ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜು ವ್ಯವಸ್ಥೆ ಸುಸ್ಥಿತಿಯಲ್ಲಿಡಲು ಮೆಸ್ಕಾಂ ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಈ ಮಧ್ಯೆಯೂ ಗ್ರಾಹಕರಿಮದ ದೂರುಗಳು ಅಥವಾ ಸಲಹೆಗಳನ್ನು ಮೆಸ್ಕಾಂ ನಿರೀಕ್ಷಿಸಿದೆ. ಅಲ್ಲದೇ, ದೂರವಾಣಿ ಸಂಖ್ಯೆಗಳನ್ನು ನೀಡಿ, ಕರೆ ಮಾಡಿ ತಿಳಿಸುವಂತೆ ಮನವಿಯನ್ನೂ ಮಾಡಿದೆ.
ಕನ್ನಡಪ್ರಭ ವಾರ್ತೆ, ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ತರಹದ ವಿದ್ಯುಚ್ಛಕ್ತಿ ಅಥವಾ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳು ಇದ್ದಲ್ಲಿ ಮೆಸ್ಕಾಂ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬಹುದು ಎಂದು ಮೆಸ್ಕಾಂ ತಿಳಿಸಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿನ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಂಪರ್ಕಿಸಬೇಕಾದ ದೂ: 1912 ಮತ್ತು ಮೆಸ್ಕಾಂ ಶಿವಮೊಗ್ಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ದೂ: 08182-225887, 08182- 222369 ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ದೂ: 94458-289446, ಅಧೀಕ್ಷಕ ಎಂಜಿನಿಯರ್ ದೂ: 94482-89444 ಇಲ್ಲಿಗೆ ಸಂಪರ್ಕಿಸಬಹುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.