ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ಪರಿಸರ ದಿನ ‘ವನಮಹೋತ್ಸವ’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಈ ಭೂಮಿ ಮೇಲಿರುವ ಯಾವುದೇ ವನ್ಯ ಜೀವಿಯಾಗಲಿ, ಕ್ರಿಮಿ ಕೀಟಗಳಾಗಲಿ ಪರಿಸರದ ನಾಶ ಮಾಡುವುದಿಲ್ಲ. ಆದರೇ ಸಾಮಾಜಿಕ ಪ್ರಜ್ಞೆವಿರುವ ವಿದ್ಯಾವಂತ ಜನರೇ ಪರಿಸರವನ್ನು ನಾಶ ಮಾಡುತ್ತಾರೆ. ಅಭಿವೃದ್ಧಿ ಮತ್ತು ಅಧುನಿಕತೆಯ ಹೆಸರಿನಲ್ಲಿ ಹಸಿರು ಹೊದಿಕೆಯ ಮೇಲೆ ಕೊಡಲಿ ಏಟು ನೀಡುತ್ತಿದ್ದಾನೆ. ನಾವು ಪರಿಸರದ ವಿರುದ್ಧ ಹೋದ್ದಲ್ಲಿ ಪರಿಸರವೇ ನಮ್ಮ ವಿರುದ್ಧ ಬರುತ್ತಿದೆ. ಅಕಾಲಿಕ ಮಳೆ, ಅನಾವೃಷ್ಟಿ, ಅತೀವೃಷ್ಟಿ, ಬರಗಾಲ, ಸುನಾಮಿ, ಭೂಕಂಪ, ಭೂಕುಸಿತಗಳೇ ಇದಕ್ಕೆ ಸಾಕ್ಷಿ ಎಂದು ಮೌಂಟ್ ರೋಸರಿ ಚರ್ಚಿನ ಸಹಾಯಕ ಧರ್ಮಗುರು ಫಾ. ರೋಹನ್ ಮಸ್ಕರೇನಸ್ ಹೇಳಿದ್ದಾರೆ.
ಅವರು ಇಲ್ಲಿನ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆ ಆಯೋಜಿಸಿದ ಪರಿಸರ ದಿನ ‘ವನಮಹೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗಿಡ ನೆಡುವುದು ಮಾತ್ರವಲ್ಲ ನೆಟ್ಟು ಗಿಡ ಮರವಾಗಿ ಬೆಳೆಯುವಂತೆ ನೋಡಿ ಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿ ಪೂರ್ಣಾನಂದ ವನಮಹೋತ್ಸವದ ಮಹತ್ವವನ್ನು ತಿಳಿಸಿದನು. ವಿದ್ಯಾರ್ಥಿಗಳಿಂದ ಸಂಗೀತ ರೂಪಕ, ಸಮೂಹಗಾನ ಪರಿಸರ ಕಾಳಜಿಯ ನೃತ್ಯಗಳು ನಡೆದವು. ಪರಿಸರ ದಿನದ ಕುರಿತು ವಿದ್ಯಾರ್ಥಿಗಳೇ ನಿರ್ಮಿಸಿದ ಸಾಕ್ಷಚಿತ್ರದ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ಆನಿಶ್ ಮತ್ತು ಹರ್ಷಿತಾ ನಿರೂಪಿಸಿದರು. ಇಕೋ ಕ್ಲಬ್ಬಿನ ಅಧ್ಯಕ್ಷ ಅಶೆಲ್ ಸ್ವಾಗತಿಸಿದರು. ವಿದ್ಯಾರ್ಥಿ ಮನ್ವಿತ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.