ಕನ್ನಡಪ್ರಭ ವಾರ್ತೆ ಇಂಡಿ:
ನಗರದ ಜಿ.ಆರ್ ಗಾಂಧಿ ಕಲಾ ಮೈದಾನದಲ್ಲಿ ವಿಜಯದಶಮಿ ಮತ್ತು ಸಂಘದ 101ನೇ ವರ್ಷಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಟ್ಟು 1117 ಜಿಲ್ಲಾ ಕೇಂದ್ರಗಳಲ್ಲಿ ಸಂಘದ ಗೋಷ್ಠಿಗಳನ್ನು ನಡೆಸಿದ್ದಾರೆ. 4.26 ಲಕ್ಷ ಹಿರಿಯ ನಾಗರಿಕರು ಭಾಗವಹಿಸಿದ್ದಾರೆ, 4.61 ಗ್ರಾಮಗಳಿಗೆ ಸಂಘದ ಸ್ವಯಂ ಸೇವಕರು ಹೋಗಿದ್ದಾರೆ. 41 ಸಾವಿರ ವಸತಿಗಳ ಸಂಪರ್ಕ ಮಾಡಿ 10 ಕೋಟಿ ದೇಶದ ಮನೆ ಮನೆಗೆ ಸಂಘದ ಕಾರ್ಯಕರ್ತರು ಹೋಗಿ ದೇಶ ಬಲಿಷ್ಠ ಮಾಡಲು ಕೇಳಿ ಕೊಂಡಿದ್ದಾರೆ ಎಂದರು. ಕೆಲವರು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಲವ್ ಜಿಹಾದ್ ಹೆಸರಿನಲ್ಲಿ ಯುವತಿಯರಿಗೆ ಮೋಸ ಮಾಡಿ ಬೇರೆ ದೇಶಕ್ಕೆ ಮಾರಾಟ ಮಾಡುತ್ತಿದ್ದಾರೆ. ಹಿಂದು ಸಮಾಜ ಬಲಿಷ್ಠವಾದರೆ ದೇಶ ಬಲಿಷ್ಠವಾಗುತ್ತದೆ. ಭಾರತ ಬಲಿಷ್ಠವಾದರೆ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ. ನಮ್ಮ ಮೇಲೆ ಪಾಕಿಸ್ತಾನ, ಬಾಂಗ್ಲಾ ಸೇರಿದಂತೆ ಭಯೋತ್ಪಾದಕರು ಅಶಾಂತಿ ಮಾಡುತ್ತಿದ್ದಾರೆ. ನಮ್ಮಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸಿ, ನಾಗರಿಕ ಕರ್ತವ್ಯ ನಿರ್ವಹಿಸಬೇಕಾಗಿದೆ. ಪರಿಸರ ಜಾಗೃತಿ ಮಾಡಿ ಸ್ವಭಾಷಾ ಪ್ರೇಮಿಗಳಾಗಬೇಕಾಗಿದೆ. ನಮ್ಮ ಮನೆ ಎಂಬ ಪ್ರೀತಿ ಬೆಳೆಸಿ ಇವೆಲ್ಲ ಬಂದಾಗ ನಾವು ಶ್ರೇಷ್ಠ ಭಾರತದತ್ತ ಹೆಜ್ಜೆ ಇಡಬೇಕಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬಾಬು ಜೀನಚಂದ್ರ ಧನಶೆಟ್ಟಿ ಮಾತನಾಡಿ, ಸಮಾಜದಲ್ಲಿನ ಚಿಂತಕರು, ಮಹಿಳೆಯರು, ಯುವಕರು ಜಾಗೃತರಾಗಿ ಸಂಘದ ಹಿಂದು ಸಮಾಜದ ಬೆಳೆಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಹೇಳಿದರು.ಶಿವಲಿಂಗ ನಾಗಠಾಣ, ವಿವೇಕ ಹಂಜಗಿ, ಗಣೇಶ ಕಾನಿ, ಶಿರಿಸ ಸ್ಥಾವರಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ಶೀಲವಂತ ಉಮರಾಣಿ, ದೀಪಕ ಕ್ಷತ್ರಿ, ಸೋಮು ನಿಂಬರಗಿಮಠ, ಗೋವಿಂದ ಹಿಬಾರೆ ಮತ್ತಿತರಿದ್ದರು.