- ಜಗಳೂರಲ್ಲಿ ಸ್ವಚ್ಛತೆಯೇ ಸೇವೆಯಡಿ ಕಳೆ ಗಿಡಗಳ ತೆರವು ಕಾರ್ಯಕ್ರಮ
ಪರಿಸರವನ್ನು ನಾವು ಕಾಪಾಡಿದರೆ ಪರಿಸರವೂ ನಮ್ಮನ್ನು ಕಾಪಾಡುತ್ತದೆ. ಪಟ್ಟಣ ಪಂಚಾಯಿತಿ ಆಡಳಿತ ಸಹ ಸರ್ಕಾರದ ಆದೇಶದಂತೆ ಸ್ವಚ್ಛತೆ ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಭಾರತ್ ಟಾಕೀಸ್ ಸಮೀಪ ಶನಿವಾರ ಖಾಲಿ ಜಾಗದಲ್ಲಿ ಬೆಳೆದಿದ್ದ ಕಳೆ ಗಿಡಗಳ ತೆರವು ಕಾರ್ಯಕ್ಕೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಿ, ಪರಿಸರ ಉಳಿಸಿ, ಆರೋಗ್ಯ ಕಾಪಾಡಿಕೊಳ್ಳಲು ತಿಳಿಲಸಿದರು.ಸಾರ್ವಜನಿಕರು ಕಸ ಕೊಂಡೊಯ್ಯುವ ಗಾಡಿಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತವೆ. ಮನೆಗಳಲ್ಲಿ ಸಂಗ್ರಹಿಸಿದ ಕಸವನ್ನು ಗಾಡಿಗಳಿಗೆ ನೀಡಬೇಕು. ಸಾರ್ವಜನಿಕರು ಎಲ್ಲಿ ಬೇಕೆಂದರಲ್ಲಿ ಕಸ ಹಾಕಿ ಪರಿಸರವನ್ನು ಹಾಳು ಮಾಡಬಾರದು. ನಗರದ ಪರಿಸರ ಸ್ವಚ್ಛವಾಗಿಟ್ಟರೆ ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ಮುಖ್ಯಾಧಿಕಾರಿ ಲೋಕ್ಯ ನಾಯ್ಕ್ ಮಾತನಾಡಿ, ಸಾರ್ವಜನಿಕರು ಮನೆ, ರಸ್ತೆ, ಖಾಲಿ ಜಾಗ ಹೀಗೆ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಕಸವನ್ನು ಎಸೆಯಬಾರದು. ಸ್ವಚ್ಛತೆಯೇ ನಮ್ಮ ಸೇವೆ ಎಂದು ಎಲ್ಲರೂ ಭಾವಿಸಬೇಕು. ಸೆ.14ರಿಂದ ಅ.2 ರವರೆಗೆ ಸ್ವಚ್ಚತಾ ಸೇವೆ ಕಾರ್ಯಕ್ರಮ ಮಾಡಲಾಗುತ್ತದೆ ಎಂದರು.
- - - -14ಜೆ.ಎಲ್.ಆರ್.1: