ಪುತ್ತೂರು: ಗ್ರಾಮಾಂತರ ಮತ್ತು ನಗರ ಬಿಜೆಪಿ ಸಮಿತಿಯನ್ನು ಒಗ್ಗೂಡಿಸಿ ನನಗೆ ಅಧ್ಯಕ್ಷ ಸ್ಥಾನ ವಹಿಸಿಕೊಟ್ಟಲ್ಲಿ ನಾನು ನಾಳೆಯೇ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಮಾತ್ರವಲ್ಲ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.ಅವರು ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಕುರಿತ ಸುದ್ದಿ ಗೋಷ್ಠಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ಪಕ್ಷದಲ್ಲಿ ಜವಾಬ್ದಾರಿ ಕೊಡುವ ವಿಚಾರದಲ್ಲಿ ರಾಜ್ಯ ನಾಯಕರು ಈ ಹಿಂದೆ ಮಾತುಕತೆ ನಡೆಸಿ, ನನಗೆ ಜವಾಬ್ದಾರಿ ಕೊಡಬೇಕೆಂಬ ಸೂಚನೆಯನ್ನು ಜಿಲ್ಲಾ ನಾಯಕರಿಗೆ ನೀಡಿದ್ದಾರೆ ಎಂದರು.
ಕಳೆದ ೩೫ ವರ್ಷಗಳಿಂದ ಸಾಮಾಜಿಕ ಬದ್ಧತೆಯೊಂದಿಗೆ ನಾನು ಕೆಲಸ ಮಾಡಿದ್ದೇನೆ. ಯಾವತ್ತೂ ಅಧಿಕಾರ ಅಥವಾ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿಲ್ಲ. ಅದಕ್ಕಾಗಿ ಹೋರಾಟ ಮಾಡುತ್ತಿರುವುದು ಹೌದಾದರೆ ನನಗೆ ಅನೇಕ ನಾಯಕರ ಸಂಪರ್ಕವಿದೆ. ದೆಹಲಿಯಲ್ಲಿರುವ ನಾಯಕರ ಜೊತೆಗೆ ನಿರಂತರ ಸಂಪರ್ಕದ ಜೊತೆಗೆ ಏನೂ ಬೇಕಾದರೂ ಮಾಡಬಹುದಿತ್ತು. ಆದರೆ ವ್ಯವಸ್ಥೆಯ ಹೊರಗೆ ಸರಿಯಾಗಿ ಇರಬೇಕೆಂಬ ದೃಷ್ಟಿಕೋನದಿಂದ ಯಾವತ್ತು ಕೂಡ ಅಧಿಕಾರ ಮತ್ತು ಸ್ಥಾನ ಮಾನಕ್ಕಾಗಿ ಹೋರಾಟ ಮಾಡಿದ ಯಾವುದೇ ಸಂದರ್ಭವಿಲ್ಲ. ಆದರೆ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಅಪಾದನೆ ಮಾಡುತ್ತಿರುವುದಕ್ಕೆ ನಮಗೆನೂ ಉತ್ತರ ಕೊಡಲಾಗುವುದಿಲ್ಲ. ಶ್ರೀನಿವಾಸನೇ ಉತ್ತರ ಕೊಡಬೇಕಷ್ಟೆ ಎಂದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಭಾವನೆಗೆ ಬೆಲೆ ನೀಡಿಲ್ಲ. ಮಾತ್ರವಲ್ಲದೆ ಸಾಮಾನ್ಯ ಕಾರ್ಯಕರ್ತನಿಗೆ ಸೂಕ್ತವಾದ ಸ್ಥಾನಮಾನ ಕೊಡಲಿಲ್ಲ. ಆಗಿರುವ ಎಲ್ಲಾ ಜನಪ್ರತಿನಿಧಿಗಳು ಕೂಡಾ ಕಾರ್ಯಕರ್ತನ ಮಾನಸಿಕತೆ ಅರಿತುಕೊಂಡು ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಕಾರ್ಯಕರ್ತರ ಅಪೇಕ್ಷೆಗೆ ಅನುಗುಣವಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದು, ಇದೀಗ ಅದೇ ಮುಂದುವರಿದ ಭಾಗವಾಗಿದೆ ಎಂದರು.
ಕಾರ್ಯಕರ್ತರ ಭಾವನೆಗೆ ಸ್ಪಂಧಿಸುವುದು ನಾಯಕರ ಕರ್ತವ್ಯ. ಎಲ್ಲಿಯೋ ಸಣ್ಣ ವ್ಯವಸ್ಥೆಯ ತಪ್ಪಿನಿಂದಾಗಿ ಬೇರೆ ಬೇರೆ ವ್ಯವಸ್ಥೆಗಳು ನಡೆದಿದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆಗಳನ್ನು ಕೊಡಬೇಕು ಎಂದ ಅವರು ನಮ್ಮ ಪರಿವಾರದ ಜೊತೆಗೆ ಗುರುತಿಸಿಕೊಂಡ ಕಾರ್ಯಕರ್ತರಿಗೆ ಒಂದಾಗಬೇಕೆಂಬ ನಿಟ್ಟಿನಲ್ಲಿ ಪಕ್ಷದಲ್ಲಿ ಅವರಿಗೆ ಜವಾಬ್ದಾರಿಯನ್ನು ಕೊಟ್ಟಿರುವುದು ಆದರೆ ಇನ್ನೂ ಕಾರ್ಯಕರ್ತರ ಮಾತಿಗೆ ಸ್ಪಂದನೆ ಸಿಗುತ್ತಿಲ್ಲ ಎಂದರು.ಸಾಮಾಜಿಕ ಜಾಲತಾಣದಲ್ಲಿ ಅರುಣ್ ಕುಮಾರ್ ಪುತ್ತಿಲ ೨೦೨೮ ವಿಧಾನಸಭೆ ಚುನಾವಣೆಯ ಅಭಿಯಾನಕ್ಕೆ ಸಂಬಂಧಿಸಿ ಬಂದಿರುವ ಪೋಸ್ಟ್ ಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುತ್ತಿಲ ಅವರು ಕಾರ್ಯಕರ್ತರು ಅಪೇಕ್ಷೆ ಮಾಡಿದರೆ ಪಕ್ಷದಲ್ಲಿ ಯಾವುದೇ ಬೆಳವಣಿಗೆ ಆಗಲು ಸಾಧ್ಯ ಅನ್ನುವಂತಹದ್ದನ್ನು ಅನೇಕ ಸಂದರ್ಭದಲ್ಲಿ ನೋಡಿದ್ದೇವೆ. ಅದಕ್ಕೆ ಜಾಸ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.