ಉಗ್ರ ಕೃತ್ಯದ ವಿರುದ್ಧ ಭುಗಿಲೆದ್ದ ಸಾರ್ವಜನಿಕರ ಆಕ್ರೋಶ

KannadaprabhaNewsNetwork |  
Published : Apr 24, 2025, 11:50 PM IST
ಮಹಾಲಿಂಗಪುರದಲ್ಲಿ ಹಿಂದೂ ಸಂಘಟನೆ ಒಕ್ಕೂಟ ಮತ್ತು  ಭಾರತೀಯ ಜನತಾ ಪಕ್ಷ ನೇತೃತ್ವದಲ್ಲಿ ಗುರುವಾರ ಸಂಜೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಖಂಡಿಸಿ ಮಹಾಲಿಂಗಪುರದಲ್ಲಿ ಹಿಂದೂ ಸಂಘಟನೆ ಒಕ್ಕೂಟ ಮತ್ತು ಭಾರತೀಯ ಜನತಾ ಪಕ್ಷ ನೇತೃತ್ವದಲ್ಲಿ ಗುರುವಾರ ಸಂಜೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಾಶ್ಮೀರದ ಪಹಲ್ಗಾಮ್‌ದಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ಖಂಡಿಸಿ ಮಹಾಲಿಂಗಪುರದಲ್ಲಿ ಹಿಂದೂ ಸಂಘಟನೆ ಒಕ್ಕೂಟ ಮತ್ತು ಭಾರತೀಯ ಜನತಾ ಪಕ್ಷ ನೇತೃತ್ವದಲ್ಲಿ ಗುರುವಾರ ಸಂಜೆ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆ ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಗುಂಡಿನ ದಾಳಿಗೆ ರಾಜ್ಯದ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಕಾಶ್ಮೀರದಲ್ಲಿ ಉಗ್ರರು ನಡೆಸಿದ ಹೇಡಿತನದ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಬಯಲಿಗೆಳೆಯಬೇಕು. ಉಗ್ರರ ಕೃತ್ಯ ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯೋಧರು, ಗುಪ್ತಚರ ಸಂಸ್ಥೆಗಳು ಮತ್ತು ರಾಜಕಾರಣಿಗಳು ಇಂತಹ ಘಟನೆ ತಡೆಯಲು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಯುವ ಮುಖಂಡ ಮನೋಹರ ಶಿರೋಳ ಮಾತನಾಡಿ, ನೂರಾರು ಜನ ಪ್ರವಾಸಿಗರು ಇದ್ದ ಜಾಗದಲ್ಲಿ ಭದ್ರತಾ ಸಿಬ್ಬಂದಿ ಇರಲಿಲ್ಲವೆಂದರೆ ಜಮ್ಮು ಕಾಶ್ಮೀರ ರಾಜ್ಯ ಸರಕಾರದ ನಿರ್ಲಕ್ಷ್ಯ ಮತ್ತು ಬೇಹುಗಾರಿಕೆ ವೈಫಲ್ಯವೇ ಎತ್ತಿ ತೋರಿಸುತ್ತದೆ ಎಂದರು.

ಸೈನಿಕ ವಿದ್ಯಾರ್ಥಿ ಅನಿಕೇತ ಮಾಂಗ ಘಟನೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ. ಮೇಣದ ಬತ್ತಿ ಹಚ್ಚಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಶಿವು ಅಂಗಡಿ, ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ,ಚೆನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಕುಲ್ಲೊಳ್ಳಿ,ಪ್ರಕಾಶ ಜಿರಗಾಳ,ಅಶೋಕ ದಿನ್ನಿಮನಿ,ವಿಷ್ಣುಗೌಡ ಪಾಟೀಲ, ಜಿ ಎಸ್ ಗೊಂಬಿ, ಸುವರ್ಣ ಆಸಂಗಿ, ಗುರುಪಾದ ಅಂಬಿ, ಮಾರುತಿ ಕರೂಶಿ, ಶಿವಬಸು ಗೌಂಡಿ, ಶಿವನಗೌಡ ಪಾಟೀಲ, ವೀರೇಶ ಮುಂಡಗನೂರ, ವಿಜಯ ಸಬಕಾಳೆ, ಹಣಮಂತ ಜಮಾದಾರ, ಕುಮಾರ ನಾರಾಯಣಕರ, ಬಸು ಮಡಿವಾಳ, ರವಿ ಗಿರಿಸಾಗರ, ಬಸವರಾಜ ಗಿರಿಸಾಗರ, ಶೇಖರ ಮಗದುಮ್‌, ನಾಗರಾಜ ಭಜಂತ್ರಿ, ಮಹಾಲಿಂಗ ಕಲಾಲ, ಶ್ರೀನಿಧಿ ಕುಲಕರ್ಣಿ, ಚೇತನ ಬಂಡಿವಡ್ಡರ, ರಾಘವೇಂದ್ರ ಶಿರೋಳ, ಆನಂದ ಪವಾರ, ರಾಘು ಗರಘಟಗಿ, ರಾಘು ಪವಾರ, ಸಂತೋಷ್ ಭಜಂತ್ರಿ ಮಹಾಂತೇಶ ಪಾತ್ರೋಟ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಭಾಗವಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ