ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದವರಿಗೆ ನರೇಗಾ ಕೂಲಿಕಾರ್ಮಿಕ ಸಂತಾಪ

KannadaprabhaNewsNetwork |  
Published : Apr 24, 2025, 11:50 PM IST
ಗಜೇಂದ್ರಗಡ ನರೇಗಾ ಕಾರ್ಮಿಕರು ಭಯೋತ್ಪಾದಕ ಕೃತ್ಯದಲ್ಲಿ ಸಾವನ್ನಪ್ಪಿದ ಜನರಿಗೆ ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಿದರು. | Kannada Prabha

ಸಾರಾಂಶ

ಕಾಶ್ಮೀರದ ಪೆಹಲ್ಗಾಮ್‌ದಲ್ಲಿ ಉಗ್ರರ ಗುಂಡಿಗೆ ಮೃತಪಟ್ಟ ಕನ್ನಡಿಗರಾದ ಮಂಜುನಾಥ ರಾವ್, ಭರತ್ ಭೂಷಣ ಮತ್ತು ಮಧುಸೂದನ್ ಹಾಗೂ ಇತರರಿಗೆ ತಾಲೂಕಿನ ಗುಳಗುಳಿ ಗ್ರಾಪಂ ವ್ಯಾಪ್ತಿಯ ಹಿರೇಳಗುಂಡಿ ಗ್ರಾಮದ ನರೇಗಾ ಸಮುದಾಯ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರ್ಮಿಕರು ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಿದರು.

ಗಜೇಂದ್ರಗಡ: ಕಾಶ್ಮೀರದ ಪೆಹಲ್ಗಾಮ್‌ದಲ್ಲಿ ಉಗ್ರರ ಗುಂಡಿಗೆ ಮೃತಪಟ್ಟ ಕನ್ನಡಿಗರಾದ ಮಂಜುನಾಥ ರಾವ್, ಭರತ್ ಭೂಷಣ ಮತ್ತು ಮಧುಸೂದನ್ ಹಾಗೂ ಇತರರಿಗೆ ತಾಲೂಕಿನ ಗುಳಗುಳಿ ಗ್ರಾಪಂ ವ್ಯಾಪ್ತಿಯ ಹಿರೇಳಗುಂಡಿ ಗ್ರಾಮದ ನರೇಗಾ ಸಮುದಾಯ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರ್ಮಿಕರು ಮೌನಾಚರಣೆ ಸಲ್ಲಿಸಿ ಸಂತಾಪ ಸೂಚಿಸಿದರು.

ಮೌನಾಚರಣೆಗೂ ಮುನ್ನ ಮಾತನಾಡಿದ ಕೂಲಿಕಾರ್ಮಿಕ ವೀರೇಶ ಒಲೇಕಾರ, ಕಾಶ್ಮೀರದಲ್ಲಿ ಹಿಂದುಗಳನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡು ಹಾರಿಸಿ ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಇದೊಂದು ಹೇಯ ಕೃತ್ಯ ಇದನ್ನು ನಾವೆಲ್ಲ ಖಂಡಿಸುತ್ತೇವೆ. ಇಂತಹ ದುಷ್ಕ್ರತ್ಯ ಎಸಗಿದವರನ್ನು ದೇವರು ಎಂದಿಗೂ ಕ್ಷಮಿಸಲಾರ. ಅಮಾಯಕರನ್ನು ಬಲಿಪಡೆದ ಉಗ್ರರನ್ನು ಮತ್ತು ಅವರ ಹಿಂದೆ ಇರುವವರನ್ನು ನಮ್ಮ ದೇಶದ ಸೈನಿಕರು ಬಲಿಪಡೆದುಕೊಳ್ಳಬೇಕು. ಉಗ್ರರು ಬಲಿಯಾಗದ ಹೊರತು ಮೃತಪಟ್ಟ ಕುಟುಂಬಸ್ಥರಿಗೆ ಸಮಾಧಾನವಾಗಲಾರದು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಭಯೋತ್ಪಾದನೆ ನಿಗ್ರಹಕ್ಕೆ ದಿಟ್ಟ ಕ್ರಮಕೈಗೊಳ್ಳಲಿ ಎಂದರು.ಗ್ರಾಮ ಪಂಚಾಯತ ಸದಸ್ಯರಾದ ನೀಲವ್ವ ಕುರ್ತಕೋಟಿ ಮಾತನಾಡಿ, ಕೈಲಾಗದ ಹೇಡಿಗಳು ಅಮಾಯಕರನ್ನು ಬಲಿ ಪಡೆದಿದ್ದಾರೆ. ಪಾಕಿಸ್ತಾನದ ಕುತಂತ್ರ ಬುದ್ಧಿ ಏನೆಂಬುದು ಪೆಹಲ್ಗಾಮ್ ಘಟನೆ ಮೂಲಕ ಗೊತ್ತಾಗಿದೆ ಎಂದರು. ಈ ವೇಳೆ ಗ್ರಾಪಂ ಅಧ್ಯಕ್ಷ ಬಸವರಾಜ ಆದಿ, ಸದಸ್ಯ ನಾಗರಾಜ ಪಾಟೀಲ್, ಗ್ರಾಮ ಕಾಯಕಮಿತ್ರ ಮಲ್ಲಮ್ಮ ಮಣ್ಣೂರ, ಗುಳಗುಳಿ ಗ್ರಾಪಂ ಸಿಬ್ಬಂದಿ ಮಲ್ಲಪ್ಪ ಉಪ್ಪಾರ, ಯಮನೂರ ಓಲೇಕಾರ, ನಿಂಗರಾಜ ಗುರಿಕಾರ, ಮರಲಿಂಗಪ್ಪ ಮುತಾರಿ, ಶರಣು ನಾಯಕ, ಬೀಮಪ್ಪ ಶಾಂತಗಿರಿ, ಲಕ್ಷ್ಮೀ ಸುಳ್ಳದ, ಯಶೋದಾ ಲಾಲಗುಂದಿ, ಕಾಳಿಂಗ ಕುಂಕದ, ಮಂಜು ಕಣಕಿ, ಮೌನೇಶ ಬಡಿಗೇರ, ಶಿವಪ್ಪ ಕುಂಕದ, ಶಿವಪ್ಪ ಲಾಲಗುಂದಿ, ಈರಮ್ಮ ವಸ್ತ್ರದ, ಶಾರವ್ವ ಓಲೇಕಾರ, ಕಸ್ತೂರೆವ್ವ ಲಾಲಗುಂದಿ ಸೇರಿ ೪೦೦ಕ್ಕೂ ಅಧಿಕ ನರೇಗಾ ಕೂಲಿಕಾರ್ಮಿಕರು ಇದ್ದರು.ಭಜರಂಗದಳದಿಂದ ಪ್ರತಿಭಟನೆ: "ಜಮ್ಮು ಕಾಶ್ಮೀರ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ನಡೆದ ಭಯೋತ್ಪಾದಕ ಕೃತ್ಯ ಖಂಡಿಸಿ ಇಲ್ಲಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಂಘಟನೆ ವತಿಯಿಂದ ಪ್ರತಿಭಟನಾ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಸಂಜಯ ಜೋಶಿ, ಉಮೇಶ ಚನ್ನುಪಾಟೀಲ, ಸಂತೋಷ ವಸ್ತ್ರದ ಸೇರಿ ಇತರರು ಇದ್ದರು.

ಸಿಪಿಐ(ಎಂ)ದಿಂದ ಪ್ರತಿಭಟನೆ; ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಎಂ.ಎಸ್.ಹಡಪದ, ಬಾಲು ರಾಠೋಡ, ಫಯಾಜ್ ತೋಟದ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!