ಹಾವು ಕಡಿದರೆ ಮೂಢನಂಬಿಗೆ ತೊರೆದು ತಕ್ಷಣ ಚಿಕಿತ್ಸೆ ಪಡೆಯಿರಿ: ಪವನ್‌ ಜೋಶಿ

KannadaprabhaNewsNetwork |  
Published : Jun 22, 2026, 01:45 AM IST
ಹಾವು ಕಡಿತಕ್ಕೊಳಗಾದರೆ  ಮೂಡನಂಬಿಕೆ ಬದಿಗೊತ್ತಿ, ತಕ್ಷಣ ಚಿಕಿತ್ಸೆ ಪಡೆಯಿರಿ, ಲೇಖಕ ಪವನ್ ಜೋಶಿ | Kannada Prabha

ಸಾರಾಂಶ

ಉರಗಗಳು ಆಹಾರ ಸರಪಳಿಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಹಾವುಗಳು ಕಚ್ಚಿದಲ್ಲಿ ಮೂಢನಂಬಿಕೆಗೆ ಜೋತು ಬಿದ್ದು ಜೀವ ಕಳೆದುಕೊಳ್ಳದೆ, ತಕ್ಷಣ ಚಿಕತ್ಸೆ ಪಡೆಯಲು ಮುಂದಾಗಿ ಎಂದು ಅಡವಿ ಅಲರ್ಟ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಲೇಖಕರೂ ಆದ ಪವನ್ ಜೋಶಿ ಹೇಳಿದರು.

ತಿಮ್ಮರಾಜಿಪುರದ ಶಾಲೆಗಳಲ್ಲಿ ಉರಗಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಲಹೆ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಉರಗಗಳು ಆಹಾರ ಸರಪಳಿಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಂತಹ ಹಾವುಗಳು ಕಚ್ಚಿದಲ್ಲಿ ಮೂಢನಂಬಿಕೆಗೆ ಜೋತು ಬಿದ್ದು ಜೀವ ಕಳೆದುಕೊಳ್ಳದೆ, ತಕ್ಷಣ ಚಿಕತ್ಸೆ ಪಡೆಯಲು ಮುಂದಾಗಿ ಎಂದು ಅಡವಿ ಅಲರ್ಟ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಲೇಖಕರೂ ಆದ ಪವನ್ ಜೋಶಿ ಹೇಳಿದರು.

ತಾಲೂಕಿನ ತಿಮ್ಮರಾಜಿಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವನ್ಯಜೀವಿ ವಲಯದ ವತಿಯಿಂದ ಆಯೋಜಿಸಿದ್ದ ಉರಗಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಾವುಗಳ ಬಗ್ಗೆ ಸಾಕಷ್ಟು ಮೂಢನಂಬಿಕೆಗಳನ್ನು ಮುಂದುವರೆದ ಇಂದಿನ ಯುಗದಲ್ಲೂ ನಾನು ಕೇಳುತ್ತಿದ್ದೇವೆ, ನಂಬಿತ್ತಿದ್ದೇವೆ. ಆದರೆ ವಿಷಕಾರಿ ಎನಿಸಿದ ಹಾವುಗಳು ಕಚ್ಚಿದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದರು.

ಇಲಿಗಳು ವರ್ಷಕ್ಕೆ ಅಂದಾಜು ಎಂಟುನೂರು ಮರಿಗಳನ್ನು ಹಾಕುತ್ತವೆ. ಇವುಗಳನ್ನು ಹಾವುಗಳು ತಿಂದು ಆಹಾರ ವ್ಯವಸ್ಥೆಯೆಲ್ಲಾಗುವ ವ್ಯತಿರಿಕ್ತ ಪರಿಣಾಮವನ್ನು ತಡೆಯುತ್ತವೆ. ಭಾರತ ದೇಶದಲ್ಲಿ 250ರಿಂದ 350 ಪ್ರಭೇದದ ಹಾವುಗಳಿದ್ದು, ಎಲ್ಲವೂ ವಿಷಪೂರಿತ ಹಾವುಗಳಲ್ಲ. ಕೆಲವು ಪ್ರಭೇದಗಳಾದ ಸಾಮಾನ್ಯ ಕಟ್ಟು ಹಾವು, ಕೊಳಕುಮಂಡಲ, ನಾಗರಹಾವು ಮತ್ತು ಗರಗಸ ಮಂಡಲ ಹಾವುಗಳು ಮಾತ್ರ ವಿಷಪೂರಿತವಾಗಿರುತ್ತವೆ ಎಂದರು.

ಹಾವುಗಳ ಬಗ್ಗೆ ಎಲ್ಲರೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಕಚ್ಚಿರುವ ಹಾವು ವಿಷಪೂರಿತವೋ ಅಲ್ಲವೋ ಎಂಬುದು ಖಾತ್ರಿಯಾದರೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗುತ್ತದೆ. ಹಾವು ಕಚ್ಚಿದ ಕೂಡಲೇ ಆತಂಕಕ್ಕೆ ಒಳಗಾಗದೆ, ಮನೆ ಮದ್ದು, ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಮುಂದಾಗದೆ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಹಾವುಗಳನ್ನು ಕಂಡ ಕೂಡಲೆ ಕೊಲ್ಲುವ ಸಂಸ್ಕೖತಿ ಇಂದಿಗೂ ಇದೆ. ಹಾವನ್ನು ರಕ್ಷಿಸಬೇಕು, ನಮ್ಮಷ್ಟೆ ಅವುಗಳಿಗೂ ಬದುಕುವ ಹಕ್ಕಿದೆ ಎಂದರು.ಈ ಸಂದರ್ಭದಲ್ಲಿ ಹಿಮಗಿರಿ ಸಂಸ್ಥೆಯ ರಘುರಾಮ್ ಅವರು ಹಾವುಗಳ ಜೀವನಶೈಲಿ, ಆಹಾರ ಪದ್ಧತಿ ಅವುಗಳ ಉಪಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಬಳಿಕ ಉರಗ ತರಂಗಗಳು ಕನ್ನಡ ಆವೃತ್ತಿ, ಸ್ನೇಕ್ಸ್‌ ಆಫ್ ಮೈಸೂರ್‌ ಇಂಗ್ಲಿಷ್ ಆವೃತ್ತಿಯ ಪುಸ್ತಕಗಳನ್ನು ನೀಡಲಾಯಿತು. ಈ ವೇಳೆ ಪ್ರಾಂಶುಪಾಲರಾದ ಶೋಯಬ್ ಪಾಷ, ಮಹೇಶ್ ಕೆ. ಶಿವಾನಂದಯ್ಯ, ಭರತ್, ಉಷಾ, ಗಸ್ತು ಅರಣ್ಯಪಾಲಕ ಸುನಿಲ್ ಬಸಪ್ಪ ಬೆಳವಿ, ಮಂಜುನಾಥ ಆಯಟ್ಟಿ, ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ ಇದ್ದರು.

--

21ಕೆಜಿಎಲ್ 29

ಉರಗಗಳ ಸಂರಕ್ಷಣೆ, ಜಾಗೃತಿ ಕಾರ್ಯಕ್ರಮದಲ್ಲಿ ಲೇಖಕ ಪವನ್ ಜೋಶಿ, ಉಪವಲಯ ಅರಣ್ಯಾಧಿಕಾರಿ ಅನಂತರಾಮು, ಶೋಯಬ್ ಪಾಷ, ಮಹೇಶ್ ಕೆ. ಶಿವಾನಂದಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಮೆರಿಕದಲ್ಲಿ ಮಂಡ್ಯ ಗಿರೀಶ್‌ರವರ ಕನ್ನಡ ಕೃತಿಗಳ ಲೋಕಾರ್ಪಣೆ
ಸರ್ವ ರೋಗಕ್ಕೂ ಯೋಗ ದಿವ್ಯೌಷಧ: ಡಿ.ಎನ್.ಶ್ರೀಪಾದು