ದೇಶಕ್ಕೆ ರಾಮನಗರ ನಗರಸಭೆ ಮಾದರಿ: ಶ್ರೀಗಳ ಅಭಿಮತ

KannadaprabhaNewsNetwork |  
Published : May 09, 2026, 01:15 AM IST
8ಕೆಆರ್ ಎಂಎನ್ 7.ಜೆಪಿಜಿರಾಮನಗರ ಸಭೆ ಆವರಣದಲ್ಲಿ ಅನಾವರಣಗೊಂಡ ಬಸವೇಶ್ವರರ ಪುತ್ಥಳ | Kannada Prabha

ಸಾರಾಂಶ

ರಾಮನಗರ: ನಗರಸಭೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ, ಸಂವಿಧಾನ ಪೀಠಿಕೆ ಅಳವಡಿಸಿ ಗಮನ ಸೆಳೆದಿದ್ದ ರಾಮನಗರ ನಗರಸಭೆ ಆವರಣದಲ್ಲಿ ಶುಕ್ರವಾರ ವಿಶ್ವಗುರು ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿತು

ರಾಮನಗರ: ನಗರಸಭೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ, ಸಂವಿಧಾನ ಪೀಠಿಕೆ ಅಳವಡಿಸಿ ಗಮನ ಸೆಳೆದಿದ್ದ ರಾಮನಗರ ನಗರಸಭೆ ಆವರಣದಲ್ಲಿ ಶುಕ್ರವಾರ ವಿಶ್ವಗುರು ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣಗೊಂಡಿತು.

ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ರವರು ಬಸವಣ್ಣರವರ ಪುತ್ಥಳಿ ಅನಾವರಣಗೊಳಿಸಿದರು. ಇದಕ್ಕೆ ವಿವಿಧ ಮಠಗಳ ಶ್ರೀಗಳು, ಜನಪ್ರತಿನಿಧಿಗಳು, ಸಮುದಾಯದ ಮುಖಂಡರು ಹಾಗೂ ಅಧಿಕಾರಿ ವರ್ಗ ಸಾಕ್ಷಿಯಾದರು.

ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಮಾತನಾಡಿ, ರಾಮನಗರ ನಗರಸಭೆ ತನ್ನ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿ , ಸಂವಿಧಾನ ಪೀಠಿಕೆ ಹಾಗೂ ಬಸವಣ್ಣ ಪುತ್ಥಳಿ ಅನಾವರಣಗೊಳಿಸಿ ದೇಶದ ಎಲ್ಲ ನಗರಸಭೆಗಳಿಗೆ ಮಾದರಿಯಾಗಿ ನಿಂತಿದೆ. ಅಧ್ಯಕ್ಷರು,ಸದಸ್ಯರು ಹಾಗೂ ಅಧಿಕಾರಿ ವರ್ಗಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂವಿಧಾನ ಮತ್ತು ವಚನ ಸಾಹಿತ್ಯದ ಸಂದೇಶವನ್ನು ಸಾರುವ ಕೆಲಸವನ್ನು ನಗರಸಭೆ ಯಶಸ್ವಿಯಾಗಿ ಮಾಡಿದೆ. ಸಂವಿಧಾನ ಮತ್ತು ಶರಣರ ಆಶಯಗಳನ್ನು ನಗರಸಭೆಯ ದಿನನಿತ್ಯದ ಕಾರ್ಯಗಳಲ್ಲಿ ಪ್ರತಿಬಿಂಬಿಸಬೇಕು. ಈ ಜನರ ಕಲ್ಯಾಣ ಸಾಧಿಸಬೇಕು. ಆ ದಿಕ್ಕಿನಲ್ಲಿ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿರವರು ಮುನ್ನಡೆಯಲಿ. ಜಿಲ್ಲೆಯ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಅವರಿಗೆ ಸಿಗಲೆಂದು ಹಾರೈಸಿದರು.

ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ,ರಾಮನಗರದ ಇತಿಹಾಸದಲ್ಲಿ ಮರೆಯಲಾಗದ ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದ್ದೇವೆ. ನಗರಸಭೆ ಕಚೇರಿ ಪ್ರವೇಶಿಸಿದ ಕೂಡಲೇ ಅಂಬೇಡ್ಕರ್ ರವರ ದರ್ಶನವಾಗುತ್ತದೆ. ನಂತರ ಸಂವಿಧಾನ ಪೀಠಿಕೆ ಓದಲು ಪ್ರೇರೇಪಿಸುತ್ತದೆ. ಈಗ ಬಸವಣ್ಣರವರ ಪುತ್ಥಳಿ ಸ್ಥಾಪಿಸಿ ಆಶೀರ್ವಾದ ಸಿಗುವಂತೆ ಮಾಡಿದ್ದಾರೆ. ಕಟ್ಟಕಡೆಯ ಸಮುದಾಯದ ಜನರನ್ನು ಗುರುತಿಸಿ ಸವಲತ್ತು ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಿರುವ ಕೆ.ಶೇಷಾದ್ರಿರವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

8ಕೆಆರ್ ಎಂಎನ್ 7.ಜೆಪಿಜಿ

ರಾಮನಗರ ಸಭೆ ಆವರಣದಲ್ಲಿ ಅನಾವರಣಗೊಂಡ ಬಸವೇಶ್ವರರ ಪುತ್ಥಳಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ಸಾಧನೆಗೆ ಶ್ರಮ, ಸಮಯ ಅಗತ್ಯ: ಡಾಲಿ ಧನಂಜಯ್
ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ