ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಸರಾಳು ಗ್ರಾಪಂ ಮಾಜಿ ಅಧ್ಯಕ್ಷ ಮುದ್ದನಘಟ್ಟ ಮಹಾಲಿಂಗೇಗೌಡರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಎಂ.ಎಂ.ಫೌಂಡೇಷನ್ ವತಿಯಿಂದ ಸಾರ್ವಜನಿಕರಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಒದಗಿಸಿ, 2 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿತರಣೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಇಂದಿನ ದಿನಗಳಲ್ಲಿ ಯಾವುದೇ ಮನುಷ್ಯನಲ್ಲಿ ಕೋಟ್ಯಾಂತರ ರು. ದುಡ್ಡಿದ್ದರೂ ಆರೋಗ್ಯವಿಲ್ಲದಿದ್ದರೆ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಈ ಭೂಮಿ ಮೇಲೆ ಕಾಯಿಲೆ ಇಲ್ಲದವರಿಗೆ ಕೋಟಿ ದುಡ್ಡು ಇದ್ದಂತೆ. ಆರೋಗ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.ಜಗತ್ತಿನಲ್ಲಿ ಜನರಿಗೆ ಎಲ್ಲವೂ ಬೇಕು ಎನಿಸುತ್ತದೆ. ಆದರೆ ಆರೋಗ್ಯ ಕಳೆದುಕೊಂಡರೆ ಯಾವುದೂ ಬೇಡ ಎನ್ನುತ್ತಾರೆ. ಆರೋಗ್ಯ ಸೇವೆಗಾಗಿ ಮಹಾಲಿಂಗೇಗೌಡರು ಆ್ಯಂಬುಲೆನ್ಸ್ ಸೇವೆ ಒದಗಿಸುವುದು ಉತ್ತಮವಾಗಿದೆ. ದುಡಿದ ದುಡ್ಡಲ್ಲಿ ಸ್ವಲ್ಪ ಭಾಗ ಸೇವೆ ಮಾಡುತ್ತಿರುವ ಅವರು ಇನ್ನೂ ಎತ್ತರಕ್ಕೆ ಬೆಳೆದು ಇನ್ನಷ್ಟು ಸೇವೆ ಮಾಡಲಿ ಎಂದು ಹಾರೈಸಿದರು.
ಮಹಾಲಿಂಗೇಗೌಡರು ಶ್ರೀ ಮಠದ ಸದ್ಭಕ್ತ. ಬಹಳ ವರ್ಷಗಳಿಂದ ದುಡಿದ ಆದಾಯದಲ್ಲಿ ಸಮಾಜ ಸೇವೆಗೆ ಮುಡಿಪಾಗಿಟ್ಟವರು. ಅವರಿಗೆ ಕಾಲಭೈರವೇಶ್ವರ ಸ್ವಾಮಿ ಆಶೀರ್ವಾದವಿರಲಿ. ಯಾವುದೇ ಕಾರ್ಯಕ್ರಮಗಳನ್ನು ಶ್ರೀಗಳನ್ನು ಬಿಟ್ಟು ಮಾಡಿಲ್ಲ. ಸನ್ಯಾಸಿಗಳು, ತಜ್ಞರು, ಜನರ ಮಧ್ಯದಲ್ಲಿ ಇಂತಹ ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ. ಸಮಾಜ ಸೇವಾ ತುಡಿತವಿರುವವರು, ಕೈ ತುಂಬ ಕೊಟ್ಟಷ್ಟು ಮತ್ತಷ್ಟು ಒದಗಿ ಬರಲಿ ಎಂದು ಹೇಳಿದರು.