ಕಾಂಗ್ರೆಸ್ಸಲ್ಲಿ ಜೀ ಹುಜೂರ್‌ ಎನ್ನದಿದ್ದರೆ ತಲೆದಂಡ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Aug 12, 2025, 12:30 AM IST
ಹೊನ್ನಾಳಿ ಫೋಟೋ 11ಎಚ್.ಎಲ್.ಐ5. ಮಾಜಿ.ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸದಲ್ಲಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಕುರಿತು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಅವರ ವಿರುದ್ದ ಮಾತನಾಡಿದರೆ ಅವರನ್ನು ಹೊರ ಹಾಕುತ್ತಾರೆ, ಅಂತಹ ನಾಯಕರು ಕಾಂಗ್ರೆಸ್ ಪಕ್ಷದಿಂದ ಮೂಲೆ ಗುಂಪಾಗುತ್ತಾರೆ ಅಥವಾ ಸರ್ಕಾದ ಉನ್ನತ ಹುದ್ದೆಗಳಿಂದ ಕುಂಟು ನೆಪ ಹೇಳಿ ಕೆಳೆಗಿಳಿಸುತ್ತಾರೆ. ಅವರ ಸಾಲಿನಲ್ಲಿ ಈಗ ನೇರ, ನಿಷ್ಠುರವಾದಿ ಸಚಿವ ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಣಕವಾಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಗಾಂಧಿ ಮನೆತನದಲ್ಲಿ ಜೀ ಹುಜೂರ್ ಎನ್ನುವರಿಗೆ ಮಾತ್ರ ಮಣೆ ಹಾಕುತ್ತಾರೆ. ಅವರ ವಿರುದ್ದ ಮಾತನಾಡಿದರೆ ಅವರನ್ನು ಹೊರ ಹಾಕುತ್ತಾರೆ, ಅಂತಹ ನಾಯಕರು ಕಾಂಗ್ರೆಸ್ ಪಕ್ಷದಿಂದ ಮೂಲೆ ಗುಂಪಾಗುತ್ತಾರೆ ಅಥವಾ ಸರ್ಕಾದ ಉನ್ನತ ಹುದ್ದೆಗಳಿಂದ ಕುಂಟು ನೆಪ ಹೇಳಿ ಕೆಳೆಗಿಳಿಸುತ್ತಾರೆ. ಅವರ ಸಾಲಿನಲ್ಲಿ ಈಗ ನೇರ, ನಿಷ್ಠುರವಾದಿ ಸಚಿವ ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅಣಕವಾಡಿದರು.

ತಾಲೂಕಿನಲ್ಲಿ ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ದ ಮತಗಳ್ಳತನ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದ ವೇಳೆ ರಾಜಣ್ಣ ಅವರು ಅಂದು ನಮ್ಮ ಸರ್ಕಾರವೇ ಇತ್ತು ಎಂದು ನಿಜ ಹೇಳಿದ್ದಕ್ಕಾಗಿ ಅವರನ್ನು ಮಂತ್ರಿಸ್ಥಾನದಿಂದ ವಜಾ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷದಲ್ಲಿ ನೇರ ಮಾತುಗಳನ್ನಾಡಿ ಉಳಿಯುವುದು ಕಷ್ಟ ಎನ್ನುವುದಕ್ಕೆ ಮಾಜಿ ಸಚಿವ ರಾಜಣ್ಣ ಒಂದು ಉದಾಹರಣೆ ಎಂದು ಹೇಳಿದರು.

ಗಾಂಧಿ ಕುಟುಂಬದ ಸರ್ವಾಧಿಕಾರಿ ಧೋರಣೆಗೆ ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರ ತಲೆದಂಡವಾಗಿದೆ. ಸತ್ಯ ಹೇಳಿದವರಿಗೆ ಅಲ್ಲಿ ನೆಲೆ ಇಲ್ಲ. ಕೇವಲ ಹೊಗಳುಭಟ್ಟರಾಗಿ ಇದ್ದರೆ ಮಾತ್ರ ಕಾಂಗ್ರೆಸ್‌ನಲ್ಲಿ ನೆಲೆ ಸಿಗುತ್ತದೆ, ಇಂತಹ ಸರ್ವಾಧಿಕಾರಿ ಧೋರಣೆ ಕಾಂಗ್ರೆಸ್‌ನಲ್ಲಿದೆ ಎಂದು ನುಡಿದರು.

ಸಚಿವ ಕೆ.ಎನ್.ರಾಜಣ್ಣ ಸೆಪ್ಟಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಇನ್ನೇನು ಸೆಪ್ಟಂಬರ್ ಕೂಡ ಹತ್ತಿರ ಬರುತ್ತಿದೆ. ಒಟ್ಟಿನಲ್ಲಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದರಿಂದ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಮತ್ತಷ್ಟು ಹೆಚ್ಚಾಗಲಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪತನವಾಗುವುದು ಖಚಿತ ಎಂದು ಭವಿಷ್ಯ ನುಡಿದರು.

ಹಾಲಿ ಬಿಜೆಪಿ ಅಧ್ಯಕ್ಷ ಅರಕೆರೆ ನಾಗಜಾರ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಪುರಸಭೆ ಸದಸ್ಯ ಬಾಬೂ ಹೋಬಳದಾರ್, ಮುಖಂಡ ಮಂಜುನಾಥ್ ಇಂಚರ್, ಬಡಾವಣೆ ರಂಗಪ್ಪ,ಎಸ್.ಬೀರಪ್ಪ, ಕೆ.ಕೆ.ರೆಡ್ಡಿ ಮುಂತಾದವರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ