ಬಸವಣ್ಣ ವಚನವನ್ನು ಅರಿತರೆ ಸಂಸ್ಕಾರದಿಂದ ವಂಚಿತರಾಗಲು ಸಾಧ್ಯವಿಲ್ಲ : ಮಧು ಜಿ.ಮಾದೇಗೌಡ

KannadaprabhaNewsNetwork |  
Published : Aug 21, 2024, 12:40 AM IST
20ಕೆಎಂಎನ್ ಡಿ26 | Kannada Prabha

ಸಾರಾಂಶ

ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಮಹಾತ್ಮರ ತತ್ವಗಳನ್ನು ಪಾಲಿಸಬೇಕು. ಜಾತಿಬೇಧವಿಲ್ಲದೆ ಬಸವಣ್ಣನವರ ತತ್ವಗಳನ್ನು ಪಾಲಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ವಿಶ್ವಗುರು ಬಸವಣ್ಣನವರ ವಚನ ಅರಿತವನು ಸಂಸ್ಕಾರದಿಂದ ವಂಚಿತರಾಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ವೀರಶೈವ ಸಮುದಾಯ ಭವನದಲ್ಲಿ ಮಂಡ್ಯ ಜಿಲ್ಲಾ ಶರಣರ ಸಂಘಟನಾ ವೇದಿಕೆ, ಕಾಯಕಯೋಗಿ ಫೌಂಡೇಷನ್ ಮಂಡ್ಯ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜೀವನ ಚರಿತ್ರೆ ವಿಷಯದಲ್ಲಿ ಲಿಖಿತ ರಸಪ್ರಶ್ನೆ ಸ್ಪರ್ಧೆ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಮಹಾತ್ಮರ ತತ್ವಗಳನ್ನು ಪಾಲಿಸಬೇಕು. ಜಾತಿಬೇಧವಿಲ್ಲದೆ ಬಸವಣ್ಣನವರ ತತ್ವಗಳನ್ನು ಪಾಲಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು.

ಬಸವ ತತ್ವ ಪ್ರಚಾರಕ ಡಾ.ಚೇತನ್‌ಕುಮಾರ್ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಡ್ರಕ್ಸ್ ಮತ್ತು ಮಾದಕ ವ್ಯೆಸನಿಗಳಾಗಿ ಒತ್ತಡದಿಂದ ಜೀವನ ನಡೆಸುತ್ತಿದ್ದಾರೆ. ಇದರಿಂದ ಬಿಡುಗಡೆ ಹೊಂದಬೇಕಾದರೆ ಬಸವಣ್ಣನವರ ವಿಚಾರ ಧಾರೆಗಳನ್ನು ಅನುಸರಿಸಬೇಕೆಂದು ತಿಳಿಸಿದರು.

ಶರಣ ಸಂಘಟನಾ ವೇದಿಕೆ ಜಿಲ್ಲಾಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಮಾತನಾಡಿದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾದ ತೇಜ ಪ್ರಥಮ 3 ಸಾವಿರ ನಗದು, ವರ್ಷಿತಾ ಮತ್ತು ಕೃಪಾಂಜಲಿ ದ್ವಿತೀಯ ೨ ಸಾವಿರ ನಗದು, ಹರ್ಷಿಯಾ ತೃತೀಯ 1 ಸಾವಿರ ನಗದು ಬಹುಮಾನ ಪಡೆದುಕೊಂಡರು.

ಈ ವೇಳೆ ಆರಕ್ಷಕ ಉಪನಿರೀಕ್ಷಕ ರಾಮಸ್ವಾಮಿ, ವೀರಶೈವ ಕ್ಷೇಮಾವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ, ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಎಂ.ಸುಭ್ರಮಣ್ಯ, ಸಮಾಜ ಸೇವಕ ಬಬ್ರುವಾಹನ, ಆರ್.ಪ್ರಭುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಲಿಂಗಾಯುತ ಮಹಾಸಭಾದ ಅಧ್ಯಕ್ಷ ಮಂಜುನಾಥ್, ಮದ್ದೂರು ಘಟಕದ ಅಧ್ಯಕ್ಷ ವಿಜಯ್‌ಕುಮಾರ್, ಮಳವಳ್ಳಿ ಘಟಕದ ಅಧ್ಯಕ್ಷ ಸುಭ್ರಮಣ್ಯಸ್ವಾಮಿ, ರಾಗಿಮುದ್ದನಹಳ್ಳಿ ಗೌರವಾಧ್ಯಕ್ಷ ರಮೇಶ್, ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾವೈಬಿಶ್ರೀ, ಜಿಲ್ಲಾಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾಉಪಾಧ್ಯಕ್ಷ ಶಿವಲಿಂಗಪ್ಪ, ಉಪನ್ಯಾಸಕಿ ಮಾನಸ, ಮಹದೇವಸ್ವಾಮಿ, ಡಾ.ದರ್ಶನ್, ರಾಜಶೇಖರ್, ದೀಪ, ಸಣ್ಣಮುಖಸ್ವಾಮಿ, ನಿಜಗುಣ, ಸೌಮ್ಯ, ವಿಜಯ್‌ಕುಮಾರ್, ಶಿವಮೂರ್ತಿ, ಸೋಮಶೇಖರ್, ರಮೇಶ್, ನಾಗೇಶ್ ಸೇರಿದಂತೆ ಎಲ್ಲಾ ಪದಾಧಿಕಾರಿಗಗಳು ಹಾಜರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...