ನಿಮ್ಮೆಲ್ಲರ ಇಚ್ಛೆ ಇದ್ದಲ್ಲಿ ಮಂತ್ರಿಯಾಗುವೆ: ಎಆರ್‌ಕೆ

KannadaprabhaNewsNetwork |  
Published : Mar 04, 2025, 12:36 AM IST
3ಕೆಜಿಎಲ್1ಕೊಳ್ಳೇಗಾಲ ಪಟ್ಟಣದ ಬೆಂಡ್ರಳ್ಳಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಎ ಆರ್ ಕೃಷ್ಣಮೂತಿ೯ ಮಾತನಾಡಿದರು. ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ ಪಿ ಶಂಕರ್, ರಮ್ಯ, ಮಂಜುನಾಥ್ ಇದ್ದರು. | Kannada Prabha

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಬೆಂಡ್ರಳ್ಳಿಯಲ್ಲಿ ಅಂಬೇಡ್ಕರ್ ಭವನ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.

ಕೊಳ್ಳೇಗಾಲ: ನನ್ನ ಜೊತೆ ಶಾಸಕರಾಗಿದ್ದವರೆಲ್ಲ ಇಂದು ಸಚಿವ, ಮುಖ್ಯಮಂತ್ರಿಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ನನಗೆ ಇನ್ನು ಸಹಾ ವನವಾಸ ಮುಗಿದಿಲ್ಲ, ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ಬೆಂಡರಹಳ್ಳಿ ಬಡಾವಣೆಯಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 10ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನನ್ನೊಂದಿಗೆ ಶಾಸಕರು, ಮಂತ್ರಿಗಳಾಗಿ ಕೆಲಸ ಮಾಡಿದವರು ಮುಖ್ಯಮಂತ್ರಿಗಳಾಗಿದ್ದಾರೆ, ಉನ್ನತ ಹುದ್ದೆ ಅಲಂಕರಿಸಿದ್ದು ನಿಮ್ಮೆಲ್ಲರ ಆಶೀರ್ವಾದ ಇದ್ದರೆ, ಭಗವಂತನ ಇಚ್ಛೆ ಇದ್ದಲ್ಲಿ, ನನ್ನ 19 ವರ್ಷದ ವನವಾಸಕ್ಕೆ ಮುಕ್ತಿ ದೊರಕುವಂತಾಗಲಿ ಎಂದರು.10 ಲಕ್ಷ ರು.ವೆಚ್ಚದಲ್ಲಿ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದು ಕಾಮಗಾರಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಿ, ಇದರ ಸದ್ಬಳಕೆಯಾಗಲಿ ಎಂದರು. ಇದಕ್ಕೂ ಮುನ್ನ ಮಾತನಾಡಿದ ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಶಂಕರ್ ಇನ್ನಿತರರು ಶಾಸಕರು ಮಂತ್ರಿಯಾಗಲಿ, ಆ ಮೂಲಕ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವಂತಾಗಲಿ ಎಂದರು.ಈ ವೇಳೆ ನಗರಸಭಾ ಸದಸ್ಯರಾದ ರಮ್ಯ ಮಹೇಶ್, ಮಂಜುನಾಥ್, ಜಿ.ಪಿ.ಶಿವಕುಮಾರ್, ದೇವಾನಂದ, ಮಾಜಿ ಸದಸ್ಯ ಮಹದೇವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ, ಬೆಂಡರಹಳ್ಳಿ ಯಜಮಾನರುಗಳಾದ ರಾಜಪ್ಪ, ಅಶೋಕ, ಮಹದೇವ, ಸೋಮಣ್ಣ, ತೋಪರಾಜ್, ಮುಖಂಡರುಗಳಾದ ಮಹೇಂದ್ರ, ಎಂ.ಶಾಂತರಾಜು, ಲಿಂಗರಾಜು, ಶ್ರೀಕಂಠ, ಭೀಮ, ಮಲ್ಲರಾಜು, ರವಿಕುಮಾರ್, ಲಿಂಗರಾಜು, ಜೈರಾಜು, ನಿರ್ಮಿತಿ ಕೇಂದ್ರದ ಉಪಯೋಜನಾ ವ್ಯವಸ್ಥಾಪಕ ಪ್ರತಾಪ್ ಕುಮಾರ್ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ