ಕಾಂಗ್ರೆಸ್ ಶಾಸಕರಿಗೆ ಲಂಚ ನೀಡಿದ ದಾಖಲೆ ಇದ್ದರೆ ಹಾಜರುಪಡಿಸಿ: ನಿಖಿಲ್‌ ಕುಮಾರಸ್ವಾಮಿ ಸವಾಲು

KannadaprabhaNewsNetwork |  
Published : Nov 19, 2024, 12:46 AM ISTUpdated : Nov 19, 2024, 01:04 PM IST
18ಎಚ್ಎಸ್ಎನ್11 : ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಶ್ರೇ ದೇವೇಶ್ವರ ದೇವಾಲಯಕ್ಕೆ ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಪತ್ನಿ ರೇವತಿ, ಪುತ್ರನೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ಶಾಸಕ ರವಿಗಣಿಗ ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರು. ಆಹ್ವಾನ ನೀಡಿರುವ ಸಾಕ್ಷ್ಯಇರುವುದಾದರೆ ದಾಖಲೆಗಳನ್ನು ಜನರ ಮುಂದೆ ಇಡಲಿ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶಾಸಕ ಗಣಿಗ ಅವರಿಗೆ ಸವಾಲು ಹಾಕಿದರು. 

 ಹೊಳೆನರಸೀಪುರ : ಶಾಸಕ ರವಿಗಣಿಗ ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರು. ಆಹ್ವಾನ ನೀಡಿರುವ ಸಾಕ್ಷ್ಯಇರುವುದಾದರೆ ದಾಖಲೆಗಳನ್ನು ಜನರ ಮುಂದೆ ಇಡಲಿ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶಾಸಕ ಗಣಿಗ ಅವರಿಗೆ ಸವಾಲು ಹಾಕಿದರು.

ತಾಲೂಕಿನ ಹರದನಹಳ್ಳಿಯಲ್ಲಿ ಇರುವ ಮನೆ ದೇವರು ಶ್ರೀ ದೇವೇಶ್ವರ ದೇವಾಲಯ ಹಾಗೂ ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಕಾರ್ತಿಕ ಸೋಮವಾರ ಪ್ರಯುಕ್ತ ಪತ್ನಿ ರೇವತಿ, ಪುತ್ರ ಅವ್ಯಾನ್‌ನೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಾತನಾಡಿದರು.

ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಆಗಬಾರದು, ೧೩೬ ಶಾಸಕರನ್ನು ಕಾಂಗ್ರೆಸ್ ಹೊಂದಿದೆ. ಜತೆಗೆ ಸರ್ಕಾರ ರಚಿಸಲು ಬೇಕಾಗಿರುವ ಶಾಸಕರನ್ನು ಮೀರಿ ರಾಜ್ಯದ ಜನ ಶಕ್ತಿ ತುಂಬಿದ್ದಾರೆ, ಆದ್ದರಿಂದ ಸುಮ್ಮನೆ ಮಾತನಾಡುವುದು ಸೂಕ್ತವಲ್ಲ, ನಾವು ಕಳೆದ ಒಂದುವರೆ ವರ್ಷದಲ್ಲಿ ನಡೆದಿರುವ ಭ್ರಷ್ಟಾಚಾರ, ಹಗರಣಗಳನ್ನು, ದುರಾಡಳಿತದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ರಾಜ್ಯದ ಜನತೆ ತಿರಸ್ಕಾರ ಮಾಡುವ ದಿನಗಳು ದೂರವಿಲ್ಲ ಎಂದು ಅಣಕವಾಡಿದರು.

ಕಳೆದ ವರ್ಷ ಚುನಾವಣೆ ಬಳಿಕ ಮನೆ ದೇವರ ಆಶೀರ್ವಾದ ಪಡೆದಿರಲಿಲ್ಲ, ಹಾಗಾಗಿ ಇಂದು ದೇವಸ್ಥಾನಕ್ಕೆ ಬಂದು ದರ್ಶನ ಪಡೆದಿದ್ದೇವೆ. ಈ ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆಯು ಅತ್ಯಂತ ಅನಿರೀಕ್ಷಿತವಾಗಿದ್ದು, ಸ್ಪರ್ಧಿಸಲು ಅನೇಕ ಕಾರಣಗಳಿವೆ. ಅದು ತೆರೆದ ಪುಸ್ತಕ, ಎಲ್ಲಾ ಜಗಜ್ಜಾಹೀರಾಗಿದೆ. ಪಕ್ಷದ ವರಿಷ್ಠರು ನೀಡಿದ ಆದೇಶಕ್ಕೆ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ಪಕ್ಷದ ಅಸ್ತಿತ್ವದ ಪ್ರಶ್ನೆ ಎಂದು ಹಳೇಮೈಸೂರು, ಉತ್ತರ ಕರ್ನಾಟಕ ಭಾಗದಿಂದ ಕಾರ್ಯಕರ್ತರು ಆಗಮಿಸಿ ನನ್ನ ಪರವಾಗಿ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡು ಚುನಾವಣೆಯಲ್ಲಿ ಗೆಲುವು ಆಗಲೇಬೇಕು ಎಂದು ಶ್ರಮಿಸಿದ್ದಾರೆ, ಮಾಜಿ ಸಚಿವರು, ಶಾಸಕರು, ಹಿರಿಯರು, ಯುವಕರು ಉತ್ಸಾಹದಿಂದ ನನ್ನ ಜೊತೆ ಹೆಜ್ಜೆ ಹಾಕುತ್ತಾ, ನನ್ನ ಚುನಾವಣೆಗಾಗಿ ಶ್ರಮಿಸಿದ್ದಾರೆ, ನನ್ನ ಜೀವನದ ಮುಂದಿನ ದೀರ್ಘ ಕಾಲ ರಾಜಕಾರಣದಲ್ಲಿ ಉದ್ದಗಲಕ್ಕೂ ನೆನಪಿಸಿಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವೇಗೌಡರು, ಕುಮಾರಸ್ವಾಮಿ ೧೨೦೦ ಕೋಟಿ ರು. ಅನುದಾನ ತಂದು ಚನ್ನಪಟ್ಟಣ ಅಭಿವೃದ್ಧಿ ಮಾಡಿದ್ದಾರೆ, ಜನರು ಆಶೀರ್ವಾದ ಮಾಡಿದರೆ ಮುಂದಿನ ದಿನಗಳಲ್ಲಿ ಯುವ ಸಮುದಾಯಕ್ಕೆ ಆದ್ಯತೆ ಕೊಡುತ್ತೇನೆ. ಉದ್ಯೋಗ ಸೃಷ್ಟಿ ಮಾಡಲು ದೃಢ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದರು.

ಚುನಾವಣೆ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ, ಬೆಟ್ಟಿಂಗ್‌ನಿಂದಾಗಿ ಯುವಕರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದ್ದರಿಂದ ಯಾರು ಬೆಟ್ಟಿಂಗ್ ಕಟ್ಟಬೇಡಿ, ಫೋನ್ ಸ್ವಿಚ್ ಆಫ್ ಮಾಡಿ, ಮಲಗಿ, ಭಗವಂತ ಇದ್ದಾನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜನರ ಹಾಗೂ ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಚನ್ನಪಟ್ಟಣದಿಂದ ರಾಜ್ಯ ಸರ್ಕಾರವನ್ನು ಎದುರಿಸುವ ನಾಯಕನಾಗಬೇಕೆಂದು ಬಿ.ಎಸ್.ಎಡಿಯೂರಪ್ಪ ಅವರು ನನ್ನ ಕರೆದು ಟಿಕೆಟ್ ಘೋಟಣೆ ಮಾಡಿದರು, ಟಿಕೆಟ್ ಕೊಟ್ಟಿರುವುದು ನನ್ನ ಸೌಭಾಗ್ಯ, ಅವಕಾಶ ಸಿಕ್ಕಿದೆ, ಕ್ಷೇತ್ರದ ಜನತೆ, ತಾಯಂದಿರು ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ, ನನ್ನ ಜೆಡಿಎಸ್ ಪಕ್ಷದ ಇತಿಹಾಸದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ, ಇದು ಇತಿಹಾಸದ ಪುಟಗಳಲ್ಲಿ ಉಳಿಯುವ ಚುನಾವಣೆ ಎಂದು ತಿಳಿಸಿದರು.

ನನ್ನ ಮನೆ ದೇವರು ಸಮ್ಮುಖದಲ್ಲಿ ನನ್ನ ಹೃದಯದಲ್ಲಿ ಸಂಪೂರ್ಣ ಗೆಲುವಿನ ವಿಶ್ವಾಸವಿದೆ ಎಂದು ಹೇಳುತ್ತಿದೆ. ಎನ್‌ಡಿಎ ಅಭ್ಯರ್ಥಿ ಗೆಲ್ಲಲಿ ಎಂದು ಹಲವೆಡೆ ಪ್ರಾರ್ಥನೆ ಮಾಡಿದ್ದಾರೆ, ಜನರ ಹಾಗೂ ದೇವರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಶಾಸಕ ಎಚ್.ಪಿ.ಸ್ವರೂಪ್, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ