ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಮಂಗಳವಾರ ಸಂಜೆ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಶ್ರೀ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಿ, ಮಾತನಾಡಿದರು. ೮, ೧೨ ಹಾಗೂ ೧೬ನೇ ಶತಮಾನದಲ್ಲಿ ಭೀಕರ ದಾಳಿಯ ಮೂಲಕ ಇಲ್ಲಿಯ ಸಂಸ್ಕೃತಿಯ ಮೌಲ್ಯಗಳನ್ನು ನಾಶ ಮಾಡಲು ಪ್ರಯತ್ನ ಮಾಡಿದ ಸಂದರ್ಭದಲ್ಲಿ ಯಾವೆಲ್ಲಾ ಕಾರಣಗಳು ಅಂತಹ ಸನ್ನಿವೇಶಕ್ಕೆ ಕಾರಣವಾಯಿತು ಎಂದು ತಿಳಿಯಲು ಪ್ರಯತ್ನ ಮಾಡಿಕೊಂಡಲ್ಲಿ ಭಾರತೀಯರಲ್ಲಿ ಇದ್ದಂತಹ ಅನೈತಿಕತೆ, ಭಾರತೀಯ ಸಮಾಜದಲ್ಲಿ ಇದ್ದ ತಾರತಮ್ಯಗಳು, ರಾಷ್ಟ್ರಪ್ರೇಮದ ಕೊರತೆ, ವ್ಯಕ್ತಿ ಇತಾಸಕ್ತಿಗಳು, ಸ್ವರ್ಥಪ್ರಜ್ಞೆಯೂ ಪರಕೀಯರ ದಾಳಿಗೆ ರತ್ನಗಂಬಳಿಯನ್ನು ಹಾಕಿಕೊಟ್ಟಿತ್ತು ಮತ್ತು ನಮ್ಮ ದೇಶವನ್ನು ಚಿದ್ರಚಿದ್ರ ಮಾಡಲಿಕ್ಕೆ ಮತ್ತು ದೇಶದ ಸಂಸ್ಕೃತಿಯನ್ನ ಅವಸಾನ ಮಾಡಲಿಕ್ಕೆ ಅವಕಾಶ ಕಲ್ಪಿಸಿತು ಎಂದರು.
ನಾವು ಹಬ್ಬಹರಿದಿನಗಳನ್ನು, ಜಾತ್ರೆ, ಪೂಜೆಗಳ ಆಚರಣೆಗಳನ್ನು ಮಾಡುತ್ತೇವೆ, ಹಿಂದೂ ಧರ್ಮವೆಂದರೆ ಪವಿತ್ರವಾದ ಭಾರತೀಯ ಭೂಮಿಯಲ್ಲಿ ಪ್ರಕಟವಾಗಿರುವ ಜೀವನ ಶೈಲಿಯ ಸಮಗ್ರ ರೂಪವಾಗಿದೆ, ಇದು ಕೇವಲ ಪೂಜೆ ಪುನಸ್ಕಾರಗಳ ಭಾಗವಲ್ಲ. ನಮ್ಮ ಮನೆ ಒಳಗೆ ಈಶ್ವರ, ರಾಮ, ಕೃಷ್ಣ, ವೆಂಕಟೇಶ್ವರ ದೇವರನ್ನೋ ಪೂಜೆ ಮಾಡಬಹುದು, ಅದು ನಮ್ಮ ಆಚರಣೆ. ಆದರೆ ರಾಷ್ಟ್ರೀಯ ಪ್ರಜ್ಞೆಯಡಿಯಲ್ಲಿ, ರಾಷ್ಟ್ರಧರ್ಮದಡಿಯಲ್ಲಿ ನಾವು ಭಾರತ ಮಾತೆಯನ್ನು ನಮ್ಮ ತಾಯಿಯಯಾಗೆ, ಮಾತೃದೇವತೆ ಎಂದು ಪೂಜಿಸಬೇಕು ಎಂಬ ಅಂಶವನ್ನು ಎಲ್ಲರಿಗೂ ತಿಳಿಸುವ ಪ್ರಜ್ಞಾ ಪೂರ್ವಕ ಕಾರ್ಯಕ್ರಮವಾಗಿದೆ. ಯಾವುದೇ ಧರ್ಮದ್ದನ್ನು ಅನುಸರಿಸಲಿ, ಆಚರಣೆಗಳನ್ನು ಪಾಲನೆ ಮಾಡಲಿ, ನಮಗೆ ಇವತ್ತಿನ ಅಗತ್ಯವೆನೆಂದರೆ, ಇಲ್ಲಿ ಹುಟ್ಟಿ, ಬೆಳೆದು, ಈ ದೇಶದ ಋಣದಲ್ಲಿ ಬದುಕುತ್ತಿರುವ ಎಲ್ಲರೂ ಇದು ನನ್ನ ದೇಶ, ನನ್ನ ಭಾರತಮಾತೆ, ಭಾರತಮಾತಾಕೀ ಜೈ ಎನ್ನುವ ಪ್ರಜ್ಞೆಯನ್ನು ಮನಪೂರ್ವಕವಾಗಿ ಒಪ್ಪಿಕೊಳ್ಳಬೇಕು ಎಂದು ಹೇಳಿದರು.ವಂದೇ ಮಾತರಮ್, ಭರತಖಂಡ ನಮ್ಮೆಲ್ಲರ ತಾಯಿ, ಇಲ್ಲಿ ಯಾವುದೇ ಭೇದವನ್ನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಏಣಿಸಿದ್ದೇಯಾದರೇ ಅವರು ದೇಶದ್ರೋಹಿಗಳು ಎಂದರು. ನಾವು ನಮ್ಮ ಸಂಸ್ಕೃತಿಯ ಒಳಗೆ ಪರಿಪೂರ್ಣವಾಗಿ ಬದುಕಬೇಕು ಮತ್ತು ಇತರೆ ಸಂಸ್ಕೃತಿಗಳನ್ನು ಕೂಡ ಗೌರವಿಸಬೇಕು ಎಂಬ ತತ್ವಜ್ಞಾನಕ್ಕೆ ಬದ್ಧರಾದ ಸಮುದಾಯದವರು ಭಾರತೀಯರು. ಆದ್ದರಿಂದ ಇಂದು ಇಡೀ ಜಗತ್ತು ಭಾರತೀಯ ಧರ್ಮದ ಕಡೆಗೆ, ಭಾರತೀಯ ಸಂಸ್ಕೃತಿಯ ಕಡೆಗೆ, ಭಾರತೀಯ ಮೌಲ್ಯಗಳ ಕಡೆಗೆ ತಲೆಭಾಗಿ ನೋಡುತ್ತಿದೆ. ಇಂತಹ ಮೌಲ್ಯಗಳ ಪುನರುತ್ಥಾನ ಆಗಬೇಕಾದರೇ ಪಾಶ್ಚಾತ್ಯ ಸಂಸ್ಕೃತಿ ಬಿಟ್ಟು ಬದುಕಿ, ನಮ್ಮ ಸಮಾಜ ಇನ್ನೂ ಗಟ್ಟಿಯಾಗಬೇಕಾದರೇ, ರಾಷ್ಟ್ರೀಯ ಧರ್ಮ ಶ್ರೇಷ್ಠತೆಯನ್ನು ಪಡೆದುಕೊಳ್ಳಬೇಕೆಂದರೆ ಜಾತಿ ಸಂಕೋಲೆಗಳನ್ನು ಕಿತ್ತು ಎಸೆಯಬೇಕು. ಭಾರತೀಯರ ಪರಿಪೂರ್ಣವಾದ ಸಂವಿಧಾನ ಶ್ರೇಷ್ಠವಾಗಿದೆ ಮತ್ತು ಅಂತಹ ರಾಷ್ಟ್ರಪ್ರಜ್ಞೆ ಹೊಂದಿರುವ ನಾವು ಎಲ್ಲರೂ ಒಂದೇ, ನಾವುಗಳು ಭಾರತೀಯರು ಎನ್ನುವ ಭಾವನೆ ಇಟ್ಟುಕೊಂಡು ಸಮಾನವಾಗಿ, ಸುಂದರವಾಗಿ ಬದುಕಿ, ದೇಶದ ಘನತೆಯನ್ನ ಹಾಗೂ ವೈಭವವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದೆ ಎಂದು ತಿಳಿಸಿ, ದೇಶಭಕ್ತಿ ಹಾಗೂ ದೇಶಸೇವೆ ಹಾಗೂ ಹಿಂದು ಸಮಾಜೋತ್ಸವ ಕುರಿತು ಸುದೀರ್ಘವಾಗಿ ಮಾತನಾಡಿದರು.ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಮಧ್ಯಾಹ್ನ ಶೋಭಯಾತ್ರೆ ಪ್ರಯುಕ್ತ ಬೈಕ್ ರ್‍ಯಾಲಿ ಅದ್ಧೂರಿಯಾಗಿ ನಡೆಯಿತು. ಸಂಜೆ ೫ ಗಂಟೆಗೆ ಚೆನ್ನಾಂಬಿಕ ವೃತ್ತದಿಂದ ಪ್ರಾರಂಭಗೊಂಡ ಶೋಭಯಾತ್ರೆಯಲ್ಲಿ ಶ್ರೀ ಎಸ್‌ಎಲ್‌ಎನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ವಾದ್ಯಘೋಷ ಹಾಗೂ ದೇಶಭಕ್ತಿ ಗೀತೆಗಳು, ರೈತರ ರಂಗ ಕುಣಿತ, ಕೋಲಾಟ, ನಾಸಿಕ್ ಡೋಲ್, ಭಜನಾ ತಂಡದಿಂದ ಕುಣಿತ ಭಜನೆ, ಸ್ತೋತ್ರ ಪಾರಾಯಣ, ಮಕ್ಕಳಿಗೆ ಮಹಾಪುರುಷರ ವೇಷಭೂಷಣ ಹಾಗೂ ಜೈ ಶ್ರೀರಾಮ್, ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂದು ಘೋಷಣೆ ಕೂಗುತ್ತಾ ಸಾವಿರಾರು ಹಿಂದು ಬಾಂಧವರ ಭವ್ಯ ಶೋಭಾಯಾತ್ರೆ ವೈಭವದಿಂದ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಮ ಮಧ್ಯಕ್ಷೇತ್ರದ ಕ್ಷೇತ್ರ ಸಂಪರ್ಕ ಪ್ರಮುಖ್ ಟಿ. ಎಸ್. ವೆಂಕಟೇಶ್ ಹಾಗೂ ರಾಷ್ಟ್ರೀಯ ಕ್ರೀಡಾಪಟು ವಿಜಯಕುಮಾರಿ ಮಾತನಾಡಿದರು. ಸುಮಲತಾ ಕಲ್ಪನಾ ಪ್ರಾರ್ಥಿಸಿದರು, ಪ್ರದೀಪ್ ರಾಜ್ ಸ್ವಾಗತಿಸಿದರು, ಎಸ್. ಗೋಕುಲ್ ವಂದಿಸಿದರು ಹಾಗೂ ಅನುಪಮ ನಿರೂಪಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳ ದೇಶಭಕ್ತಿ ನೃತ್ಯ ರೂಪಕಗಳು ಸಭಿಕರ ಕಣ್ಮನ ಸೆಳೆಯಿತು. ಹೊ.ಸು.ರಮೇಶ್, ನಿ.ಸೈನಿಕರಾದ ಈಶ್ವರ್ ಹಾಗೂ ವಸಂತ್ ಕುಮಾರ್, ಎಚ್.ವಿ. ಸುರೇಶ್ ಕುಮಾರ್, ಸುದರ್ಶನ್ ಎಚ್.ಕೆ., ರಾಮಪ್ರಸನ್ನ, ಅಶೋಕ್, ಗುರುರಾಜ್, ಕೃಷ್ಣಕಾಂತ್, ಶಂಕರ ನಾರಾಯಣ ಐತಾಳ್, ಜೈಪ್ರಕಾಶ್, ಸುಬ್ರಮಣ್ಯ, ಮುತ್ತುರಾಜ್, ಅಮಿತ್‌ಗೌಡ, ಮಳಲಿ ನಾರಾಯಣ್, ರಾಜು, ಆನಂದತೀರ್ಥ, ಮಹೇಶ್, ಮುರಳೀಧರ ಗುಪ್ತ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಇತರರು ಇದ್ದರು.