ಸಾವಿರಾರು ಬಡ ರೈತರು ತಮ್ಮ ಜೀವನವದ ನಿರ್ವಹಣೆಗಾಗಿ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳ ಸಾಗುವಳಿ ಮಾಡುತ್ತಿದ್ದು ಈ ರೈತರು ಪ್ರತಿದಿನ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ತೊಂದರೆ ಕೊಡುತ್ತಾರೋ ಎಂಬ ಭಯದಿಂದ ಜೀವಿಸುತ್ತಿದ್ದು ಅವರಿಗೆ ಹಕ್ಕುಪತ್ರಗಳ ನೀಡಿ ಭಯ ಮುಕ್ತರಾಗಿ ಮಾಡಬೇಕಿದೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳ ವಿತರಿಸಬೇಕು ಎಂದು ಆಗ್ರಹಿಸಿ ಕನ್ನಡನಾಡು ಹಿತ ರಕ್ಷಣಾ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ತಾಲೂಕಿನ ಅಮ್ಮನಗುಡ್ಡ ಗ್ರಾಮದಿಂದ ಚನ್ನಗಿರಿ ತಾಲೂಕು ಕಚೇರಿವರೆಗೆ ಪಾದಯಾತ್ರೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ವೇಳೆ ಸಮಿತಿ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ಮಾತನಾಡಿ ತಾಲೂಕಿನಾದ್ಯಂತ ಸಾವಿರಾರು ಬಡ ರೈತರು ತಮ್ಮ ಜೀವನವದ ನಿರ್ವಹಣೆಗಾಗಿ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಗಳ ಸಾಗುವಳಿ ಮಾಡುತ್ತಿದ್ದು ಈ ರೈತರು ಪ್ರತಿದಿನ ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ತೊಂದರೆ ಕೊಡುತ್ತಾರೋ ಎಂಬ ಭಯದಿಂದ ಜೀವಿಸುತ್ತಿದ್ದು ಅವರಿಗೆ ಹಕ್ಕುಪತ್ರಗಳ ನೀಡಿ ಭಯ ಮುಕ್ತರಾಗಿ ಮಾಡಬೇಕಿದೆ. ಕಳೆದ 10ವರ್ಷಗಳ ಹಿಂದೆ ಆರಂಭಗೊಂಡ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದೆ ಇದ್ದು ಆ ಭಾಗದ ರೈತರು ಕೆರೆಗೆ ಯಾವಾಗ ನೀರು ಬರುತ್ತದೆ ಎಂಬುದು ಕಾಯುತ್ತಿದ್ದಾರೆ ಆದಷ್ಟು ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.ತಾಲೂಕಿನಲ್ಲಿರುವ ಬಹುತೇಕ ಕೆರೆಗಳು ಒತ್ತುವರಿಯಾಗಿದ್ದು ಈ ಕೆರೆಗಳನ್ನು ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ರೈತರು ದೇಶದ ಅನ್ನದಾತರಾಗಿದ್ದು ಅವರಿಗೆ ಅನ್ಯಾಯವಾದಾಗಲೆಲ್ಲ ಕನ್ನಡಪರ ಸಂಘಟನೆಗಳು ರೈತರ ಬೆಂಬಲಕ್ಕೆ ನಿಂತಿದ್ದು ನಮ್ಮಗಳ ನ್ಯಾಯ ಸಮ್ಮತವಾದ ಬೇಡಿಕೆಗಳು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಸಮಿತಿಯ ಮಹಿಳಾ ಘಟಕದ ಪ್ರಮುಖ ಸುಧಾ ಮಾತನಾಡಿ ತಾಲೂಕಿನ ರೈತರ ಹಿತ ದೃಷ್ಠಿಯಿಂದ ಕನ್ನಡ ನಾಡು ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ರಾದ ಕೆ.ವಿ.ಕೃಷ್ಣ ಮೂರ್ತಿ ಇವರ ನೇತೃತ್ವದಲ್ಲಿ ತಾಲೂಕಿನ ಶಕ್ತಿ ಸ್ಥಳವಾಗಿರುವ ಅಮ್ಮನಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಗಾಣದಕಟ್ಟೆ, ಸಾರಥಿ, ಮಾವಿನಕಟ್ಟೆ, ಮಾಡಾಳು, ಹಿರೇಮಳಲಿ, ಬೈರನಹಳ್ಳಿ, ಜಯಂತಿನಗರ, ನಲ್ಲೂರು, ದೋಣಿಹಳ್ಳಿ, ಚಿಕ್ಕೂಲಿಕೆರೆ ಮಾರ್ಗವಾಗಿ ಚನ್ನಗಿರಿ ತಾಲೂಕು ಕಛೇರಿಗೆ ಬಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಿದ್ದು ನಮ್ಮಗಳ ನ್ಯಾಯ ಸಮ್ಮತವಾದ ಬೇಡಿಕೆಗಳ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಪ್ರತಿಭಟನೆಯಲ್ಲಿ ಸಮಿತಿ ಪ್ರಮುಖರಾದ ಶಶಿಕಲಾ ನಾಗರಾಜ್, ಬಸವಾಪುರ ರಂಗನಾಥ್, ಅರಶಿನಘಟ್ಟ ಸುರೇಶ್, ನಾಗೇಂದ್ರಪ್ಪ, ಮಂಜಣ್ಣ, ಚಿಕ್ಕೊಲಿಕೆರೆ ಡಿ.ರಮೇಶ್, ರಘುದೊಡ್ಡಮನಿ, ನಿರ್ಮಲಾ ಸೇರಿ ಮುಂತಾದವರಿದ್ದರು. ಪೈಲ್ ನಂ.20ಕೆಸಿಎನ್ಜಿ2)ತಾಲೂಕಿನ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಗಳ ವಿತರಿಸಬೇಕು ಎಂದು ಆಗ್ರಹಿಸಿ ಕನ್ನಡನಾಡು ಹಿತ ರಕ್ಷಣಾ ಸಮಿತಿ ವತಿಯಿಂದ ರಾಜ್ಯಾಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ ನೇತೃತ್ವದಲ್ಲಿ ತಾಲೂಕಿನ ಅಮ್ಮನಗುಡ್ಡ ಗ್ರಾಮದಿಂದ ಚನ್ನಗಿರಿ ತಾಲೂಕು ಕಚೇರಿ ವರೆಗೆ ಪಾದಯಾತ್ರೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.