ಲೀಡ್‌ ಕೊಡದೇ ಇದ್ದರೆ ವಿದ್ಯುತ್‌ ಕಟ್‌: ಕಾಂಗ್ರೆಸ್‌ ಶಾಸಕ ಕಾಗೆ!

KannadaprabhaNewsNetwork |  
Published : May 02, 2024, 01:30 AM IST
ರಾಜು ಕಾಗೆ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್‌ ಕೊಡದಿದ್ದರೆ ವಿದ್ಯುತ್‌ ಕಟ್‌ ಮಾಡುವುದಾಗಿ ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್‌ ಕೊಡದಿದ್ದರೆ ವಿದ್ಯುತ್‌ ಕಟ್‌ ಮಾಡುವುದಾಗಿ ಬೆಳಗಾವಿ ಜಿಲ್ಲೆ ಕಾಗವಾಡ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಬೆದರಿಕೆ ಹಾಕಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.

ಬೆಳಗಾವಿ ಕಾಗವಾಡ ತಾಲೂಕು ಜುಗುಳ ಗ್ರಾಮದಲ್ಲಿ ಚಿಕ್ಕೋಡಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತ ಬಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ಲೀಡ್‌ ಕಡಿಮೆ ಕೊಟ್ಟರೆ ಕರೆಂಟ್‌ ಕೊಡಲ್ಲ. ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಲೀಡ್‌ ಕೊಟ್ಟಿದ್ದಕ್ಕೆ ಕರೆಂಟ್‌ ತೆಗೀತಾ ಇದ್ದೇವೆ ಅಷ್ಟೇ. ಮತ್ತೆ ಲೋಕಸಭೆಯಲ್ಲಿ ಲೀಡ್‌ ಕೊಡಲಿಲ್ಲ ಎಂದರೆ ಕರೆಂಟ್‌ ಕೊಡುವುದೇ ಇಲ್ಲ, ಸಂಪೂರ್ಣ ಕಟ್‌ ಮಾಡುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ಟೀಕೆಗೆ ಕಾರಣರಾಗಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಸಾನ್‌ ಸನ್ಮಾನ್‌ ಇ - ಕೆವೈಸಿಗೆ ಸರ್ವರ್‌ ಅಡ್ಡಿ!
ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್