ಕನ್ನಡಪ್ರಭ ವಾರ್ತೆ ಬೀಳಗಿ
ತಾಲೂಕಿನ ಬಾಡಗಿ ಗ್ರಾಮದ ಬಕ್ಕೇಶ್ವರ ಮಠದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ, ತಾಲೂಕು ಘಟಕ, ಮಹಿಳಾ ತಾಲೂಕು ಘಟಕ, ವಲಯ ಘಟಕ ಬಾಡಗಿ ಹಾಗೂ ಬಾಡಗಿ ಗ್ರಾಮಸ್ಥರ ಸಹಯೋಗದಲ್ಲಿ ಜರುಗಿದ ಬೀಳಗಿ ತಾಲೂಕು ಪ್ರಥಮ ಕನ್ನಡ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ತಹಸೀಲ್ದಾರ್ ವಿನೋದ ಹತ್ತಳ್ಳಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಲಿಖಿತವಾಗಿರದೇ ಮೊದಲಿನಿಂದಲೂ ಬಾಯಿಂದ ಬಾಯಿಗೆ ಬಂದದ್ದು ಜಾನಪದ. ಜನಪದ ಸಾಹಿತ್ಯ ಪೋಷಿಸದಿದ್ದರೆ ಕನ್ನಡ ಭಾಷೆಗೆ ಕುತ್ತು ಬರುವುದರಿಂದ ಜಾನಪದ ಸಾಹಿತ್ಯವನ್ನು ಪೋಷಿಸಬೇಕು ಎಂದು ಸಲಹೆ ನೀಡಿದರು.ರೈತ ಮುಖಂಡರಾದ ಎಸ್.ಟಿ. ಪಾಟೀಲ ಸಾಹಿತಿ ಮೇಲಪ್ಪ ಕೆಂಪಲಿಂಗಣ್ಣವರ ರಚಿತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ. ಎಂ. ಸಾವಕಾರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜಾನಪದದ ಸುವಾಸನೆ ಹರಡುತ್ತಿರುವುದು ಶ್ಲಾಘನೀಯ ಎಂದರು.
ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸಮಾಜದ ಮಧ್ಯದಲ್ಲಿ ಸಂಸ್ಕಾರದ ನಡೆ ನುಡಿ ತಿಳಿಸಿ ಕೊಡುವುದೇ ಜಾನಪದ ಸಾಹಿತ್ಯ. ಅಶ್ಲೀಲ ಪದಗಳಿಂದ ತುಂಬಿದ ವೇದಿಕೆಗಳು ಹೆಚ್ಚಾಗುತ್ತಿವೆ. ಕಾಮಿಡಿ ಕಿಲಾಡಿಯಂತಹ ರಿಯಾಲಿಟಿ ಶೋಗಳು ಸಮಾಜಕ್ಕೆ ಏನು ಸಂದೇಶ ಕೊಡುತ್ತಿವೆ ಎಂದು ಪ್ರಶ್ನಿಸಿದರು.ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಒತ್ತಡ ರಹಿತ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಜನಪದ ಸಂಸ್ಕೃತಿಯ ಪಾತ್ರ ಹಿರಿದಾಗಿದೆ. ಜನಪದ ಸಂಸ್ಕೃತಿ ಭಾರತೀಯರ ಮೂಲ ಜೀವಾಳವಾಗಿದ್ದು. ಅದರಲ್ಲಿ ಕನ್ನಡ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದರು.
ಇನಾಂಹಂಚಿನಾಳ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ನಿರಾಣಿ ಅವರು ಸಾಹಿತಿ ಸಿದ್ದಪ್ಪ ನಾ ಮುಶೆಪ್ಪಗೋಳ ರಚಿತ ಚಿಕ್ಕಾಲಗುಂಡಿಯ ಮಾರುತೇಶ್ವರ ಚರಿತ್ರೆ ಮತ್ತು ಪವಾಡಗಳು ಕೃತಿ ಬಿಡುಗಡೆ ಮಾಡಿದರು.ಬಾದಾಮಿಯ ಚಾಲುಕ್ಯ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಗಂಗಾ ನುಚ್ಚಿನ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು.
ಜಾನಪದ ಕಲಾವಿದ ಪುಂಡಲಿಕಪ್ಪ ಗಾಣಿಗೇರ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಬಾಡಗಿ ಬಕೇಶ್ವರ ಮಠದ ಬಕ್ಕಯ್ಯ ಸ್ವಾಮೀಜಿ, ಶಿವಯ್ಯ ಸ್ವಾಮೀಜಿ, ಸಂಗಯ್ಯ ಸ್ವಾಮೀಜಿ, ಫಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕನ್ನಡ ಜಾನಪದ ಪರಿಷತ್ತಿನ ತಾಲೂಕ ಅಧ್ಯಕ್ಷ ಬಿ. ಬಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಜಾಪ ಕಾರ್ಯದರ್ಶಿ ಆರ್. ಬಿ. ನಬಿವಾಲೆ, ಪೀಕಾರ್ಡ ಬ್ಯಾಂಕ್ ನಿರ್ದೇಶಕ ಹನಮಂತ ಸಿಂಗರಡ್ಡಿ, ಆಶುಕವಿ ಸಿದ್ದಪ್ಪ ಬಿದರಿ, ರವೀಂದ್ರ ಜಕರಡ್ಡಿ, ಚಂದ್ರಶೇಖರ ನಡುವಿನಮನಿ, ಶಿವಾನಂದ ಹಿರೇಮಠ, ವೆಂಕಣ್ಣ ದ್ಯಾವಣ್ಣವರ, ಎಂ. ಬಿ. ತಾಂಬೋಳಿ, ಶ್ರೀಮತಿ ಎಚ್. ಬಿ. ಮಾಳಗೊಂಡ, ದಯಾನಂದ ಪೂಜಾರಿ ಮತ್ತಿತರಿದ್ದರು.