ಕನ್ನಡಪ್ರಭ ವಾರ್ತೆ ಬೆಟ್ಟದಪುರಕಂಪನಿಗಳು ತಂಬಾಕಿಗೆ ಸೂಕ್ತ ಬೆಲೆ ನೀಡಲು ಸಾಧ್ಯವಾಗಲಿಲ್ಲ ಎಂದರೆ ಮಂಡಳಿಯೇ ಖರೀದಿಸಲಿ ಮತ್ತು ಸೂಕ್ತ ಬೆಲೆ ನೀಡಲಿ ಇಲ್ಲದಿದ್ದರೆ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಎಂದು ತಂಬಾಕು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಸಮೀಪದ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತ ಸಂಘಟನೆ ವತಿಯಿಂದ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರೈತರನ್ನು ಹೊರಗಿಟ್ಟು ಬೆಲೆ ನಿಗದಿ ಮಾಡುವುದು ನಿಲ್ಲಬೇಕು. ಕನ್ನಡ ಭಾಷೆ ಬರುವವರಿಗೆ ತಂಬಾಕು ಮಂಡಳಿ ಅಧಿಕಾರಿಗಳಾಗಿ ನೇಮಕ ಮಾಡಬೇಕು. ತಂಬಾಕು ರೈತರ ಮೃತರ ನಿಧಿ 5 ಲಕ್ಷ ನೀಡಬೇಕು. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಸಾಲ ಸೌಲಭ್ಯ ನೀಡಬೇಕು. ಕಾರ್ಡ್ ದಾರರಿಗೆ ಪರವಾನಿಗೆ ಮಾಡಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ರಾಜ್ಯದಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ತಂಬಾಕು ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಆದರೆ ಅಧಿಕಾರಿಗಳು ಮಾತ್ರ ನಿರ್ಲಕ್ಷತನದಿಂದ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಯೋಚನೆ ಮಾಡಬೇಕು. ಅನ್ಯಾಯಕ್ಕೆ ಒಳಗಾಗುತ್ತಿರುವ ಬೆಳೆಗಾರರ ಪರವಾಗಿ ನಿಲ್ಲಬೇಕು ಎಂದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ತಂಬಾಕು ಬೆಳೆಗಾರರ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತಂದು ಅನ್ಯಾಯಕೊಳ್ಳಗಾಗಿರುವ ರೈತರಿಗೆ ನ್ಯಾಯ ಸಿಗುವಂತೆ ಶ್ರಮಿಸಿತ್ತೇನೆ. ಸ್ಥಳೀಯವಾಗಿ ಹರಾಜು ಮಾರುಕಟ್ಟೆಯಲ್ಲಿ ಮೂಲಭೂತ ಸೌಲಭ್ಯಕ್ಕೆ ಕ್ರಮವಹಿಸುತ್ತೇನೆ ಎಂದರು.ಮಾಜಿ ಶಾಸಕ ಎಚ್.ಸಿ. ಬಸವರಾಜ್, ತಂಬಾಕು ಮಂಡಳಿ ರಾಜ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್, ತಾಲೂಕು ವಲಯ ವ್ಯವಸ್ಥಾಪಕರಾದ ಮಾರಣ್ಣ, ಗೋಪಾಲ,ಮಾಜಿ ಸದಸ್ಯ ವಿಕ್ರಂ ರಾಜ್ ಗೌಡ, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ, ರೈತ ಸಂಘದ ಅಧ್ಯಕ್ಷ ಸ್ವಾಮೇಗೌಡ, ಯುವ ಅಧ್ಯಕ್ಷ ಮಹದೇವ್, ಬಿಜೆಪಿ ಅಧ್ಯಕ್ಷ ರಾಜೇಗೌಡ, ಸತೀಶ್, ರೈತ ಮುಖಂಡರಾದ ಕಾಮರಾಜ್, ಪ್ರಕಾಶ್ ರಾಜ್ ಅರಸ್, ದಶರಥ, ಸುರೇಶ, ರಫೀಕ್, ವಿಜಯ ದೇವರಾಜ್ ಅರಸ್, ಮುಖಂಡ ಆರ್. ತುಂಗಾ ಶ್ರೀನಿವಾಸ್, ಚೆಲುವಯ್ಯ, ಮಂಜುನಾಥ್ ಗೌಡ, ದೇವರಾಜ್ ಇದ್ದರು.--------------