ವಚನಗಳು ಸಂವಿಧಾನ ಒಟ್ಟಾಗಿ ಹೋದರೆ ಕಲ್ಯಾಣ ರಾಜ್ಯ

KannadaprabhaNewsNetwork |  
Published : May 09, 2026, 01:15 AM IST
8ಕೆಆರ್ ಎಂಎನ್ 6.ಜೆಪಿಜಿರಾಮನಗರ ನಗರಸಭೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. | Kannada Prabha

ಸಾರಾಂಶ

ರಾಮನಗರ: 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ಸಂವಿಧಾನದಲ್ಲಿಯೂ ಕಾಣುತ್ತಿದ್ದೇವೆ. ವಚನಗಳು ಬದುಕಿಗೆ ನೈತಿಕ ಚೌಕಟ್ಟು ಮತ್ತು ಸಂವಿಧಾನ ಕಾನೂನಿನ ಚೌಕಟ್ಟು ಕಲ್ಪಿಸುತ್ತದೆ. ಇವರೆಡು ಒಟ್ಟಿಗೆ ಹೋದಾಗ ಮಾತ್ರ ಕಲ್ಯಾಣ ರಾಜ್ಯ ಸ್ಥಾಪನೆ ಸಾಧ್ಯವಾಗಲಿದೆ ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಪ್ರತಿಪಾದಿಸಿದರು

ರಾಮನಗರ: 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ಸಂವಿಧಾನದಲ್ಲಿಯೂ ಕಾಣುತ್ತಿದ್ದೇವೆ. ವಚನಗಳು ಬದುಕಿಗೆ ನೈತಿಕ ಚೌಕಟ್ಟು ಮತ್ತು ಸಂವಿಧಾನ ಕಾನೂನಿನ ಚೌಕಟ್ಟು ಕಲ್ಪಿಸುತ್ತದೆ. ಇವರೆಡು ಒಟ್ಟಿಗೆ ಹೋದಾಗ ಮಾತ್ರ ಕಲ್ಯಾಣ ರಾಜ್ಯ ಸ್ಥಾಪನೆ ಸಾಧ್ಯವಾಗಲಿದೆ ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಪ್ರತಿಪಾದಿಸಿದರು.

ನಗರಸಭೆ ಆವರಣದಲ್ಲಿ ನಡೆದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಎಲ್ಲ ವಚನಕಾರರ ಅಂತಿಮ ಗುರಿ ಜಾತಿ, ಲಿಂಗ, ವರ್ಗ ಬೇಧವಿಲ್ಲದ ಸಮ ಸಮಾಜದ ನಿರ್ಮಾಣವಾಗಿತ್ತು. 20ನೇ ಶತಮಾನದಲ್ಲಿ ರಚನೆಯಾದ ಸಂವಿಧಾನದ ಆಶಯಗಳೂ ಇದೆಯಾಗಿತ್ತು ಎಂದರು.

ವಚನಕಾರರು ಪ್ರಜಾಪ್ರಭುತ್ವ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳನ್ನು ಪ್ರತಿಪಾದಿಸಿ, ಅನುಷ್ಠಾನಗೊಳಿಸಿದರು. ಅಂತಹದೇ ಕೆಲಸವನ್ನು 20 ನೇ ಶತಮಾನದಲ್ಲಿ ಭಾರತದ ಸಂವಿಧಾನದಲ್ಲಿ ಕಾಣುತ್ತಿದ್ದೇವೆ. ಸಂವಿಧಾನ ಜಾರಿ ಬಂದ ಮೇಲೆ ರಾಜತ್ವ, ಪಾಳೇಗಾರಿಕೆ ಸಂಸ್ಕೃತಿ ರದ್ದುಗೊಂಡಿತು. ವಚನಕಾರರು ಪ್ರತಿಪಾದಿಸಿದ ಪ್ರಜಾಪ್ರಭುತ್ವ , ಜಾತ್ಯತೀತ, ಸಾಮಾಜಿಕ ನ್ಯಾಯ,ಕಲ್ಯಾಣ ರಾಜ್ಯ , ಬಹುತ್ವ ಸಂವಿಧಾನದ ಮೂಲ ತತ್ವಗಳಾಗಿವೆ ಎಂದು ಹೇಳಿದರು.

ಸಾರಂಶ ಅರಿಯಬೇಕು:

ದೇಶದಲ್ಲಿ ಹುಟ್ಟುತ್ತಾ ಜಾತಿ, ಜಾತಿಗೊಂದು ಕಸುಬು ಇತ್ತು. ಬದಲಾಯಿಸಲು ಅವಕಾಶವೇ ಇರಲಿಲ್ಲ. ಜಾತಿ ಮತ್ತು ಕಸುಬನ್ನು ವಂಶಪಾರಂಪರ್ಯ ಮಾಡಲಾಗಿತ್ತು. ಈ ಜಾತಿ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ 12ನೇ ಶತಮಾನದ ವಚನಕಾರರು ಧ್ವನಿ ಎತ್ತಿದರು. ಆ ಸಿದ್ಧಾಂತವನ್ನು ಸಂವಿಧಾನದಲ್ಲಿಯೂ ಕಾಣಬಹುದಾಗಿದೆ. ವಚನ ಮತ್ತು ಸಂವಿಧಾನದ ಸಾರಾಂಶ ಅರಿಯುವ ಕಾರ್ಯ ನಿರಂತರವಾಗಬೇಕು.ನಮ್ಮಲ್ಲಿನ ಅನೇಕ ಜನರು ವಚನ - ಸಂವಿಧಾನವನ್ನು ಓದಲಿಲ್ಲ. ಓದಿದ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ. ಅರ್ಥ ಮಾಡಿಕೊಂಡ ಬಹುತೇಕು ಬದುಕಿನಲ್ಲಿ ಅದನ್ನು ಅನುಷ್ಠಾನ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಮಗೆ ಬೇಕಿರುವುದು ಬಸವಣ್ಣ, ಅಂಬೇಡ್ಕರ್ ಹಾಗೂ ಸಂವಿಧಾನದ ಅಮಲಲ್ಲ. ನಮಗೆಲ್ಲ ಅವುಗಳ ಅರಿವು ಬೇಕಿದೆ. ಇಂದು ಬಸವಣ್ಣ, ಅಂಬೇಡ್ಕರ್ ,ಕುವೆಂಪು ಫೋಟೋ ಇಟ್ಟುಕೊಂಡು ಜಾತಿ ರಾಜಕಾರಣ ಮಾಡುತ್ತಾರೆ. ಆ ದಾರ್ಶನಿಕರು ಒಂದು ಜಾತಿಗೆ ಸೀಮಿತರಾದವರಲ್ಲ . ಎಲ್ಲ ಜಾತಿ ಧರ್ಮಗಳ ಜನರ ಚೌಕಟ್ಟನ್ನು ಮೀರಿ ಜಗತ್ತಿನ ಮನಕುಲಕ್ಕೆ ಸಂದೇಶ ನೀಡಿದವರು. ಆ ಸಂದೇಶಗಳು ಇಡೀ ಮನುಕುಲದ ಎಲ್ಲ ಕಾಲಕ್ಕೂ ಪ್ರಸ್ತುತವಾಗಿರಲಿವೆ ಎಂದು ನಾಗಮೋಹನ್ ದಾಸ್ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. ಕನಕಪುರ ದೇಗುಲ‌ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಮರಳೇಗವಿ ಮಠದ ಶಿವರುದ್ರಸ್ವಾಮಿಗಳು, ಮಾಜಿ‌ ಶಾಸಕರಾದ ಸಿ.ಎಂ.ಲಿಂಗಪ್ಪ, ಎಚ್.ಎಂ.ರೇವಣ್ಣ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಪ್, ಪೌರಾಯುಕ್ತ ಡಾ.ಜಯಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಸ್.ಯೋಗಾನಂದ, ತಾಲೂಕು‌ ಅಧ್ಯಕ್ಷ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌...............

ಬಸವಣ್ಣರ ಕ್ರಾಂತಿಯಿಂದ ವಿಕಸಿತ ಸಮಾಜ ಸುಧಾರಣೆ

ರಾಮನಗರ: ವಿಶ್ವ ಗುರು ಬಸವಣ್ಣರವರು ಧಾರ್ಮಿಕ ನೆಲೆಗಟ್ಟನ್ನು ಮುಖ್ಯವಾಗಿಟ್ಟುಕೊಂಡು ಮಾಡಿದ ಕ್ರಾಂತಿ ವಿಕಸಿತ ಸಮಾಜವನ್ನು ಸುಧಾರಣೆ ಮಾಡುತ್ತಿದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ನಗರಸಭೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿದ ಶ್ರೀಗಳು, ಬಸವಣ್ಣರವರ ಸಾಮಾಜಿಕ ಸುಧಾರಣೆಗಳು ಕೇವಲ ಲೌಕಿಕ, ಸಾಮಾಜಿಕ ಹಾಗೂ ಮೇಲುಸ್ತರದಲ್ಲಿ ನಡೆದಿದ್ದು ಅಲ್ಲ. ಮನುಷ್ಯನ ಶ್ರೇಯಸ್ಸಿಗೆ ಮೋಕ್ಷ ಸಾಧನೆ, ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮಿಕ ನಡವಳಿಕೆ ಎಲ್ಲವನ್ನು ಒಟ್ಟುಗೂಡಿಸಿ ಸಮಗ್ರ ಬದಲಾವಣೆ ಆಗಬೇಕೆಂದು ಧಾರ್ಮಿಕ ತಳಹಾದಿಯ ಮೇಲೆ ಸಾಮಾಜಿಕ ಸುಧಾರಣೆ ತರಲು ಬಯಸಿದವರು ಎಂದರು.

ಬಸವಣ್ಣ ಜಗತ್ತು ಕಂಡ ಶ್ರೇಷ್ಠ ಸಂತರು. ಅವರ ವಚನಗಳು ಬಹುಶ ಲಭ್ಯವಾಗದಿದ್ದರೆ ಬಸವಣ್ಣ ಪೌರಾಣಿಕ ವ್ಯಕ್ತಿಯಾಗಿ ಉಳಿದು ಬಿಡುತ್ತಿದ್ದರು. ರಹಸ್ಯವಾಗ ಬಹುದಾಗಿದ್ದ ವಚನಗಳನ್ನು ಶರಣರು ಕಾಪಾಡಿದ ಕಾರಣದಿಂದ ಬಸವಣ್ಣರವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ದರ್ಶನ ಮಾಡುವ ಅವಕಾಶ ಸಿಕ್ಕಿದಂತಾಗಿದೆ ಎಂದು ತಿಳಿಸಿದರು.

ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿಯೂ ಬಂದಿದೆ. ಬಸವಣ್ಣರವರು ಮಾಡಿದ ಸಾಮಾಜಿಕ ಸುಧಾರಣೆ ಇಂದಿಗೂ ಮಾದರಿಯಾಗಿದೆ. ಆ ವಚನಗಳು ಮೊದಲೇ ಸಿಕ್ಕಿದ್ದರೆ ಸಮಾಜದಲ್ಲಿ ಸಮಾತನೆ ಇರುತ್ತಿತ್ತು. ಈಗ ಅದನ್ನು ಅಂಬೇಡ್ಕರ್ ರವರು ಸಂವಿಧಾನದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಜಾರಿಗೆ ತಂದಿದ್ದಾರೆ ಎಂದು ಶ್ರೀಗಳು ಹೇಳಿದರು.

(ಈ ಕೋಟ್‌ನ್ನು ಪ್ಯಾನಲ್‌ನಲ್ಲಿ ಬಳಸಿ ಸರ್‌)

ಕೋಟ್ .............

ದೇಶದಲ್ಲಿಯೇ ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪುತ್ಥಳಿ, ಸಂವಿಧಾನ ಪೀಠಿಕೆ ಸ್ಥಾಪಿಸಿರುವುದು. ಈಗ ಬಸವಣ್ಣರ ಪುತ್ಥಳಿ ಅನಾವರಣ ಮಾಡಿ ಕೆ.ಶೇಷಾದ್ರಿ ನಗರಸಭೆಗೆ ಕೀರ್ತಿ ತಂದಿದ್ದಾರೆ. ಬಸವಣ್ಣರ ತತ್ವಗಳನ್ನು ಸಂವಿಧಾನದಲ್ಲಿ ನೋಡುತ್ತಿದ್ದು, ಅದೆಲ್ಲವನ್ನು ಕಾನೂನಿನಲ್ಲಿ ಜಾರಿಗೆ ತರುತ್ತಿದ್ದೇವೆ. ಕನ್ನಡ ಸಾರಸ್ವತ ಲೋಕಕ್ಕೂ ಕೊಡುಗೆ ನೀಡಿದ ಬಸವಣ್ಣ ಮಹಾನ್ ಮಾನವತವಾದಿ, ಸಮಸಮಾಜದ ಚಿಂತಕರು.

- ಎಚ್.ಎಂ.ರೇವಣ್ಣ, ರಾಜ್ಯಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

8ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ನಗರಸಭೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ಸಾಧನೆಗೆ ಶ್ರಮ, ಸಮಯ ಅಗತ್ಯ: ಡಾಲಿ ಧನಂಜಯ್
ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ