ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಗುರುಭವನದಲ್ಲಿ ಭಾನುವಾರ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ವಚನ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ, ಸ್ಪೂರ್ತಿ ಪ್ರಕಾಶನ ತೆಲಿಗಿ, ನಿರ್ವರ್ಣ ಆರ್ಟ್ ಗ್ಯಾಲರಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃತಿಗಳ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ, ಕೃತಿಗಳ ಲೋಕಾರ್ಪಣೆ ಮಾಡಿ ಮಾತನಾಡಿ, ಏನನ್ನಾದರೂ ಸಾಧನೆ ಮಾಡಿ, ಎಷ್ಟೇ ಸಂಪತ್ತುಗಳಿಸಿರಿ. ಆದರೆ ತಾಯಿಯ ಪ್ರೀತಿ ಒಮ್ಮೆ ಕಳೆದುಕೊಂಡರೆ ಮತ್ತೆ ಗಳಿಸಲು ಸಾಧ್ಯವಿಲ್ಲ. ಎಲ್ಲಿ ತಾಯಿ ಸಂತುಷ್ಟಭರಿತಳಾಗಿರುತ್ತಾಳೋ ಆ ಸಮಾಜ, ದೇಶವೂ ಸಂತುಷ್ಟವಾಗಿರುತ್ತದೆ ಎಂದರು.
ಈ ಕೃತಿಯಲ್ಲಿ ಯಾವುದೇ ದ್ವೇಷದ ನುಡಿಗಳಲ್ಲಿ, ತಾಯಿಯನ್ನು ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳಬಹುದಾಗಿತ್ತು ಎಂಬ ಪಶ್ಚಾತ್ತಾಪ, ತಾಯಿಯ ಬಗ್ಗೆ ಹೆಮ್ಮೆ, ಸಂತಸದ ನುಡಿಗಳೂ ಇವೆ. 140 ಲೇಖಕರು ತಾಯಿಯ ಮಮತೆಯ ಒಡಲಾಟಗಳನ್ನು ಗ್ರಹಿಸಿದ್ದಾರೆ. ನೋವು ಸಂಕಟಗಳನ್ನು, ಸಂತಸದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದೊಂದು ಸಂಗ್ರಹಯೋಗ್ಯವಾದ ಕೃತಿಯಾಗಿದೆ ಎಂದು ಹೇಳಿದರು.ಚುಟುಕು ಸಾಹಿತ್ಯ ಪರಿಷತ್ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಾ ಹಾಲಪ್ಪಗೌಡರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಹೆತ್ತವರು ಎಂದ ಕೂಡಲೇ ಹೃದಯ ತುಂಬಿ ಬರುತ್ತದೆ ಕೃತಿ ಓದುವಾಗ ನನಗೂ ನನ್ನ ತಾಯಿಯ ನೆನಪಾಯಿತು. ನನಗೆ ಸಾಹಿತ್ಯದ ಮೇಲೆ ಒಲವು ಮೂಡಲು ತಾಯಿಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಹರಿಹರದ ಲಲಿತಮ್ಮ ಚಂದ್ರಶೇಖರ, ದಾವಣಗೆರೆಯ ಜಯಮ್ಮ ನೀಲಗುಂದ, ಸಾಸ್ವಿಹಳ್ಳಿಯ ಕೆ.ಪಿ. ದೇವೇಂದ್ರಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ಡಿ.ವಿ.ಬಡಿಗೇರ್, ಶಾಂತಯ್ಯ ಪರಡಿಮಠ, ಚಂದ್ರಶೇಖರ ಸಂಗ, ರಾಘವೇಂದ್ರ ನಾಯಕ, ಅತಿಕ್ ವುಲ್ಲಾ, ಆರ್.ವೈ.ಕೀರ್ತನಾ, ಪ್ರದೀಪ್, ಹರಜತ್ ಅಲಿ, ಮಮತಾ, ರಿಯಾಜ್ ಅಹಮದ್, ಡಾ.ಸಂತೋಷ್ ಕುಲಕರ್ಣಿ, ಪ್ರವೀಣ್ ಕುಮಾರ್ ಅವರ ಕಲಾಕೃತಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ರೇವಣಸಿದ್ದಪ್ಪ, ಸೌಮ್ಯ ಸತೀಶ್ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಪ್ರಕಾಶ ಬೂಸ್ನೂರು ಸ್ವಾಗತಿಸಿದರು. ಸುನಿತಾ ಪ್ರಕಾಶ್, ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಭಾಮಾ ಮಂಜುನಾಥ ವಂದಿಸಿದರು.