ಭಾರತವನ್ನು ಕೆಣಕಿದರೆ, ಸಿಡಿಲಿನಂತಹ ಉತ್ತರ ಕಟ್ಟಿಟ್ಟ ಬುತ್ತಿ: ಸಂಸದ ಕ್ಯಾ. ಚೌಟ

KannadaprabhaNewsNetwork |  
Published : May 09, 2025, 12:31 AM IST
ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ | Kannada Prabha

ಸಾರಾಂಶ

ಆಪರೇಷನ್ ಸಿಂದೂರ್ ಕೇವಲ ಭಯೋತ್ಪಾದಕ ವಿರುದ್ದ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಅದು ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಆಪರೇಷನ್ ಸಿಂದೂರ್ ಕೇವಲ ಭಯೋತ್ಪಾದಕ ವಿರುದ್ದ ಕಾರ್ಯಾಚರಣೆಯಾಗಿರಲಿಲ್ಲ, ಬದಲಾಗಿ ಅದು ನವ ಭಾರತದ ಅಪ್ರತಿಮ ಶಕ್ತಿಯನ್ನು ಜಗತ್ತಿಗೆ ಸಾರಿದ ಐತಿಹಾಸಿಕ ದಿನ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಣ್ಣಿಸಿದ್ದಾರೆ.

ಭಾರತೀಯ ಸೇನೆ ಪಾಕಿಸ್ತಾನ ಅತಿಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ 9 ಉಗ್ರರ ನೆಲೆಗಳ ಮೇಲೆ ಮಧ್ಯರಾತ್ರಿ ನಡೆಸಿದ ವೈಮಾನಿಕ ದಾಳಿಯ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದರು, ‘ಸಿಂಧೂರ’ ಎನ್ನುವುದು ರಾಷ್ಟ್ರದ ವೀರತ್ವ, ಧೈರ್ಯ ಮತ್ತು ಸಂಕಲ್ಪದ ಪ್ರತೀಕವಾಗಿ ಹೊರಹೊಮ್ಮಿದೆ. ನಮ್ಮ ಸೇನೆಯ ವ್ಯವಸ್ಥಿತ ಹಾಗೂ ಕೆಚ್ಚೆದೆಯ ಕಾರ್ಯಾಚರಣೆಯ ಮೂಲಕ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

ಹೊಸ ಭಾರತವನ್ನು ಯಾರಾದರೂ ಕೆಣಕಿದರೆ, ನಮ್ಮ ಉತ್ತರವು ಇತಿಹಾಸವನ್ನೇ ನಡುಗಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ. ಕೇವಲ 25 ನಿಮಿಷಗಳಲ್ಲಿ ನಡೆದ ಪರಿಣಾಮಕಾರಿ ಕಾರ್ಯಾಚರಣೆಯಲ್ಲಿ ನಮ್ಮ ಸೇನೆಯು ಭಯೋತ್ಪಾದಕ ಅಜ್ಮಲ್‌ ಕಸಬ್‌ನ ತರಬೇತಿ ಕೇಂದ್ರ ಸೇರಿ 9 ಪ್ರದೇಶಗಳಲ್ಲಿನ 21 ಉಗ್ರರ ಅಡಗುತಾಣಗಳನ್ನು ಕ್ಷಿಪಣಿ ದಾಳಿ ಮಾಡಿ ನಾಶ ಮಾಡಿರುವುದು ಬದಲಾದ ಭಾರತ ನೀಡಿದ ಪ್ರತಿಕ್ರಿಯೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಮತ್ತು ಅಚಲ ನಾಯಕತ್ವದಲ್ಲಿ, ಭಾರತ ಮತ್ತೊಮ್ಮೆ ಭಯೋತ್ಪಾದನೆ ಅಥವಾ ಅದನ್ನು ಬೆಂಬಲಿಸುವವರನ್ನು ಸಹಿಸುವುದಿಲ್ಲ ಎಂದು ಮತ್ತೊಮ್ಮೆ ವಿಶ್ವಕ್ಕೆ ತೋರಿಸಿಕೊಟ್ಟಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ನಾಗರಿಕರಿಗೆ ಹಾನಿಯಾಗದಂತೆ ನಮ್ಮ ಸೇನೆಯ ಜವಾಬ್ದಾರಿಯುತ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಣೆಯು ನಿಜಕ್ಕೂ ಶ್ಲಾಘನೀಯ. ಭಯೋತ್ಪಾದಕ ಹಾಗೂ ಪಾಕಿಸ್ತಾನದ ಕುತಂತ್ರದ ವಿರುದ್ಧ ಪ್ರತೀಕಾರ ತೀರಿಸಬೇಕೆಂಬ ಭಾರತೀಯರ ಅಪೇಕ್ಷೆ ಈಡೇರಿದೆ. ಉಗ್ರರು ಹಾಗೂ ಅವರ ಸಹಚರರು ಎಲ್ಲೇ ಅಡಗಿ ಕುಳಿತರೂ, ಅವರೆಲ್ಲರನ್ನೂ ನುಗ್ಗಿ ಹೊಡೆದು ಸಂಹಾರ ಮಾಡುವ ಅತ್ಯಂತ ಬಲಿಷ್ಠ ರಾಷ್ಟ್ರ ಎಂಬುದನ್ನು ನಮ್ಮ ಹೆಮ್ಮೆಯ ಭಾರತ ತೋರಿಸಿ ಕೊಟ್ಟಿದೆ. ಆ ಮೂಲಕ ಇತ್ತೀಚೆಗೆ ಪ್ರಧಾನಮಂತ್ರಿ ಬಿಹಾರದಲ್ಲಿ ಮಾಡಿದ್ದ ಶಪಥ, ವಾಗ್ದಾನವನ್ನು ನೆರವೇರಿಸಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ