ಬೇಲೂರಿನಲ್ಲಿ ರಸ್ತೆತಡೆ ಮಾಡುವ ಮೂಲಕ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 11:49 PM ISTUpdated : Apr 24, 2025, 11:50 PM IST
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂ ಪ್ರವಾಸಿಗರ ಹತ್ಯೆ ಖಂಡಿಸಿ ಬೇಲೂರಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪಾಕಿಸ್ತಾನ ಹಾಗು ಕಾಶ್ಮೀರದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವವರ ವಿರುದ್ಧ ಧಿಕ್ಕಾರ ಕೂಗಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಸಂತೋಷ್, ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಅದರಲ್ಲೂ ಹಿಂದೂಗಳ ಹತ್ಯೆ ಮಾಡುವ ಉದ್ದೇಶದಿಂದಲೆ ನಮ್ಮ ರಾಜ್ಯದ ಮೂವರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದಾರೆ. ನರ ಹೇಡಿಗಳಾದ ಕಾಶ್ಮೀರದಲ್ಲಿ ನೆಲೆಸಿರುವ ಮುಸ್ಲಿಂ ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು. ಹಿಂದೂಗಳೆಂದರೆ ಇತ್ತೀಚಿನ ದಿನಗಳಲ್ಲಿ ಒಂದು ಸಮಾಜಕ್ಕೆ ಕೆಂಗಣ್ಣಿಗೆ ಬೀಳುವ ಕೆಲಸ ಆಗಿದ್ದು ಅವರ ಹೆಸರು ಕೇಳಿದರೆ ಆ ಸಮಾಜಕ್ಕೆ ತಡೆಯಲಾಗುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ಮಾರಣಹೋಮ ಖಂಡಿಸಿ ಬಂಜರಂಗದಳ, ಶ್ರೀರಾಮಸೇನೆ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಾಕಿಸ್ತಾನ ಹಾಗು ಕಾಶ್ಮೀರದ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವವರ ವಿರುದ್ಧ ಧಿಕ್ಕಾರ ಕೂಗಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಸಮಾಜಸೇವಕ ಸಂತೋಷ್, ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಅದರಲ್ಲೂ ಹಿಂದೂಗಳ ಹತ್ಯೆ ಮಾಡುವ ಉದ್ದೇಶದಿಂದಲೆ ನಮ್ಮ ರಾಜ್ಯದ ಮೂವರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆಗೈದಿದ್ದಾರೆ. ನರ ಹೇಡಿಗಳಾದ ಕಾಶ್ಮೀರದಲ್ಲಿ ನೆಲೆಸಿರುವ ಮುಸ್ಲಿಂ ಭಯೋತ್ಪಾದಕರನ್ನು ಕಂಡಲ್ಲಿ ಗುಂಡಿಟ್ಟು ಹತ್ಯೆ ಮಾಡಬೇಕು. ಹಿಂದೂಗಳೆಂದರೆ ಇತ್ತೀಚಿನ ದಿನಗಳಲ್ಲಿ ಒಂದು ಸಮಾಜಕ್ಕೆ ಕೆಂಗಣ್ಣಿಗೆ ಬೀಳುವ ಕೆಲಸ ಆಗಿದ್ದು ಅವರ ಹೆಸರು ಕೇಳಿದರೆ ಆ ಸಮಾಜಕ್ಕೆ ತಡೆಯಲಾಗುತ್ತಿಲ್ಲ. ಇವರನ್ನು ಬೆಂಬಲಿಸುವ ನಾಯಕರಿಗೆ ನಾಚಿಕೆಯಾಗಬೇಕು. ನಮ್ಮ ದೇಶದಲ್ಲಿ ಯಾವೊಬ್ಬ ಹಿಂದೂಗಳ ಮೇಲೆ ಈ ರೀತಿ ದೌರ್ಜನ್ಯ, ದಬ್ಬಾಳಿಕೆ, ಹತ್ಯೆಗಳು ನಡೆದರೆ ಅವರ ದಬ್ಬಾಳಿಕೆ ವಿರುದ್ಧ ಪ್ರತಿಯೊಬ್ಬ ಹಿಂದೂ ಒಗ್ಗಟ್ಟಾಗಬೇಕು. ನಮ್ಮ ದೇಶದ ಅನ್ನ ನೀರು ನೀಡುತ್ತಿರುವ ಭಾರತಾಂಬೆಯ ನಿಜವಾದ ಮಕ್ಕಳಾದರೆ ನಾವು ಪ್ರತಿಯೊಬ್ಬರು ಯಾವುದೇ ಜಾತಿ, ಧರ್ಮ, ಮತ ಎನ್ನದೇ ಎಲ್ಲರೂ ಒಗ್ಗಟ್ಟಾಗಿ ನಾವು ಹೋರಾಟ ಮಾಡಬೇಕು. ಕೇವಲ ಒಂದು ಪಕ್ಷ ಒಂದು ಜಾತಿಗೆ ಓಲೈಕೆಗಾಗಿ ಸಂಘಟನೆ ಮಾಡಿಕೊಳ್ಳುವುದಲ್ಲ. ಇಂತಹ ದುಷ್ಕೃತ್ಯ ಎಸಗಿರುವ ಪಾಕಿಸ್ತಾನಿ ನರಹಂತಕರನ್ನು ಇಡೀ ದೇಶದಿಂದ ಹೊರಗಟ್ಟುವ ಕೆಲಸ ಮಾಡಬೇಕು ಎಂದ ಅವರು, ಇಂದು ಕೇವಲ ಸಾಂಕೇತಿಕವಾಗಿ ಬೆಂಕಿ ಹಚ್ಚಿದ್ದೇವೆ. ಮುಂದಿನ ದಿನಗಳಲ್ಲಿ ಇದರ ಬೆಂಕಿ ಕೆನ್ನಾಲಿಗೆ ಎಲ್ಲಿಗೆ ವ್ಯಾಪಿಸುತ್ತಿದೆ ಎಂದು ಕಾದು ನೋಡಿ ಎಂದರು.

ಬಜರಂಗದಳದ ತಾಲೂಕು ಸಂಚಾಲಕ ನಾಗೇಶ್ (ಗುಂಡ) ಮಾತನಾಡಿ, ಹಿಂದೂಗಳನ್ನು ಹಾಗೂ ಒಂದು ಧರ್ಮವನ್ನು ಮಾತ್ರ ಗುರಿಯಾಗಿ ಇಟ್ಟುಕೊಂಡು ದಾಳಿ ಮಾಡುತ್ತಿದ್ದು, ಈ ದಾಳಿಯಲ್ಲಿ ನಮ್ಮ ರಾಜ್ಯದ ಮೂವರು ಹುತಾತ್ಮರಾಗಿದ್ದು ಒಟ್ಟು ೨೬ ಜನರು ಸಾವಿಗೀಡಾಗಿದ್ದು ದುರದೃಷ್ಟಕರ. ಇಡೀ ರಾಜ್ಯದಲ್ಲಿ ಆ ಭಾಗದ ಹೆಸರೇಳಿಕೊಂಡು ಬದುಕುತ್ತಿರುವ ನಾಯಿಗಳನ್ನು ಕೂಡಲೆ ಹೊಡೆದಟ್ಟಬೇಕು. ಪಾಕಿಸ್ಥಾನ ಪರವಾಗಿ ಇಂತಹ ದುಷ್ಕೃತ್ಯಕ್ಕೆ ಸಹಾಯ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕೆಂದು ಆಗ್ರಹಿಸಿದರು.ರಾಷ್ಟೀಯ ಬಿಜೆಪಿ ಪ್ರಕೋಷ್ಟ ಸದಸ್ಯರಾದ ಜೆಕೆ ಕುಮಾರ್ ಮಾತನಾಡಿ ಈ ನರಮೇಧವನ್ನು ಇಡೀ ಮಾನವ ಕುಲ ವಿರೋಧಿಸಬೇಕು.ನಮ್ಮ ಒಳಗಡೆ ಸೇರಿಕೊಂಡು ನಮ್ಮ ಹಿಂದೂಗಳನ್ನೆ ಗುರಿಯಾಗಿಟ್ಟು ಅವರಿಗೆ ಸಹಾಯ ಮಾಡುವ ಕೆಲ ರಾಜಕಾರಣಿಗಳನ್ನು ಮೊದಲು ಅವರನ್ನು ಸುಡಬೇಕು.ಹಿಂದೆ ಬ್ರಿಟೀಷರು ಮಾಡಿದ ದಬ್ಬಾಳಿಕೆ ದೌರ್ಜನ್ಯಗಳನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.ಈಗಾಗಲೇ ನಮ್ಮ ಹಿಂದೂಗಳನ್ನೆ ಒಡೆಯುವಂತಹ ಕೆಲಸ ಮಾಡುತ್ತಿದ್ದು ಅಲ್ಪಸಂಖ್ಯಾತರನ್ನು ಒಲೈಕೆ ಮಾಡಲು ನಮ್ಮನ್ನು ಕಣ್ಣೊರೆಸುವ ಕೆಲಸ ಮಾಡುವ ಮೂಲಕ ಜಾತಿ ಜಾತಿಗಳ ನಡುವೆ ವೈರತ್ವವನ್ನು ಈ ರಾಜ್ಯ ಸರ್ಕಾರ ಮಾಡುತ್ತಿದೆ. ಮುಂದೆ ನಾವೆಲ್ಲರೂ ಒಗ್ಗಟ್ಟಾಗಿ ಈ ರಾಷ್ಟ್ರವನ್ನು ಮಾಡಲು ಪ್ರತಿಯೊಬ್ಬರು ಕಂಕಣ ಬದ್ಧರಾಗಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಪ್ರಮುಖ್ ಪ್ರಸನ್ನ, ಡಾ. ನಾರಾಯಣಸ್ವಾಮಿ, ಮೋಹನ್ ಕುಮಾರ್, ಸುಮಂತ್,ಮಂಜು, ಭರತ್, ತೀರ್ಥಂಕರ್, ದೀಪು,ಸಂಜು, ವೇದಬ್ರಹ್ಮ ಮಂಜುನಾಥ್, ವಿನಯ್, ಧನಪಾಲ್, ಮಹೇಶ್, ಸಂತೋಷ್, ಗಜೇಂದ್ರ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ