೈಕಲ್ಯ ಮೆಟ್ಟಿ ನಿಂತು ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹಾರೂಗೇರಿಯ ವಿಚಾರ ವಾಹಿನಿ ಮುಖ್ಯಸ್ಥ ಐ.ಆರ್. ಮಠಪತಿ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಅಂಗವೈಕಲ್ಯ ದೈಹಿಕ ಮಿತಿಯಷ್ಟೇ ಹೊರತು, ಅದು ಎಂದಿಗೂ ಸಾಧನೆಗೆ ಅಡ್ಡಿಯಾಗುವುದಿಲ್ಲ, ದೃಢವಾದ ಆತ್ಮವಿಶ್ವಾಸ, ಕಠಿಣ ಪರಿಶ್ರಮ ಮತ್ತು ಛಲವಿದ್ದರೆ ಅಂಗವೈಕಲ್ಯ ಮೆಟ್ಟಿ ನಿಂತು ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ಹಾರೂಗೇರಿಯ ವಿಚಾರ ವಾಹಿನಿ ಮುಖ್ಯಸ್ಥ ಐ.ಆರ್. ಮಠಪತಿ ಹೇಳಿದರು.

ಪಟ್ಟಣದ ಗಣ್ಯ ಉದ್ಯಮಿ ರವಿ ಬೋಳಿಶೆಟ್ಟಿ ನಿವಾಸದಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್‌ನಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ೧೬ನೇ ಸ್ಥಾನ ಪಡೆದ ಲೋಕಣ್ಣ ಹೊಳಬಸಪ್ಪ ಪರಣ್ಣನವರ ಅವರನ್ನು ಗೆಳೆಯರ ಬಗಳದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು ಸಾಧಿಸುವ ಛಲವಿದ್ದರೆ ಸಾಧನೆಗೆ ಅಂಗವಿಕಲತೆ ಅಡ್ಡಿಯಾಗದು. ಅಂಗವೈಕಲ್ಯವನ್ನು ನೂನ್ಯತೆ ಎಂದು ಭಾವಿಸದೆ ಸಾಧನೆಯ ಮಾರ್ಗದತ್ತ ಸಾಗಬೇಕು ಎಂದು ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಅಂಗವೈಕಲ್ಯ ಮನುಷ್ಯನ ದೌರ್ಬಲ್ಯವಲ್ಲ, ದೇಹದ ನೂನ್ಯತೆಯನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡುವ ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಲೋಕಣ್ಣ ಪರಣ್ಣನವರ ನಿದರ್ಶನ. ಕಠಿಣ ಪರಿಶ್ರಮ, ಶ್ರದ್ಧೆ, ಆಸಕ್ತಿ ಮತ್ತು ಕೆಲಸದ ಮೇಲೆ ತೋರುವ ಏಕಾಗ್ರತೆಯಿಂದ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿದ್ದಾರೆ ಎಂದರು.

ಈ ವೇಳೆ ವಿಕಲಚೇತನ ಕ್ರೀಡಾಪಟು ಲೋಕಣ್ಣ ಪರಣ್ಣವರ ಅವರನ್ನು ಗೆಳೆಯರಾದ ರವಿ ಬೋಳಿಶೆಟ್ಟಿ, ಮೈಬೂಬ ರಾಮದುರ್ಗ, ಅಪ್ಪಣ್ಣ ಚಿಗರಡ್ಡಿ, ಜಮಾಲಸಾಬ ಕುಂದೇನಾಯ್ಕ, ರಾಜು ಕಡೇಬಾಗಿಲ, ರುದ್ರಪ್ಪ ನೀಲಿ ಹಾಗೂ ಸ್ಥಳೀಯರಾದ ಸದಾನಂದ ಬೋಳಿಶೆಟ್ಟಿ, ಈರಣ್ಣ ನಿಜಗುಳಿ, ಬಸವರಾಜ ಕಾತರಕಿ, ಸದಾಶಿವ ಉದಪುಡಿ, ಚನ್ನಯ್ಯ ಗಣಾಚಾರಿ, ದುಂಡಪ್ಪ ಸಕ್ರಿ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಹುಕೋಟಿ ವಂಚನೆ ಪ್ರಕರಣ: ಕಡತ ವಶಕ್ಕೆ ಪಡೆದ ಸಿಐಡಿ
ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು ಪ್ರಶಿಕ್ಷಣ ವರ್ಗ