ಹಾನಗಲ್ಲಿನಲ್ಲಿ ಆದರ್ಶ ಶಿಕ್ಷಕ ಬಿ.ಬಿ. ಪದಕಿ ವೃತ್ತ ನಾಮಕರಣ ನಾಳೆ

KannadaprabhaNewsNetwork | Published : Apr 24, 2025 11:50 PM

ಸಾರಾಂಶ

ಬಿ.ಬಿ. ಪದಕಿ ಅವರು ಹಾನಗಲ್ಲಿನ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರಾಗಿ, ಕಾಲೇಜು ವಿಭಾಗದ ಪ್ರಾಚಾರ್ಯರಾಗಿ, ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ಅಪ್ಪಟ ಗಾಂಧಿವಾದಿ. ಲಾಲ ಬಹದ್ದೂರಶಾಸ್ತ್ರಿ ಅವರ ಅನುಯಾಯಿ.

ಹಾನಗಲ್ಲ: ತಮ್ಮ ಶಿಷ್ಯರ ಮನಸ್ಸು ಹೃದಯದಲ್ಲಿ ಮೌಲ್ಯ ಬಿತ್ತಿ ಬೆಳೆದ ಪ್ರಾಚಾರ್ಯ ಬಿ.ಬಿ. ಪದಕಿ ಅವರ ಹೆಸರನ್ನು ಅಜರಾಮರಗೊಳಿಸಲು ಪುರಸಭೆ ರಂಜನಿ ಚಿತ್ರ ಮಂದಿರದ ಬಳಿ ಇರುವ ವೃತ್ತಕ್ಕೆ "ಆದರ್ಶ ಶಿಕ್ಷಕ ಶ್ರೀ ಬಿ.ಬಿ. ಪದಕಿ ವೃತ್ತ " ಎಂದು ನಾಮಕರಣ ಮಾಡಲು ಏ. 26ರಂದು ಭವ್ಯ ಕಾರ್ಯಕ್ರಮ ಆಯೋಜಿಸಿದೆ.ಹಾನಗಲ್ಲಿನ ನ್ಯೂ ಕಾಂಪೋಜಿಟ್ ಜ್ಯೂನಿಯರ್ ಕಾಲೇಜಿನ ಪ್ರೌಢಶಾಲೆಯ ಶಿಕ್ಷಕರಾಗಿ, ಕಾಲೇಜು ವಿಭಾಗದ ಪ್ರಾಚಾರ್ಯರಾಗಿ, ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು, ಅಪ್ಪಟ ಗಾಂಧಿವಾದಿ. ಲಾಲ ಬಹದ್ದೂರಶಾಸ್ತ್ರಿ ಅವರ ಅನುಯಾಯಿ. ಖಾದಿ ಟೋಪಿ ತಲೆಯ ಮೇಲೆ, ಅಂತೆಯೇ ರಾಷ್ಟ್ರೀಯ ವಿಚಾರಧಾರೆಗಳಿಗೆ ಒಲಿದವರು. 30 ವರ್ಷಗಳ ಸೇವಾವಧಿಯಲ್ಲಿ ಶೈಕ್ಷಣಿಕ, ಆಡಳಿತಾತ್ಮಕ ವಿಚಾರಗಳಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳಲಿಲ್ಲ.1929ರ ಮೇ 5ರಂದು ಜನಿಸಿದರು. 2019ರ ಮಾ. 24ರಂದು ಕಾಲವಾಗಿ 90 ವರ್ಷಗಳ ತುಂಬು ಜೀವನ ನಡೆಸಿದ ಇವರ ಶೈಕ್ಷಣಿಕ ಸಮಯ ಅನುಕರಣೀಯ. ಆ ಕಾರಣಕ್ಕಾಗಿಯೇ ಬಿ.ಬಿ. ಪದಕಿ ಅವರ ವಿದ್ಯಾರ್ಥಿ ವೃಂದದ ಅಪೇಕ್ಷೆಗೆ ಇಲ್ಲಿನ ಪುರಸಭೆ ಸ್ಪಂದಿಸಿದೆ.

ಮಾಜಿ ಸಚಿವರಾದ ದಿ. ಸಿ.ಎಂ. ಉದಾಸಿ, ದಿ. ಮನೋಹರ ತಹಶೀಲ್ದಾರ ಹಾಗೂ ಹಾಲಿ ಶಾಸಕ ಶ್ರೀನಿವಾಸ ಮಾನೆ ಅವರ ಅಪೇಕ್ಷೆಯೂ ಸೇರಿ ಸರ್ಕಾರದಿಂದಲೇ ಈ ವೃತ್ತಕ್ಕೆ ನಾಮಕರಣ ಮಾಡಲು ಆದೇಶವಾಗಿದೆ.

ನಾಳೆ ಫಲಕ ಅನಾವರಣಏ. 26ರ ಬೆಳಗ್ಗೆ 10 ಗಂಟೆಗೆ ಅ.ನ. ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್‌ನಿಂದ ರಂಜನಿ ಚಿತ್ರ ಮಂದಿರದ ಬಳಿಯ ವೃತ್ತಕ್ಕೆ ಆದರ್ಶ ಶಿಕ್ಷಕ ಬಿ.ಬಿ. ಪದಕಿ ವೃತ್ತವೆಂದು ನಾಮಕರಣ ಸಮಾರಂಭ ನಡೆಯಲಿದೆ.ಶಾಸಕ ಶ್ರೀನಿವಾಸ ಮಾನೆ ನಾಮಫಲಕ ಅನಾವರಣಗೊಳಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿ.ಬಿ. ಪದಕಿ ಭಾವಚಿತ್ರ ಅನಾವರಣಗೊಳಿಸುವರು. ಟ್ರಸ್ಟಿನ ಅಧ್ಯಕ್ಷ ಉದಯ ನಾಸಿಕ ಅಧ್ಯಕ್ಷತೆ ವಹಿಸುವರು. ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ವಿಶೇಷ ಆಹ್ವಾನಿತರಾಗಿ ಸುನೀಲ ಪದಕಿ, ನಾಗಪ್ಪ ಸವದತ್ತಿ, ಬಿ.ಎಸ್. ಅಕ್ಕಿವಳ್ಳಿ, ಸುರೇಶ ರಾಯ್ಕರ ಪಾಲ್ಗೊಳ್ಳುವರು. ಸಭಾ ಕಾರ್ಯಕ್ರಮ ಶಂಕರ ಮಂಗಲ ಭವನದಲ್ಲಿ ನಡೆಯಲಿದೆ ಎಂದು ಅ.ನ. ಕುಂದಾಪೂರ ಹಾಗೂ ಬಿ.ಬಿ. ಪದಕಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಸದ್ಗುರು ಪದಕಿ ಸರ್: ನಾನು ಅವರ ವಿದ್ಯಾರ್ಥಿಯಾಗಿ, ಅವರ ಆಡಳಿತದಲ್ಲಿ ಶಿಕ್ಷಕನಾಗಿ ಆದರ್ಶಗಳನ್ನು ಕಲಿತಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ಬೆಲೆ ಬಂದಿದ್ದೇ ಬಿ.ಬಿ. ಪದಕಿ ಸರ್ ಮಾರ್ಗದರ್ಶನದಿಂದ. ನನಗೆ ನಿಜವಾದ ಸದ್ಗುರು ಪದಕಿ ಸರ್. ಅವರು ಕುಟುಂಬ ಶಾಲೆ ಸಾಮಾಜಿಕ ಜೀವನ ಎಲ್ಲೆಡೆಯೂ ಆದರ್ಶ ಪಾಲಕರು. ಯಾರಿಗೂ ತಮ್ಮಿಂದ ನೋವಾಗಬಾರದು ಎಂಬ ಭಾವದವರಾಗಿದ್ದರು. ಅವರನ್ನು ಕಂಡರೆ ಶಿಸ್ತನ್ನೇ ಕಂಡಂತೆ. ಯಾರನ್ನೂ ಕಾಡಲಿಲ್ಲ. ಎಲ್ಲರಲ್ಲೂ ಅವರ ಆದರ್ಶ ಮಾತ್ರ ಕಾಣುತ್ತಲೆ ಇದೆ ಎಂದು ನಿವೃತ್ತ ದೈಹಿಕ ಶಿಕ್ಷಕರಾದ ಕೆ.ಎಲ್. ದೇಶಪಾಂಡೆ ತಿಳಿಸಿದರು.ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾವೇರಿ: ಪ್ರಸಕ್ತ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ ಹಾಗೂ ನೀಟ್ ಪರೀಕ್ಷೆಯಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಅರಿವು ವಿದ್ಯಾಭ್ಯಾಸ ಸಾಲ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಬಿಎಸ್, ಎಂಜಿನಿಯರಿಂಗ್, ಫಾರ್ಮಸಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್, ಬೌದ್ದ, ಆಂಗ್ಲೋ ಇಂಡಿಯನ್ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲದ ಯೋಜನೆಯಡಿ ಆನ್‌ಲೈನ್ ಮೂಲಕ ಮೇ 23ರೊಳಗಾಗಿ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಹಾರ್ಡ್‌ಕಾಪಿ ಮೇ 31ರೊಳಗಾಗಿ ಹಾವೇರಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ. 08375- 234114 ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಳಿಸಿದ್ದಾರೆ.

Share this article