ಕನ್ನಡಪ್ರಭ ವಾರ್ತೆ ಸುತ್ತೂರು
ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಮೈಸೂರಿನ ನಾಗನಹಳ್ಳಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ನಡೆದ ರೈತರಿಗೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಉಪ ನಿರ್ದೇಶಕ ಡಾ. ಧನಯಂಜಯ ಅವರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ರೋಗ ನಿರೋಧಕ ತಳಿಗಳನ್ನು ಆಯ್ಕೆ ಮಾಡಿ ಬಿತ್ತನೆ ಮಾಡುವ ಮುಂಚೆ ಬೀಜೋಪಚಾರವನ್ನು ಮಾಡಬೇಕು, ತಂಬಾಕು ಬೆಳೆಗೆ ಪರ್ಯಾಯವಾಗಿ ಜೋಳದ ಬೆಳೆಯನ್ನು ಬೆಳೆಯಲು ರೈತರಿಗೆ ಕರೆ ನೀಡಿದರು.ರೈತರು ಬೆಳೆದ ಜೋಳವನ್ನು ಕನಿಷ್ಟ ಬೆಂಬಲ ಬೆಲೆಗಿಂತಲೂ ಕಂಪನಿಗೆ ಮಾರಾಟ ಮಾಡಲು ತಿಳಿಸಿದರು.
ವಿಜ್ಞಾನಿ ಡಾ. ಸುಜಾತಾ ನಾಯರ್ ಮಾತನಾಡಿ, ಸ್ಥಳಿಯ ಸುಗಂಧರಾಜ ತಳಿಯನ್ನು ಬೆಳೆಯುವ ಬದಲುಅಧಿಕ ಇಳುವರಿ ನೀಡುವಆರ್ಕಾ ಪ್ರಜ್ವಲ್ ತಳಿಯನ್ನು ಬೆಳೆಯಲು ಕರೆ ನೀಡಿದರು. ಏರುಮಡಿ ಹಾಗೂ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಬೇರು ಕೊಳೆಯುವಿಕೆ, ನೆಮಟೋಡ್ ನಿರ್ವಹಣೆಯನ್ನು ಸುಗಂಧರಾಜ ಬೆಳೆಯಲ್ಲಿ ಮಾಡಬಹುದೆಂದು ತಿಳಿಸಿದರು.
ನಂಜನಗೂಡು ತಾಲೂಕಿನ ತಾಯೂರು, ಈಶ್ವರಗೌಡನಹಳ್ಳಿ, ನೇರಳೆ ಮತ್ತು ಹಳೆಪುರ ಗ್ರಾಮಗಳಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಸಂಬಂಧಿಸಿದ ಇಲಾಖೆಗಳು ಹಾಗೂ ಗ್ರಾಪಂ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಮುಂಗಾರಿನಲ್ಲಿ ಭೂಮಿ ಸಿದ್ಧತೆ, ಹಸಿರೆಲೆ ಗೊಬ್ಬರಗಳ ಉಪಯೋಗಳು ಹಾಗೂ ಬಳಕೆ, ಬೆಳೆ ಮತ್ತು ತಳಿಗಳ ಆಯ್ಕೆ, ಪೋಷಕಾಂಶಗಳ ನಿರ್ವಹಣೆ ಜೊತೆಗೆ ಲಘು ಪೋಷಕಾಂಶಗಳ ಮಿಶ್ರಣಗಳಾದ ಬಾಳೆ ಸಮೃದ್ಧಿ ಹಾಗೂ ತರಕಾರಿ ಸಮೃದ್ಧಿಗಳ ಬಳಕೆ ಹಾಗೂ ಅವುಗಳ ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ವಿಶೇಷವಾಗಿ ಭತ್ತದಲ್ಲಿ ಬರುವ ರೋಗಗಳನ್ನು ತಿಳಿಸಿ ಅವುಗಳ ಜೈವಿಕ ನಿರ್ವಹಣೆ ಬಗ್ಗೆ ರೈತರ ಜೊತೆ ಸಂವಾದ ನಡೆಸಿದರು. ಕೇಂದ್ರೀಯ ಸಿಹಿ ನೀರು ಜಲ ಕೃಷಿ ಸಂಶೋಧನಾ ಸಂಸ್ಥೆ, ಪ್ರಾದೇಶಿಕ ಸಂಶೋಧನಾ ಕೇಂದ್ರ ಬೆಂಗಳೂರಿನ ಹಿರಿಯ ವಿಜ್ಞಾನಿಯಾದ ಡಾ. ಸತೀಶ್ ಏವುಂಜೆ ಅವರ ಸಂಶೋಧನಾ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಮೀನುಗಾರಿಕೆಗೆ ಸಂಬಂಧಿಸಿದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗಳು ಕುರಿತು ರೈತರಿಗೆ ಮಾಹಿತಿ ನೀಡಿದರು.