ವೈಚಾರಿಕ ಕ್ರಾಂತಿ ವಿಶ್ವಕ್ಕೆ ಮಾದರಿ: ಪ್ರೊ.ಮೀಸೆ

KannadaprabhaNewsNetwork | Published : May 10, 2024 11:49 PM

ಸಾರಾಂಶ

ಜೀವನದ ಮೌಲ್ಯವನ್ನು ನೈತಿಕತೆಯ ನೆಲೆಗಟ್ಟಿನ ಮೇಲೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಚಿಂತನೆಗಳನ್ನು ಸಮಾಜಕ್ಕೆ ನೀಡಿದ್ದು ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟಿದೆ

ಕನ್ನಡಪ್ರಭ ವಾರ್ತೆ ಬೀದರ್‌

12ನೇ ಶತಮಾನದಲ್ಲಿ ನಡೆದ ವೈಚಾರಿಕ ಕ್ರಾಂತಿಯು ವಿಶ್ವಕ್ಕೆ ಮಾದರಿಯಾಗಿದೆ. ಸ್ತ್ರೀ ಸಮಾನತೆ, ಜಾತಿ ರಹಿತ ಸಮಾಜ, ಏಕದೇವೋಪಾಸನೆ, ಕಾಯಕ ದಾಸೋಹ ಸಿದ್ಧಾಂತ, ಆಧಾತ್ಮಿಕ ಮತ್ತು ಸಾಮಾಜಿಕ ಸಮಾನತೆಗಾಗಿ ಬಸವಾದಿ ಶರಣರು ಅನುಭವ ಮಂಟಪ ಎಂಬ ಮಹಾಮನೆಯಲ್ಲಿ ನಿರಂತರ ಅನುಭಾವದ ಚಿಂತನೆ ನಡೆಸಿ ನಡೆಸಿಕೊಟ್ಟಿದ್ದಾರೆ ಎಂದು ಪ್ರೊ. ಉಮಾಕಾಂತ ಮೀಸೆ ಹೇಳಿದರು.

ನಗರದ ಗುಮ್ಮೆ ಕಾಲೋನಿಯ ಜೈ ಹನುಮಾನ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 9.30ಕ್ಕೆ 891ನೇ ಬಸವ ಜಯಂತಿ ಉತ್ಸವ ಕಾರ್ಯಕ್ರಮವನ್ನು ರಾಧಾಕೃಷ್ಣ ಮಹಿಳಾ ಕೋಲಾಟ ಸಂಘ ಹಾಗೂ ಅಕ್ಕನಾಗಮ್ಮ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಜರುಗಿತು. ಈ ವೇಳೆ ಬಸವ ಜಯಂತಿ ಉತ್ಸವ ಕುರಿತು ಅವರು ಮಾತನಾಡಿದರು.

ಜೀವನದ ಮೌಲ್ಯವನ್ನು ನೈತಿಕತೆಯ ನೆಲೆಗಟ್ಟಿನ ಮೇಲೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಚಿಂತನೆಗಳನ್ನು ಸಮಾಜಕ್ಕೆ ನೀಡಿದ್ದು ಇತಿಹಾಸದ ಪುಟದಲ್ಲಿ ಸುವರ್ಣ ಅಕ್ಷರಗಳಿಂದ ಬರೆಯಲ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬೆಳಗ್ಗೆ ಷಟಸ್ಥಲ ಧ್ವಜಾರೋಹಣ, ಗುರು ಬಸವ ಪ್ರಾರ್ಥನೆ ಮತ್ತು ತೊಟ್ಟಿಲು ಕಾರ್ಯಕ್ರಮವನ್ನು ಲಕ್ಷ್ಮಿಬಾಯಿ ಬಿರಾದಾರ, ಗೀತಾ ಪಾಟೀಲ್‌, ಶ್ರೀದೇವಿ ಬಿರಾದಾರ, ಮಹಾದೇವಿ ಬಿರಾದಾರ, ಭಾರತಿ ಬಿರಾದಾರ ಮತ್ತಿತರರು ನಡೆಸಿಕೊಟ್ಟರು.

ಕೋಲಾಟ ಸಂಘದ ಅಧ್ಯಕ್ಷೆ ಗೀತಾ ಪಾಟೀಲ್‌ ಮಾತನಾಡಿ, ಬಸವಣ್ಣನವರ ಜಯಂತಿ ಅಂಗವಾಗಿ ರಾಧಾಕೃಷ್ಣ ಕೋಲಾಟ ಸಂಘದ ಮಹಿಳಾ ಕಲಾವಿದರಿಂದ ಆಕರ್ಷಕ ಕೋಲಾಟ ಪ್ರದರ್ಶನವನ್ನು ಬಸವಣ್ಣವನರ ವಚನಗಳ ಆಧಾರದ ಮೇಲೆ ನಡೆಸಿಕೊಟ್ಟಿರುವುದು ಸಭಿಕರಿಗೆ ಮನರಂಜಿಸುವಂತಿತ್ತು. ಈ ಕೋಲಾಟದ ವೈಶಿಷ್ಟ್ಯತೆ ಬಸವಾದಿ ಶರಣರ ವಚನಗಳನ್ನು ಕೋಲಾಟದ ಮುಖಾಂತರ ಸಮಾಜಕ್ಕೆ ಪ್ರತಿಬಿಂಬಿಸುತ್ತಿರುವುದು ವಿನೂತನವಾದ ಪದ್ಧತಿಯಾಗಿದ್ದು, ಇದು ಮುಂಬರುವ ಪೀಳಿಗೆಗೆ ಮಾದರಿಯಾಗಲು ಸಾಧ್ಯವಾಗಿದೆ ಎಂದು ಕೋಲಾಟ ಸಂಘದ ಅಧ್ಯಕ್ಷೆ ಗೀತಾ ಪಾಟೀಲ್‌ ಹೇಳಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗುರುನಾಥ ಬಿರಾದಾರ, ವೈಷ್ಣೋದೇವಿ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಿರಾದಾರ, ಧೂಳಪ್ಪ ಜೊತೆಪನೋರ, ಧನಶೆಟ್ಟಿ ಮದರಗಾವೆ, ರವಿ ಮೂಲಗೆ, ಬಸವರಾಜ, ಕೋಲಾಟ ಶಿಕ್ಷಕರಾದ ನೂರಂದಪ್ಪ, ಸಿದ್ರಾಮಯ್ಯ ಹಿರೇಮಠ, ಶಿವಕುಮಾರ, ಮಡೆಪ್ಪಾ, ರಾಜಕುಮಾರ, ಗಣಪತಿ, ಶರಣೆ ರೇಖಾ, ಕವಿತಾ ಸ್ವಾಮಿ, ಜ್ಯೋತಿ ನಿನ್ನೆ, ಮಲ್ಲಮ್ಮಾ ಬಿರಾದಾರ, ವಿಜಯಲಕ್ಷ್ಮಿ ಮೂಲಗೆ, ಸಂಗೀತಾ ಪಾಟೀಲ್‌, ಕಲ್ಪನಾ ಅಬ್ಯಂದೆ, ಕಾವ್ಯ ಬಿರಾದಾರ, ಸಂಗೀತಾ ದಾನಿ, ಶಶಿಕಲಾ ಗಾದಗಿ, ಮಹಾನಂದಾ ಕೋಟೆ ಮುಂತಾದವರು ಉಪಸ್ಥಿತರಿದ್ದರು.

Share this article