ಸಮಾಜ ಜಾಗೃತರಾದರೆ ಬಸವ ಧರ್ಮ ಜಾಗತಿಕ ಮಟ್ಟಕ್ಕೆ

KannadaprabhaNewsNetwork |  
Published : Nov 05, 2026, 03:00 AM IST
22ನೇ ಶರಣ ಕಮ್ಮಟದ ಮೂರನೇ ದಿನದ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಭಾಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬಸವ ಪ್ರಜ್ಞೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮತ್ತು ಜನತೆಯ ಮೇಲಿದ್ದು, ಎಲ್ಲರೂ ಜಾಗೃತರಾದರೆ ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಬೆಳೆಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಸವ ಪ್ರಜ್ಞೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮತ್ತು ಜನತೆಯ ಮೇಲಿದ್ದು, ಎಲ್ಲರೂ ಜಾಗೃತರಾದರೆ ಬಸವ ಧರ್ಮ ಜಾಗತಿಕ ಮಟ್ಟದಲ್ಲಿ ಬೆಳೆಯಲಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಆಶಯ ವ್ಯಕ್ತಪಡಿಸಿದರು.ದಾವಣಗೆರೆಯ ಲಿಂ.ಶರಣೆ ಪುಟ್ಟಮ್ಮ, ಲಿಂ.ಶರಣ ಬಸವರಾಜಪ್ಪರ ಸ್ಮರಣೋತ್ಸವದಲ್ಲಿ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ಹಾಗೂ ಬಸವ ಬಳಗದಿಂದ ನಗರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದ್ದ 22ನೇ ಶರಣ ಕಮ್ಮಟದ ಮೂರನೇ ದಿನದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ತಮ್ಮನ್ನೇ ತಾವು ಅರ್ಪಿಸಿಕೊಂಡು ನಮಗೆ ಈ ಸಂಸ್ಕಾರದ ದಾರಿಯನ್ನು ಕೊಟ್ಟು ಹೋಗಿದ್ದಾರೆ. ಇದನ್ನು ತಿಳಿದುಕೊಂಡು ಮುಂದುವರಿಸಿಕೊಂಡು ಹೋಗುವ, ಜನರು ಜಾಗೃತಗೊಳಿಸುವ ಅಗತ್ಯತೆಯನ್ನು ಸಮುದಾಯ ಕೈಗೆತ್ತಿಕೊಳ್ಳಬೇಕು ಎಂದ ಸಚಿವರು, ಇರುವ ಗೊಂದಲಗಳನ್ನು ಎಲ್ಲ ಸ್ವಾಮೀಜಿಗಳು ಚರ್ಚಿಸಿ ಬಗೆಹರಿಸಬೇಕು ಎಂದು ಹೇಳಿದರು‌.ಇಳಕಲ್ಲ ಚಿತ್ತರಗಿ ಮಠದ ಶ್ರೀ ಗುರುಶಾಂತ ಮಹಾಸ್ವಾಮೀಜಿ ಮಾತನಾಡಿ, ಲಿಂಗಾಯತ ತತ್ವದಲ್ಲಿ ವಿಜ್ಞಾನವಿದೆ. ಬದುಕನ್ನು ಜಾಣ ರೀತಿಯಲ್ಲಿ ಕಟ್ಟಿಕೊಂಡು ಸಮ ಸಮಾಜ, ಕಾಯಕ ಹಾಗೂ ದಾಸೋಹದ ಪರಿಪಾಲನೆಯಿಂದ ನಮ್ಮನ್ನು ಬದಲಿಸಿಕೊಳ್ಳುವ ಶಕ್ತಿ ಇದಕ್ಕಿದೆ. ಬಸವಣ್ಣನವರು ಕೊಟ್ಟು ಹೋದ ಆದರ್ಶಗಳನ್ನು ಉಳಿಸಿ, ಬೆಳೆಸಬೇಕಾದ ಧರ್ಮ ಸಂಸ್ಕಾರ ಎಲ್ಲರಲ್ಲಿಯೂ ಇರಬೇಕು ಎಂದು ಹೇಳಿದರು.ಲಿಂಗಾಯತರಲ್ಲಿ ಜಾಗೃತ ಪ್ರಜ್ಞೆ ಕುರಿತು ಸಾಫ್ಟ್‌ವೇರ್‌ ಎಂಜಿನಿಯರ್‌ ನಿತಿನ್‌ ಕಲ್ಯಾಣಕುಮಾರ ಉಪನ್ಯಾಸ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯಾಧ್ಯಕ್ಷ ಎಸ್.ಎಚ್.ನಾಡಗೌಡ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಕದಳಿ ವೇದಿಕೆಯ ಶಾರದಾ ಕೊಪ್ಪ, ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಭುಯ್ಯಾರ, ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷೆ ಮಹಾದೇವಿ ಗೋಕಾಕ ಮುಖ್ಯ ಅತಿಥಿಗಳಾಗಿದ್ದರು. ಅಜ್ಜಂಪುರ ಶೆಟ್ರು ಟ್ರಸ್ಟ್‌ನ ಕಾರ್ಯಾಧ್ಯಕ್ಷ ಶಿವಲಿಂಗಪ್ಪ ಶೆಟ್ಟರ ಸ್ವಾಗತಿಸಿದರು. ಟ್ರಸ್ಟ್ ಸದಸ್ಯ ರುದ್ರಪ್ಪ ಪಗಡದದಿನ್ನಿ ನಿರೂಪಿಸಿದರು.

ಅಜ್ಜಂಪುರ ಶೆಟ್ರು ಟ್ರಸ್ಟ್ ಅಧ್ಯಕ್ಷೆ ಪ್ರಭಕ್ಕ ಸಿಂದಗಿ, ಕಾರ್ಯಾಧ್ಯಕ್ಷ ಶಂಭುಲಿಂಗಪ್ಪ, ಕಾರ್ಯದರ್ಶಿ ಷಡಕ್ಷರಿ, ಸದಸ್ಯರಾದ ಗೌರಮ್ಮ ನೆಲೋಗಲ್, ಸಿದ್ಧಲಿಂಗಪ್ಪ, ಓಂಕಾರಪ್ಪ, ರುದ್ರಪ್ಪ.ಪಿ ಹಾಗೂ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ವಿ.ಸಿ.ನಾಗಠಾಣ, ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಡಾ.ಜೆ.ಎಸ್.ಪಾಟೀಲ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ