ಮುಡಾ ನಿವೇಶನ ವಾಪಸ್‌ ನೀಡಿದರೇ ತಪ್ಪು ಸರಿ ಹೋಗುತ್ತಾ ?

KannadaprabhaNewsNetwork |  
Published : Oct 04, 2024, 01:09 AM IST
ಪೊಟೋ೩ಸಿಪಿಟಿ೧: ಚನ್ನಪಟ್ಟಣದ ಚಿಕ್ಕಮಳೂರಿನಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಚಾಲನೆ ನೀಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ಮುಡಾ ವಿಚಾರದ ಕುರಿತು ಸ್ಪಷ್ಟನೆ ನೀಡುವಂತೆ ಸಿಎಂ ಸಿದ್ದರಾಮಯ್ಯರನ್ನು ನಾವು ಹಿಂದೆ ಸದನದಲ್ಲಿ ಪ್ರಶ್ನಿಸಿದಾಗ ಅವರು ಉತ್ತರವನ್ನೇ ನೀಡದೇ ಪಲಾಯನ ಮಾಡಿದ್ದರು. ಇವರು ಯಾರು ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಈ ರಾಜ್ಯದ ಹಿತ ಕಾಪಾಡುವ ಕೆಲಸವಾಗಬೇಕಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.

ಚನ್ನಪಟ್ಟಣ: ಮುಡಾ ವಿಚಾರದ ಕುರಿತು ಸ್ಪಷ್ಟನೆ ನೀಡುವಂತೆ ಸಿಎಂ ಸಿದ್ದರಾಮಯ್ಯರನ್ನು ನಾವು ಹಿಂದೆ ಸದನದಲ್ಲಿ ಪ್ರಶ್ನಿಸಿದಾಗ ಅವರು ಉತ್ತರವನ್ನೇ ನೀಡದೇ ಪಲಾಯನ ಮಾಡಿದ್ದರು. ಇವರು ಯಾರು ಸರಿಯಾದ ಮಾರ್ಗದಲ್ಲಿ ಹೋಗುತ್ತಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಈ ರಾಜ್ಯದ ಹಿತ ಕಾಪಾಡುವ ಕೆಲಸವಾಗಬೇಕಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಹೇಳಿದರು.

ನಗರದ ಚಿಕ್ಕಮಳೂರಿನಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ವಿಚಾರದಲ್ಲಿ ಯಾವ ರೀತಿ ಮಾತನಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಮುಡಾದಿಂದ ಪಡೆದಿದ್ದ ನಿವೇಶಗಳನ್ನು ಅವರು ವಾಪಸ್ಸು ನೀಡಿದ ಮಾತ್ರಕ್ಕೆ ಎಲ್ಲ ಸರಿ ಹೋಗುತ್ತದೆಯೇ ? ಎಂದು ಪ್ರಶ್ನಿಸಿದರು.

ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮ: ಚನ್ನಪಟ್ಟಣದ ಉಪಚುನಾವಣೆಯಲ್ಲಿ ಎನ್‌ಡಿಎನಿಂದ ಯಾರನ್ನೇ ಅಭ್ಯರ್ಥಿಯಾಗಿಸಿದರೂ, ನಾವೆಲ್ಲ ಅವರ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಬಿಜೆಪಿ-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರು, ಒಟ್ಟಾಗಿ ಶ್ರಮಿಸಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶ್ರಮಿಸುತ್ತೇವೆ ಎಂದು ತಿಳಿಸಿದರು.

ಪ್ರತಿ ಬೂತ್‌ನಲ್ಲಿ ನಮ್ಮ ಪಕ್ಷ ಸದೃಢವಾಗಬೇಕು. ಯಾವುದೇ ಚುನಾವಣೆ ಬರಲಿ, ಅದಕ್ಕೆ ನಾವೆಲ್ಲ ಸನ್ನದ್ಧರಾಗಿರಬೇಕು ಎಂಬ ನಿಟ್ಟಿನಲ್ಲಿ ಒಂದು ಶಾಶ್ವತ ಸಮಿತಿ ರಚನೆ ಮಾಡಿ ಸದಸ್ಯತ್ವ ನೋಂದಣಿ ಮಾಡಲು ಚಾಲನೆ ನೀಡಲಾಗಿದೆ. ಪ್ರತಿ ಬೂತ್‌ನಲ್ಲಿ ಸಕ್ರಿಯ ಕಾರ್ಯಕರ್ತರು ಹಾಗೂ ಎಲ್ಲ ಸಮಾಜದವರನ್ನು ಸೇರಿಸಿಕೊಂಡು ಸಮಿತಿ ರಚಿಸಿ, ಸಮಿತಿ ಮುಖಾಂತರ ಸಂಘಟನೆಯ ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ನಗರಾಧ್ಯಕ್ಷ ಅಜಯ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ರಾಜಶೇಖರ್, ನಗರಸಭೆ ಸದಸ್ಯ ಮಂಜುನಾಥ್ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...