ಕರಡು ಮತದಾರರ ಪಟ್ಟಿ ಪ್ರಕಟ 28 ರವರೆಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಿ: ಎಡೀಸಿ ನಾಗರಾಜು

KannadaprabhaNewsNetwork | Published : Nov 1, 2024 12:16 AM

ಸಾರಾಂಶ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 272 ಮತಗಟ್ಟೆಗಳಲ್ಲಿ ಪುರುಷರು- 1,26,686, ಮಹಿಳೆಯರು- 1,28,487, ತೃತೀಯ ಲಿಂಗಿ- 10, ಒಟ್ಟು 2,55,183 ಮತದಾರರಿದ್ದಾರೆ. ಮದ್ದೂರು ಕ್ಷೇತ್ರದ ಒಟ್ಟು 254 ಮತಗಟ್ಟೆಗಳಲ್ಲಿ ಪುರುಷರು- 1,04,071, ಮಹಿಳೆಯರು- 1,11,727, ತೃತೀಯ ಲಿಂಗಿ- 20, ಒಟ್ಟು 2,15,818 ಮತದಾರರಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2025ರ ಜ.1ರ ಅರ್ಹತಾ ದಿನಾಂಕವನ್ನು ಮುಂದಿಟ್ಟುಕೊಂಡು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅ.29ರಂದು ಕರಡು ಮತದಾರರ ಪಟ್ಟಿ ಹಾಗೂ ಸೇವಾ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು.

ಕರಡು ಪಟ್ಟಿಯ ಮತದಾರರ ವಿವರ:

ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 272 ಮತಗಟ್ಟೆಗಳಲ್ಲಿ ಪುರುಷರು- 1,26,686, ಮಹಿಳೆಯರು- 1,28,487, ತೃತೀಯ ಲಿಂಗಿ- 10, ಒಟ್ಟು 2,55,183 ಮತದಾರರಿದ್ದಾರೆ. ಮದ್ದೂರು ಕ್ಷೇತ್ರದ ಒಟ್ಟು 254 ಮತಗಟ್ಟೆಗಳಲ್ಲಿ ಪುರುಷರು- 1,04,071, ಮಹಿಳೆಯರು- 1,11,727, ತೃತೀಯ ಲಿಂಗಿ- 20, ಒಟ್ಟು 2,15,818 ಮತದಾರರಿದ್ದಾರೆ.

ಮೇಲುಕೋಟೆ ಕ್ಷೇತ್ರದ ಒಟ್ಟು 264 ಮತಗಟ್ಟೆಗಳಲ್ಲಿ ಪುರುಷರು- 1,00,535, ಮಹಿಳೆಯರು- 1,03, 449, ತೃತೀಯ ಲಿಂಗಿ- 10, ಒಟ್ಟು 2,03,994 ಮತದಾರರಿದ್ದಾರೆ. ಮಂಡ್ಯ ಕ್ಷೇತ್ರದ 263 ಮತಗಟ್ಟೆಗಳಲ್ಲಿ ಪುರುಷರು- 1, 12, 324, ಮಹಿಳೆಯರು- 1,18,580, ತೃತೀಯ ಲಿಂಗಿ- 43, ಒಟ್ಟು 2,30,947 ಮತದಾರರಿದ್ದಾರೆ.

ಶ್ರೀರಂಗಪಟ್ಟಣ ಕ್ಷೇತ್ರದ ಒಟ್ಟು 249 ಮತಗಟ್ಟೆಗಳಲ್ಲಿ ಪುರುಷರು- 1,06,018, ಮಹಿಳೆಯರು- 1,11,581, ತೃತೀಯ ಲಿಂಗಿ- 44, ಒಟ್ಟು 2,17,643 ಮತದಾರರಿದ್ದಾರೆ. ನಾಗಮಂಗಲ ಕ್ಷೇತ್ರದ ಒಟ್ಟು 260 ಮತಗಟ್ಟೆಗಳಲ್ಲಿ ಪುರುಷರು- 1,07,188, ಮಹಿಳೆಯರು- 1,08,564, ತೃತೀಯ ಲಿಂಗಿ- 10, ಒಟ್ಟು 2,15,762 ಮತದಾರರಿದ್ದಾರೆ.

ಕೆ.ಆರ್ ಪೇಟೆ ಒಟ್ಟು 261 ಮತಗಟ್ಟೆಗಳಿದ್ದು, ಪುರುಷರು- 1,11,432, ಮಹಿಳೆಯರು- 1,12,542, ತೃತೀಯ ಲಿಂಗಿ- 10, ಒಟ್ಟು 2,23,984 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1823 ಮತಗಟ್ಟೆಗಳಿದ್ದು, ಪುರುಷರು-7,68,254, ಮಹಿಳೆಯರು-7,94,930, ತೃತೀಯ ಲಿಂಗಿ-147, ಒಟ್ಟು 15,63,331 ಮತದಾರರಿದ್ದಾರೆ.

ಸೇವಾ ಮತದಾರರ ವಿವರ:

ಮಳವಳ್ಳಿ ಕ್ಷೇತ್ರದಲ್ಲಿ ಪುರುಷ- 76, ಮಹಿಳೆ- 5 ಒಟ್ಟು 81, ಮದ್ದೂರು ಕ್ಷೇತ್ರದಲ್ಲಿ ಪುರುಷ- 140, ಮಹಿಳೆ- 2 ಒಟ್ಟು 142, ಮೇಲುಕೋಟೆ ಪುರುಷ- 62, ಮಹಿಳೆ- 0 ಒಟ್ಟು 62, ಮಂಡ್ಯ ಪುರುಷ- 116, ಮಹಿಳೆ- 5, ಒಟ್ಟು 121, ಶ್ರೀರಂಗಪಟ್ಟಣ ಪುರುಷ- 53, ಮಹಿಳೆ- 2, ಒಟ್ಟು 55, ನಾಗಮಂಗಲ ಪುರುಷ- 61, ಮಹಿಳೆ- 5 ಒಟ್ಟು - 66, ಕೆ ಆರ್ ಪೇಟೆ ಪುರುಷ- 92, ಮಹಿಳೆ- 3 ಒಟ್ಟು- 95, ಜಿಲ್ಲೆಯಲ್ಲಿ ಒಟ್ಟು ಪುರುಷ- 600, ಮಹಿಳೆ- 22 ಒಟ್ಟು 622 ಸೇವಾ ಮತದಾರರಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 2025ರ ಜ.1ಕ್ಕೆ ಅರ್ಹರಿರುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕ್ರಮವಹಿಸಲಾಗಿದೆ. ಸ್ವೀಕೃತವಾದ ನಮೂನೆಗಳನ್ನು ನಿಯಮಾನುಸಾರ ನಿಗದಿತ ಅವಧಿಯಲ್ಲಿ ವಿಲೇವಾರಿಗೊಳಿಸಲಾಗಿರುತ್ತದೆ ಎಂದರು.

ಕರಡು ಮತದಾರರ ಪಟ್ಟಿಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟಪಡಿಸಲಾಗಿದೆ.

ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 2025ರ ಜ.6 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಮಂಜುನಾಥ್, ರಮೇಶ್, ಬೊಮ್ಮಯ್ಯ, ಚುನಾವಣಾ ತಹಸೀಲ್ದಾರ್ ರೇಣು ಕುಮಾರ್ ಉಪಸ್ಥಿತರಿದ್ದರು.

Share this article