ತಾಕತ್ತಿದ್ದರೆ ದೇಶದ್ರೋಹಿಗಳ ಮೇಲೆ ಕ್ರಮ ಜರುಗಿಸಿ: ಶಿವಶಂಕರ ಸ್ವಾಮೀಜಿ

KannadaprabhaNewsNetwork |  
Published : Nov 09, 2025, 03:45 AM IST
ಬನಹಟ್ಟಿಯ ಎಂಎಂ ಬಂಗ್ಲೆ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಹಳೇಹುಬ್ಬಳ್ಳಿ ಕುರುಹಿನಶೆಟ್ಟಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು. | Kannada Prabha

ಸಾರಾಂಶ

ಒಂದು ಕೋಮಿನ ಓಲೈಕೆ ಮತ್ತು ದ್ವೇಷಭಾವನೆ ಮೂಲಕ ಹಿಂದೂಗಳ ಪವಿತ್ರ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ನಡೆಸುವವರಿಗೆ ಮನ್ನಣೆ ನೀಡುವುದಲ್ಲದೇ ಅಂತಹ ದುರುಳರನ್ನು ಬಂಧಿಸದೇ ಸೋಗಿನ ಮುಖವಾಡ ಹಾಕಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಇದೀಗ ಒಗ್ಗಟ್ಟಿನ ಧರ್ಮ ಒಡೆಯಲು ಧರ್ಮ ದ್ರೋಹಿಗಳೊಡನೆ ಕೈಜೋಡಿಸಿ ಷಡ್ಯಂತ್ರ ನಡೆಸಿದೆ ಎಂದು ಕುರುಹಿನಶೆಟ್ಟಿ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಸ್ವಾಮೀಜಿ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಒಂದು ಕೋಮಿನ ಓಲೈಕೆ ಮತ್ತು ದ್ವೇಷಭಾವನೆ ಮೂಲಕ ಹಿಂದೂಗಳ ಪವಿತ್ರ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ನಡೆಸುವವರಿಗೆ ಮನ್ನಣೆ ನೀಡುವುದಲ್ಲದೇ ಅಂತಹ ದುರುಳರನ್ನು ಬಂಧಿಸದೇ ಸೋಗಿನ ಮುಖವಾಡ ಹಾಕಿ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಇದೀಗ ಒಗ್ಗಟ್ಟಿನ ಧರ್ಮ ಒಡೆಯಲು ಧರ್ಮ ದ್ರೋಹಿಗಳೊಡನೆ ಕೈಜೋಡಿಸಿ ಷಡ್ಯಂತ್ರ ನಡೆಸಿದೆ ಎಂದು ಕುರುಹಿನಶೆಟ್ಟಿ ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿಮಠದ ಜಗದ್ಗುರು ಶಿವಶಂಕರ ಸ್ವಾಮೀಜಿ ಕಿಡಿಕಾರಿದರು.ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಕನ್ಹೇರಿ ಶ್ರೀಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದನ್ನು ಖಂಡಿಸಿ ಶನಿವಾರ ಬನಹಟ್ಟಿಯ ಸಹಕಾರಿ ನೂಲಿನ ಗಿರಣಿಯಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿ ಎಂ.ಎಂ.ಬಂಗ್ಲೆ ಎದುರು ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಉಮೇಶ ಸಿದರೆಡ್ಡಿ, ಧುರೀಣ ಶಿವಾನಂದ ಗಾಯಕವಾಡ ಮಾತನಾಡಿ, ನಾವೆಲ್ಲ ಬಸವತತ್ವ ನಂಬಿದವರು. ಶ್ರೀಗಳ ನಿಷೇಧ ನಮಗೆ ಕಿಚ್ಚು ಹೆಚ್ಚಿಸಿದೆ. ಹಿಂದೂ ದೇವದೇವತೆಗಳಿಗೆ ಅವಮಾನ ಮಾಡಿರುವ ಹಾಗೂ ಪವಿತ್ರ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್ ಎಂದವರು ಹಾಗೂ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದವರನ್ನು ಬ್ರದರ್ಸ್ ಎನ್ನುತ್ತ ಯಾವುದೇ ಕ್ರಮ ಜರುಗಿಸದ ಸರ್ಕಾರ, ಕನ್ಹೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿರುವುದು ಸರಿಯಲ್ಲ. ತಕ್ಷಣ ಆದೇಶ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಶಾಸಕ ಸಿದ್ದು ಸವದಿ ಸರ್ಕಾರದ ಹಿಂದೂ ವಿರೋಧ ನೀತಿಯನ್ನು ಖಂಡಿಸಿದರು.

ಹೊಸೂರಿನ ಪರಮಾನಂದ ಶ್ರೀಗಳು, ಮುಖಂಡರಾದ ಪ್ರವೀಣ ನಾಡಗೌಡ, ಮಹಾಂತೇಶ ಹಿಟ್ಟಿನಮಠ, ಶ್ರೀಶೈಲ ಬೀಳಗಿ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಲಚಂದ್ರ ನಂದೆಪ್ಪನವರ, ಯಲ್ಲಪ್ಪ ಕಟಗಿ, ಮಾರುತಿ ಗಾಡಿವಡ್ಡರ ನೇತೃತ್ವದಲ್ಲಿ ಮಹಿಳೆಯರು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಕೆಲಕಾಲ ರಸ್ತೆ ಬಂದ್‌ ಮಾಡಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿರುವುದು ಹಿಂದೂಗಳ ಭಾವನೆಗೆ ಬಲವಾದ ಕೊಡಲಿ ಪೆಟ್ಟು ನೀಡಿದೆ. ಸರ್ಕಾರಕ್ಕೆ, ಸಚಿವರುಗಳಿಗೆ ತಾಕತ್ತಿದ್ದರೆ ಸಂವಿಧಾನದ ಆಶಯಗಳಿಗೆ ಬೆಲೆಕೊಡದೆ ಪೊಲೀಸ್‌ ಠಾಣೆ ಸುಟ್ಟ ಮತ್ತು ಸದನದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಂಡು ತನ್ನ ಸಾಚಾತನ ತೋರಲಿ. ಬದಲಿಗೆ ಧರ್ಮ ವಿಭಜಕರ ಒತ್ತಾಸೆಗೆ ಕುಮ್ಮಕ್ಕು ನೀಡುತ್ತ ಕನ್ಹೇರಿ ಶ್ರೀಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಖಂಡನೀಯ. ರಾಜ್ಯ ಸರ್ಕಾರ ಹಿಂದೂ ಧರ್ಮ ಮತ್ತು ನಿರ್ಭೀತ ಸ್ವಾಮಿಗಳ ವಿರುದ್ಧ ಸಲ್ಲದ ಕ್ರಮ ಜರುಗಿಸುತ್ತ ಹಿಂದೂ ವಿರೋಧಿ ಗುಣ ಜಾಹೀರುಗೊಳಿಸಿದೆ.

- ಶಿವಶಂಕರ ಸ್ವಾಮೀಜಿ ವೀರಭಿಕ್ಷಾವರ್ತಿಮಠ ಹುಬ್ಬಳ್ಳಿ

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ