;Resize=(412,232))
ತುಮಕೂರು : ಕಲ್ಪತರು ನಾಡಿನಲ್ಲಿ ಹಕ್ಕಿಜ್ವರದ ರುದ್ರನರ್ತನ ಮುಂದುವರೆದಿದ್ದು, ದುರ್ಗದಹಳ್ಳಿ, ಹಿರೇಹಳ್ಳಿಯಲ್ಲಿ ಮತ್ತೆ 12 ನವಿಲುಗಳು ಸಾವನ್ನಪ್ಪಿವೆ. ಏ.16ರಂದು ಕೋಳಿಹಳ್ಳಿಯಲ್ಲಿ 45 ನವಿಲುಗಳು ಸಾವನ್ನಪ್ಪಿದ್ದ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ 12 ನವಿಲುಗಳು ಮೃತಪಟ್ಟಿದ್ದು, ಮೃತ ನವಿಲುಗಳ ಸಂಖ್ಯೆ ಒಟ್ಟು 57ಕ್ಕೆ ಏರಿಕೆಯಾಗಿದೆ.
ನವಿಲುಗಳಿಗೆ ಎಚ್5ಎನ್1 ಕಂಟಕವಾಗಿದ್ದು ಜಿಲ್ಲೆಯಾದ್ಯಂತ ಸೋಂಕಿನ ಭೀತಿ ಉಂಟಾಗಿದೆ. ಕಾಡುಪಕ್ಷಿಗಳಲ್ಲಿ ಮೊದಲ ಬಾರಿಗೆ ಹಕ್ಕಿಜ್ವರ ದೃಢಪಟ್ಟಿರುವುದು ಮತ್ತು ನವಿಲುಗಳ ಸಾವು ಮುಂದುವರಿದಿರುವುದರಿಂದ ಆತಂಕ ಶುರುವಾಗಿದೆ. ಮೃತಪಟ್ಟಿ ನವಿಲುಗಳ ಮಾಂಸವನ್ನು ಬೀದಿನಾಯಿಗಳು ಎಳೆದೊಯ್ಯುತ್ತಿದ್ದು, ಇದರಿಂದ ಮನುಷ್ಯರಿಗೆ ಸೋಂಕು ಹರಡುವ ಸಾಧ್ಯತೆಯಿದೆ ಎಂಬ ಭೀತಿಯಲ್ಲಿ ಗ್ರಾಮಸ್ಥರಿದ್ದಾರೆ.
ಈಗಾಗಲೇ ಮೃತ ನವಿಲುಗಳ ಅಂಗಾಂಶ ಪರೀಕ್ಷಿಸಿದ ಭೋಪಾಲ್ ಪ್ರಯೋಗಾಲಯ, ಹಕ್ಕಿಜ್ವರ ಎಂದು ದೃಢಪಡಿಸಿದೆ. ಶೆಟ್ಟಿಹಳ್ಳಿ, ಬಡ್ಡಿಹಳ್ಳಿ ಸೇರಿದಂತೆ ತುಮಕೂರು ನಗರದ ಗಡಿ ಭಾಗಗಳಲ್ಲಿ ನವಿಲುಗಳ ಸಂಚಾರ ಹೆಚ್ಚಿದ್ದು, ನಗರ ವಾಸಿಗಳಲ್ಲೂ ಈಗ ಸೋಂಕಿನ ಭಯ ಶುರುವಾಗಿದೆ.
- ನವಿಲು ಮಾಂಸವನ್ನು ಎಳೆದೊಯ್ಯುತ್ತಿರುವ ನಾಯಿಗಳು
- ಇದರಿಂದ ಮನುಷ್ಯರಿಗೂ ಸೋಂಕು ಹರಡುವ ಭೀತಿ
- ಹಕ್ಕಿಜ್ವರ ಖಚಿತಪಡಿಸಿದ ಭೋಪಾಲ್ ಪ್ರಯೋಗಾಲಯ