ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕೈವಾರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ಅಭಿಪ್ರಾಯ
ಈ ಸಮಾಜ ಸುಗಮವಾಗಿ ಸಾಗಿ ಹೋಗಲು ಬೇಕಾದ ಮಾನಸಿಕ ವಿವೇಕವನ್ನು, ಪ್ರೀತಿಯನ್ನು ಜನರಿಗೆ ತಲುಪಿಸಲು ಸಾವಿರಾರು ವರ್ಷಗಳ ಅವಧಿಯಲ್ಲಿ ಸಾವಿರಾರು ಕವಿ, ಸಂತ ದಾರ್ಶನುಕರು ಶ್ರಮಿಸಿದ್ದಾರೆ ಎಂದು ಕೈವಾರದ ಶ್ರೀ ಯೋಗಿ ನಾರೇಯಣ ಮಠದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಅಭಿಪ್ರಾಯಪಟ್ಟರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಈವರೆಗೂ ಸಮಾಜದಲ್ಲಿ ಬದುಕಿ ಹೋಗಿರುವ ಎಲ್ಲಾ ಸಂತರು, ದಾರ್ಶನಿಕರು ಈ ಸಮಾಜದಲ್ಲಿ ಯಾವುದೇ ಜಾತಿಬೇದವಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಸಾರುವ ಕೆಲಸವನ್ನು ಮಾಡಿ ಹೋಗಿದ್ದಾರೆ. ಮುಖ್ಯವಾಗಿ ಕೈವಾರ ತಾತಯ್ಯನವರು ಎಲ್ಲಾ ಕೀರ್ತನೆಗಳು, ರಚನೆಗಳು ಇದೇ ತತ್ವಗಳನ್ನು ಸಾರಿ ಹೇಳಿದ್ದಾರೆ ಎಂದರು.ಹಳೆಗನ್ನಡ, ಹೊಸಗನ್ನಡ ಎಂದು ಎರಡು ಭಾಗಗಳಾಗಿ ವಿಂಗಡಿಸಿರುವುದನ್ನು ಯಾವುದೇ ಭಾಷೆಯಲ್ಲೂ ಇಲ್ಲ ಆದರೆ ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಹಳೆಗನ್ನಡ ಮತ್ತು ಹೊಸಗನ್ನಡವೆಂಬ ವಿಚಾರಗಳಿದ್ದು ಇದು ಭಾಷೆಯ ಇತಿಹಾಸವನ್ನು ಸಾರುತ್ತದೆಂದರು. ಪುರಂದರದಾಸರು, ಕನಕದಾಸರು, ದಾಸ ಪಂಥವನ್ನು ಸೃಷ್ಟಿಸಿದ್ದು ಅವರ ತತ್ವಪದಗಳಿಂದ ಕನ್ನಡವನ್ನು ಪಸರಿಸಿದ್ದಾರೆಂದರು. ಇದರಿಂದ ನಮ್ಮ ಕನ್ನಡ ಭಾಷೆಯ ಹಿರಿಮೆಯನ್ನು ಸಾರುತ್ತದೆಯೆಂದರು. ಸಂಸ್ಕೃತಿ, ಸಾಂಸ್ಕೃತಿಕ, ಆಚಾರ,ವಿಚಾರಗಳು ನಮಗೆ ನಾಡುನಡಿಯಿಂದ ಲಭಿಸುತ್ತದೆಯೆಂದರು.
ಶಾಸಕ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಮುಂದಿನ ಸಮ್ಮೇಳನ ಚಿಂತಾಮಣಿಯಲ್ಲಿಯೇ ಆಯೋಜಿಸಬೇಕೆಂದು 10 ನೇ ಸಮ್ಮೇಳನದಲ್ಲಿ ಮನವಿ ಮಾಡಿದ್ದರು. ಆಗ ನಾನು ಅವರಿಗೆ ತಿಳಿಸಿದ್ದೇ ನಗರದ ಹೃದಯಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಪೂರ್ಣಗೊಂಡ ಬಳಿಕ ಅ ಭವನದಲ್ಲಿ ಸಮ್ಮೇಳನ ಆಯೋಜನೆ ಮಾಡೋಣವೆಂದು ತಿಳಿಸಿದೆ. ಆದರಂತೆ ಇಂದು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಿಬಂದಿದ್ದು ಇಂದಿನ ಸಮಾರೋಪ ಸಮಾರಂಭದಲ್ಲಿ ಗಣ್ಯರು ಕನ್ನಡದ ಭಾಷೆಯ ಇತಿಹಾಸ, ಪರಂಪರೆ, ಸೊಬಗು, ನಾಡು, ನುಡಿ, ಆಚಾರ, ವಿಚಾರ, ಕನ್ನಡ ಭಾಷೆಗಿರುವ ಗತ್ತು ಗಮ್ಮತ್ತಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಮುಕ್ತಾಯ
ಸಮ್ಮೇಳನ ಸರ್ವಾಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಬಹಳ ಕಡಿಮೆ ಸಮಯದಲ್ಲಿ ಸುಂದರ, ಸುಸಜ್ಜಿತವಾಗಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಎಲ್ಲಾ ಹಿರಿಯರು, ಶಾಸಕರಾದ ಡಾ.ಎಂ.ಸಿ. ಸುಧಾಕರ್ ಹಾಗೂ ಜಿಲ್ಲಾಡಳಿತ, ತಾಲೂಕು ಆಡಳಿತದ ಅಧಿಕಾರಿಗಳ ಶ್ರಮ ಮತ್ತು ಕನ್ನಡ ಸಾಹಿತ್ಯ ಆಸಕ್ತರ ಕೈಜೋಡಣೆಯಿಂದಾಗಿ ಈ ಸಮ್ಮೇಳನ ಯಶಸ್ವಿಯಾಗಿದೆ ಎಂದರು.
ಚಿತ್ರಶೀರ್ಷಿಕೆ: ಕನ್ನಡ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಿದ ಚಿತ್ರ.