ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾದರೆ ಅದಕ್ಕೆ ಶಿಕ್ಷಕರೇ ಜವಾಬ್ದಾರಿ: ಶಾಸಕ ಹೆಬ್ಬಾರ

KannadaprabhaNewsNetwork |  
Published : Feb 26, 2026, 02:45 AM IST
ಮುಂಡಗೋಡ ಪಟ್ಟಣದ ತಾಪಂ ಸಭಾಂಗಣದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿದರು. | Kannada Prabha

ಸಾರಾಂಶ

ಖಾಸಗಿ ಶಾಲೆಯಲ್ಲಿ ಶೇ.೭೫ಕ್ಕಿಂತ ಅಧಿಕ ಫಲಿತಾಂಶ ಗಳಿಸುತ್ತಾರೆ. ಅದೇ ಸರ್ಕಾರಿ ಶಾಲೆಯಲ್ಲಿ ಶೇ. ೪೦ರಷ್ಟು ಫಲಿತಾಂಷ ಗಳಿಸಿದರೆ ಇದಕ್ಕೆ ಕಾರಣ ಏನು?.

ಕನ್ನಡಪ್ರಭ ವಾರ್ತೆ ಮುಂಡಗೋಡ

ಸರ್ಕಾರಿ ಶಾಲೆ ಶಿಕ್ಷಕರಿಗೆ ಕೈ ತುಂಬಾ ಸಂಬಳ ಸೇರಿದಂತೆ ಸಕಲ ಸವಲತ್ತು ಒದಗಿಸಲಾದರೂ ಕೂಡ ಮಕ್ಕಳನ್ನು ತರಬೇತಿಗೊಳಿಸಿ ಉತ್ತಮ ಫಲಿತಾಂಶ ನೀಡುವಲ್ಲಿ ವಿಫಲವಾದರೆ ಅದಕ್ಕೆ ಮಕ್ಕಳು ಮಾತ್ರ ಜವಾಬ್ದಾರರಾಗುವುದಿಲ್ಲ ಬದಲಾಗಿ ಶಿಕ್ಷಕರು ಕೂಡ ಜವಾಬ್ದಾರರಾಗುತ್ತೀರಿ ಎಂದು ಶಾಸಕ ಶಿವರಾಮ ಹೆಬ್ಬಾರ ಶಿಕ್ಷಕರಿಗೆ ಎಚ್ಚರಿಸಿದರು.ಬುಧವಾರ ಸಂಜೆ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಿನ ೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಶಾಲೆಯಲ್ಲಿ ಶೇ.೭೫ಕ್ಕಿಂತ ಅಧಿಕ ಫಲಿತಾಂಶ ಗಳಿಸುತ್ತಾರೆ. ಅದೇ ಸರ್ಕಾರಿ ಶಾಲೆಯಲ್ಲಿ ಶೇ. ೪೦ರಷ್ಟು ಫಲಿತಾಂಷ ಗಳಿಸಿದರೆ ಇದಕ್ಕೆ ಕಾರಣ ಏನು? ಈ ಲೋಪದೋಷಕ್ಕೆ ಕಾರಣಿಕರ್ತರಾರು, ಒಂದೆರಡು ವರ್ಷ ಹೆಚ್ಚು ಕಡಮೆಯಾಗಲಿ ಆದರೆ ಪ್ರತಿ ವರ್ಷ ನಿರಂತರವಾಗಿ ಇದೇ ರೀತಿಯಾದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಫಲಿತಾಂಶ ಹೇಳಿಕೊಳ್ಳಲು ಕೂಡ ಮುಜುಗರವಾಗುತ್ತದೆ. ಎಷ್ಟು ವರ್ಷ ಹಿಂದುಳಿದ ತಾಲೂಕು ಎಂಬ ಪಟ್ಟಿಹೊತ್ತುಕೊಳ್ಳಲು ಸಾಧ್ಯ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಮುಂಡಗೋಡ ತಾಲೂಕು ಕೃಷಿ ಸೇರಿದಂತೆ ಆರ್ಥಿಕವಾಗಿ ಬೆಳೆಯುತ್ತಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ ನಿರೀಕ್ಷೆಯಂತೆ ಸಾಧನೆ ಮಾಡಲಾಗುತ್ತಿಲ್ಲ. ಇದರ ಬಗ್ಗೆ ನಮಗೂ ಕೂಡ ಜವಾಬ್ದಾರಿ ಇದೆ. ಶಿಕ್ಷಕರು ಮನಸ್ಸು ಮಾಡಿದರೆ ಶಿಕ್ಷಣದಲ್ಲಿ ಕೂಡ ಉತ್ತಮ ಸಾಧನೆ ಮಾಡಲು ಸಾಧ್ಯ. ಶಿಕ್ಷಕರು ಸಂಜೆ ೫ ಘಂಟೆಗೆ ಬಸ್ ಹತ್ತುವುದನ್ನು ಬಿಟ್ಟು ಪರೀಕ್ಷೆ ಮುಗಿಯುವವರೆಗೆ ಇಲ್ಲಿಯೇ ಉಳಿದುಕೊಂಡು ಮಕ್ಕಳ ಫಲಿತಾಂಶ ಸುಧಾರಿಸಲು ಪ್ರಯತ್ನ ಮಾಡಬೇಕು. ೧೦ನೇ ತರಗತಿ ಪೂರ್ವ ತಯಾರಿ ಪರೀಕ್ಷೆಯಲ್ಲಿ ಮಕ್ಕಳ ಫಲಿತಾಂಶವನ್ನಾದರಿಸಿ ಹಿಂದುಳಿದ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ನಿರಂತರ ಪಾಲಕರೊಂದಿಗೆ ದೂರವಾಣಿ ಸಂಪರ್ಕದಲ್ಲಿದುಕೊಂಡು ಉತ್ತಮ ಫಲಿತಾಂಶ ನೀಡಬೇಕು. ಕನಿಷ್ಠ ಸ್ಥಿತಿಯಲ್ಲಿರುವ ಮಕ್ಕಳಿಗಾಗಿ ವಿಶೇಷ ತರಬೇತಿ ಕೇಂದ್ರವನ್ನು ತೆರೆಯುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ದಾಖಲೆಯ ಫಲಿತಾಂಶ ಈ ಬಾರಿ ನೀಡಬೇಕೆಂದು ತಾಕೀತು ಮಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಮಾತನಾಡಿ, ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ನಿರಂತರವಾಗಿ ತರಬೇತಿ ನಡೆಸಲಾಗುತ್ತಿದ್ದು, ಈ ಬಾರಿ ಉತ್ತಮ ಫಲಿತಾಂಶ ನೀಡಲಾಗುವುದೆಂದು ಭರವಸೆ ನೀಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ರಮೇಶ ಅಂಬಿಗೇರ ಹಾಗೂ ತಾಲೂಕಿನ ೨೦ ಪ್ರೌಢಶಾಲೆ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಬಾಲ್ಯದಲ್ಲೇ ಮಾನವೀಯತೆ ಕಲಿಸಿ: ವಿಜಯಾನಂದ ಕಾಶಪ್ಪನವರ
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಶಾಸಕಿ ಎಂ.ಪಿ.ಲತಾ