ಗದಗ: ಪ್ರತಿಯೊಬ್ಬ ವಿದ್ಯಾರ್ಥಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಯಶಸ್ಸು ಸಾಧ್ಯ. ಅದಕ್ಕಾಗಿ ಎಲ್ಲ ಕ್ರೀಡಾಪಟುಗಳು ಛಲ ಬಿಡದೆ ಸತತ ಪ್ರಯತ್ನದಿಂದ ಕ್ರೀಡೆ ಕರಗತಗೊಳಿಸಿಕೊಳ್ಳಬೇಕು ಎಂದು ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 2023-24ನೆಯ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯದ 2ನೆಯ ವಲಯ ಪುರುಷರ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು.ಪ್ರಥಮ ಸ್ಥಾನವನ್ನು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಐಟಿ ಆ್ಯಂಡ್ ಕಾಮರ್ಸ್ ಕಾಲೇಜು, ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿಯ ಐಬಿಎಂ ಕಾಲೇಜ್ ಆಫ್ ಕಾಮರ್ಸ್ ಕಾಲೇಜು ತೃತೀಯ ಸ್ಥಾನವನ್ನು ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಶ್ರೀಕಾಂತ ಬಂಡಿ, ಕಾಲೇಜಿನ ಪ್ರಾಧ್ಯಾಪಕ ಡಾ. ಸುಧಾ ಕೌಜಗೇರಿ, ಡಾ. ಲಕ್ಷ್ಮಣ ಮುಳಗುಂದ ಡಾ. ಉಲ್ಲಾಸ್ ಶೆಟ್ಟಿ, ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಮಹಾನಂದ ಹಿರೇಮಠ, ಎನ್‌ಎಸ್ಎಸ್ ಅಧಿಕಾರಿ ಡಾ. ಅಪ್ಪಣ್ಣ ಹಂಜೆ, ಡಾ. ಮಂಜುನಾಥ ತ್ಯಾಲಗಡಿ, ಸೌಟ್ಸ್, ಗೈಡ್ಸ್ ಸಂಯೋಜಕ ಪ್ರಶಾಂತ ಹುಲಕುಂದ, ಜಿತೇಂದ್ರ ಜಹಾಗೀರದಾರ, ಡಾ. ಬಸವರಾಜ ಅಂಬಿಗೇರ, ಡಾ. ಪ್ರಬಲ ರೋಡ್ಡಣ್ಣವರ, ಗಣೇಶ ದೊಂಗಡಿ, ಸಂಗೀತಾ ಕಲಾಲ, ರಮೇಶ ಹುಲಕುಂದ ಹಾಗೂ ಬೋಧಕ ಮತ್ತು ಬೋಧಿಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ನವೀನ ತಿರ್ಲಾಪುರ ಸ್ವಾಗತಿಸಿದರು. ಡಾ. ಕಿರಣಕುಮಾರ ರಾಯರ್ ಕಾರ್ಯಕ್ರಮ ನಿರೂಪಿಸಿದರು. ಪದ್ಮಾವತಿ ತಳಕಲ್ ವಂದಿಸಿದರು.