- ಕಡಬೂರಿನಲ್ಲಿ ಶಿವ, ಗಣಪತಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೂರ್ತಿಪೂಜೆ ಭಾರತೀಯ ಸಂಸ್ಕೃತಿ ಬಹಳ ವರ್ಷಗಳಿಂದ ನಡೆಯುತ್ತಿದೆ ಇದೇ ಪರಂಪರೆ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಕಡಬೂರು ಗ್ರಾಮದಲ್ಲಿ ಶಿವ ಮತ್ತು ಗಣಪತಿ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ದೇಗುಲ ಉದ್ಘಾಟನೆ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ದೇವರು ಕಣ್ಣಿಗೆ ಕಾಣಿಸಿಲ್ಲ. ದೇವರ ಅನುಭವಿಸಬೇಕು. ಭಗವಂತನ ಸೃಷ್ಟಿ ಹೊರತುಪಡಿಸಿ ಮನುಷ್ಯ ಬದುಕಲು ಅಸಾಧ್ಯ. ಭಗವಂತ ಸ್ಮರಣೆ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ ಆಗುತ್ತಿದೆ ಎಂದರು.
ಕಡಬೂರು ಚಿಕ್ಕ ಗ್ರಾಮವಾದರೂ ಇಲ್ಲಿರುವವರೆಲ್ಲರೂ ಕೃಷಿಕರೇ ಆಗಿದ್ದಾರೆ. ಅಲ್ಲದೆ ಎಲ್ಲರೂ ಕೃಷಿ ಮಾಡುತ್ತಿದ್ದಾರೆ ಎಂದರೆ ಕಡಬೂರು ಗ್ರಾಮಸ್ಥರನ್ನು ಮೆಚ್ಚಲೇಬೇಕು ಎಂದರು.
ಕಡಬೂರು ಗ್ರಾಮದ ಹೆಸರು. ಕಡಬು ಗಣೇಶನಿಗೆ ಪ್ರಿಯವಾದ ಆಹಾರ. ಗಣೇಶನಿಗೆ ಪ್ರಿಯವಾದ ಊರಿನಲ್ಲಿ (ಕಡಬೂರು) ಗಣಪತಿ ದೇವಾಲಯ ನಿರ್ಮಿಸಿದ್ದು ಸೂಕ್ತ ಎನಿಸುತ್ತಿದೆ ಎಂದರು.
ಕಡಬೂರು ಕಾಡಂಚಿನ ಗ್ರಾಮವಾಗಿದೆ. ಗ್ರಾಮಸ್ಥರ ಫಲವಾಗಿ ಶಿವ ಮತ್ತು ಗಣಪತಿ ದೇವಸ್ಥಾನ ಸುಂದರವಾಗಿ ಕಟ್ಟಿದ್ದಾರೆ. ಶಿವ ಮತ್ತು ಗಣಪತಿ ಕಾಲ ಕಾಲಕ್ಕೆ ಮಳೆ, ಬೆಳೆ ಬರಲಿ ಎಂದು ಅಭಯ ನೀಡಲಿ ಎಂದರು.
ಸಿದ್ದಗಂಗಾ ಮಠಾಧೀಶ ಸಿದ್ದಲಿಂಗ ಮಹಾಸ್ವಾಮೀಜಿ, ಪಡಗೂರು ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ, ಮಾದಾಪಟ್ಟಣ, ಹರವೆ ಶ್ರೀಗಳು ಸೇರಿದಂತೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಜನರಿದ್ದರು.
೨೭ಜಿಪಿಟಿ5
ಗುಂಡ್ಲುಪೇಟೆ ತಾಲೂಕಿನ ಕಡಬೂರಲ್ಲಿ ಶಿವ ಮತ್ತು ಗಣಪತಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿದರು.