ಸದೃಢ ವ್ಯಕ್ತಿತ್ವ ರೂಪುಗೊಂಡರೆ ದೇಶದ ಭವಿಷ್ಯ ಉಜ್ವಲ-ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jan 12, 2026, 02:15 AM IST
11ಎಚ್‌ವಿಆರ್4- | Kannada Prabha

ಸಾರಾಂಶ

ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಸಂಸದರ ಕ್ರೀಡಾ ಮಹೋತ್ಸವದಲ್ಲಿ ವಿವಿಧ ಸ್ಪರ್ಧೆಗಳನ್ನು ಆಡುವ ಮೂಲಕ ಕ್ರೀಡಾಪಟುಗಳು ಗಮನಸೆಳೆದರು.

ಹಾವೇರಿ: ದೇಶದ ಯುವ ಶಕ್ತಿಯ ಸದ್ಬಳಕೆ ಮಾಡಿಕೊಂಡು ಅವರ ಇಚ್ಛಾನುಸಾರ ಕೆಲಸ ಮಾಡಲು ಅವಕಾಶ ಕೊಡಬೇಕು. ಅದಕ್ಕೆ ಸದೃಢ ವ್ಯಕ್ತಿತ್ವ ರೂಪುಗೊಂಡರೆ ನಮ್ಮ ದೇಶದ ಭವಿಷ್ಯ ನಿಶ್ಚಿತವಾಗಿಯೂ ಉಜ್ವಲವಾಗುತ್ತದೆ ಎಂದು ಪಧಾನಿ ನರೇಂದ್ರ ಮೋದಿಯವರು ಯುವ ಶಕ್ತಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಲು ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮ ರೂಪಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿರುವ ಸಂಸದರ ಕ್ರೀಡಾ ಮಹೋತ್ಸವವನ್ನು ನಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕುಗಳಲ್ಲಿ ಏರ್ಪಡಿಸಲಾಗುತ್ತಿದೆ. ನಮ್ಮ ಭಾರತ ಬಹಳ ದೊಡ್ಡ ಜನಸಂಖ್ಯೆ ಇರುವ ದೇಶ ಇಡಿ ಜಗತ್ತಿಗೆ ಹೋಲಿಸಿದರೆ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶ. ಶೇ 60ರಷ್ಟು ಜನರು 45 ವರ್ಷ ಒಳಗಿನ ಜನಸಂಖ್ಯೆ ಇದೆ. 18ರಿಂದ 25 ವರ್ಷದೊಳಗಿನ ಜನಸಂಖ್ಯೆ ಶೇ 30ರಷ್ಟಿದೆ. ಅಮೆರಿಕಾ, ಯುರೋಪ್‌ನಲ್ಲಿ ಐವತ್ತು ವರ್ಷ ಮೇಲಿನವರೇ ಹೆಚ್ಚಿದ್ದಾರೆ. ಜಪಾನಲ್ಲಿ 70 ವರ್ಷದ ಮೇಲಿನವರು ಹೆಚ್ಚಿದ್ದಾರೆ. ನಮ್ಮ ದೇಶದ ಯುವ ಶಕ್ತಿಯ ಸದ್ಬಳಕೆ ಮಾಡಿಕೊಳ್ಳಬೇಕು. ಅವರ ಇಚ್ಛಾನುಸಾರ ಕೆಲಸ ಮಾಡಲು ಅವಕಾಶ ಕೊಡಬೇಕು. ಅದಕ್ಕೆ ಸದೃಢ ಮನಸ್ಸು ಮತ್ತು ದೇಹ ಇರಬೇಕು. ಆ ಸದೃಢ ವ್ಯಕ್ತಿತ್ವ ರೂಪಗೊಂಡರೆ ನಮ್ಮ ದೇಶದ ಭವಿಷ್ಯ ನಿಶ್ಚಿತವಾಗಿಯೂ ಉಜ್ವಲವಾಗುತ್ತದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ದೇಶವನ್ನು ಬಹಳಷ್ಟು ಮುಂದುವರೆಸಿದ್ದಾರೆ. ಬಡತನ ನಿರ್ಮೂಲನೆ ಸಾಧ್ಯವಿಲ್ಲ ಅಂತ ಹೇಳಿದ್ದರು. ಆದರೆ, ನಮ್ಮ ಪ್ರಧಾನಿ 25 ಕೋಟಿ ಜನರನ್ನು ಬಡತನದಿಂದ ನಿರ್ಮೂಲನೆ ಮಾಡಿದ್ದಾರೆ. ಕೈಗೆ ಕೆಲಸ, ವಿದ್ಯಾಭ್ಯಾಸ, ಗ್ಯಾಸ್, ಮನೆ ಎಲ್ಲವನ್ನೂ ನಿಡಿದ್ದಾರೆ. ಕೋವಿಡ್ ನಂತರ ಎಲ್ಲ ದೇಶಗಳು ಚೇತರಿಸಿಕೊಂಡಿಲ್ಲ. ಭಾರತ ಶೇ 7.5 ರಷ್ಟು ಆರ್ಥಿಕ ಬೆಳವಣಿಗೆ ಆಗುತ್ತಿದೆ. ಅಮೆರಿಕಾ ಶೇ 2ರಷ್ಟು, ಜಪಾನ್ ಶೇ 4ರಷ್ಟು ಬೆಳವಣಿಗೆ ಆಗುತ್ತಿವೆ. ನಮ್ಮ ದೇಶದ ಆರ್ಥಿಕ ಬೆಳವಣಿಗೆಯಿಂದ ತಲಾವಾರು ಆದಾಯ ಹೆಚ್ಚಳ ಆಗುತ್ತಿದೆ. ಪ್ರಧಾನಿಯವರು ಶಿಕ್ಷಣ ಕ್ಷೇತದಲ್ಲಿ ಎನ್‌ಇಪಿ ತಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ನೀಡುತ್ತಿದ್ದಾರೆ. ನಮ್ಮ ದೇಶದ ಸುರಕ್ಷತೆಗೆ ಹೆಚ್ಚು ಹಣ ನೀಡುತ್ತಿದ್ದಾರೆ. ನಮ್ಮ ಸೈನ್ಯವನ್ನು ದೊಡ್ಡ ಪ್ರಮಾಣದಲ್ಲಿ ಸಿದ್ಧ ಮಾಡಿದ್ದಾರೆ ಎಂದು ಹೇಳಿದರು.

ಕ್ರೀಡೆಗೂ ಆದ್ಯತೆ

ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡೆಗೂ ಆದ್ಯತೆ ನೀಡಿದ್ದಾರೆ. ಮೊದಲು ಫಿಟ್ ಇಂಡಿಯಾ, ನಂತರ ಖೇಲೋ ಇಂಡಿಯಾ ಮಾಡಿದರು. ಓಲಿಂಪಿಕ್ಸ್ ಬಂದಾಗ ಜೀತೋ ಇಂಡಿಯಾ ಅಂತ ಹೇಳಿದರು. ಅದರ ಪರಿಣಾಮ ಓಲಿಂಪಿಕ್ಸ್‌ನಲ್ಲಿ ಭಾರತ ಮೋದಿಯವರ ಅವಧಿಯಲ್ಲಿ ಅತಿ ಹೆಚ್ಚು ಮೆಡಲ್ ಪಡೆಯುವಂತಾಯಿತು. ಪ್ಯಾರಾ ಓಲಿಂಪಿಕ್ಸ್‌ನಲ್ಲಿ ಭಾರತ ಅತಿ ಹೆಚ್ಚು ಮೆಡಲ್ ಪಡೆದಿದೆ. ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕು ಅಂತ ಸಂಸದರ ಕ್ರೀಡಾ ಮಹೋತ್ಸವ ಆಯೋಜನೆ ಮಾಡಿದ್ದಾರೆ. ಯಾರು ಸೋಲಲು ಹೆದರುವುದಿಲ್ಲವೋ ಅವನು ಮಾತ್ರ ಗೆಲ್ಲುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ, ಲಿಂಗರಾಜ ಚಪ್ಪರದಹಳ್ಳಿ, ಎಸ್ಪಿ ಯಶೋದಾ ವಂಟಗೋಡಿ, ಭರತ್‌ ಬೊಮ್ಮಾಯಿ, ಅಪರ ಜಿಲ್ಲಾಧಿಕಾರಿ ನಾಗರಾಜ ಎಲ್‌. ಇತರರು ಹಾಜರಿದ್ದರು.

ಪ್ರತಿಯೊಬ್ಬ ಮನುಷ್ಯನ ಆರೋಗ್ಯ ಬಹಳ ಮುಖ್ಯವಾಗಿರುವಂತಹದ್ದು. ಮನುಷ್ಯ ಸದೃಢವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂಪತ್ತು ಗಳಿಸಬಹುದು. ಹಾಗಾಗಿ ಆರೋಗ್ಯ ಸಂಪತ್ತು ಬಹಳ ಮುಖ್ಯ. ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು. ಕ್ರೀಡೆ, ವ್ಯಾಯಾಮ ನಿರಂತರವಾಗಿ ಮಾಡುವ ಮೂಲಕ ಜೀವನದ ಅಂಗವಾಗಿ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ