ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಫೌಂಡೇಷನ್, ಎನ್‌ಎಸ್‌ಎಸ್ ಘಟಕ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ನೆನಪಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪರೀಕ್ಷಾ ಭಯ ಬಿಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿ ಪರೀಕ್ಷಾ ಜ್ವರದ ಭಯ ಕಾಡುತ್ತಿದೆ. ಆತಂಕದಿಂದ ಎಲ್ಲವನ್ನು ಮರೆತುಕೊಳ್ಳುವಂತಾಗಿದೆ. ಭಯವೇ ನಮ್ಮ ಶತ್ರು. ಪರೀಕ್ಷೆ ಎಂಬುದು ತಾವು ಓದಿರುವುದನ್ನು ಬರೆಯುವುದು. ಇದಕ್ಕೆ ಏಕೆ ಭಯ. ಪರೀಕ್ಷೆಯನ್ನು ಮಿತ್ರನಂತೆ ಸ್ವಾಗತಿಸಿ ಎಂದರು.ಭಯಕ್ಕೆ ಮದ್ದಾಗಿ ಸುಗಮ- ಸಂಗೀತ ಗೀತೆಗಳನ್ನು ಗುನುಗಿ. ಇದರಿಂದ ಹೊಸ ಚೈತನ್ಯ ಸಿಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಸರ್ಕಾರಿ ಶಾಲಾ- ಕಾಲೇಜುಗಳು ಉಳಿದಿವೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆ ವ್ಯಾಮೋಹದಿಂದ ಸರ್ಕಾರಿ ಶಾಲೆ- ಕಾಲೇಜು ಮುಚ್ಚುವ ಹಂತ ತಲುಪಿವೆ. ಈಗಾಗಲೇ ಮಂದಗೆರೆ, ಆನೆಗೊಳ ಸರ್ಕಾರಿ ಕಾಲೇಜು ಮುಚ್ಚಿದೆ. ಹೋಬಳಿ ಕೇಂದ್ರದಲ್ಲಿ ಇರುವುದು ಕಿಕ್ಕೇರಿ ಕಾಲೇಜು. ಇದನ್ನಾದರೂ ಉಳಿಸಲು ವಿದ್ಯಾರ್ಥಿಗಳು ಮುಂದಾಗಬೇಕು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ವಾಚು ಅಕಾಡೆಮಿಯಿಂದ ಬಹುಮಾನ ನೀಡಲಾಗುವುದು ಎಂದು ಆತ್ಮಸ್ಥೈರ್ಯ ತುಂಬಿದರು.
ವಿದ್ಯಾರ್ಥಿಗಳು ಕನ್ನಡ ಬಾವುಟ ಹಿಡಿದು ನಾಡಗೀತೆ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ, ಗೆಲುವೇ ಗೆಲುವೆ ನಮಗೆಂದಿಂದಿಗೂ ಗೆಲುವೇ, ಏದ್ದೇಳಿ ಮಕ್ಕಳೇ ಸನ್ನದ್ಧರಾಗಿ ಗೀತೆಗಳನ್ನು ಮಕ್ಕಳೊಂದಿಗೆ ಹಾಡಿ ಪರೀಕ್ಷೆ ಭಯದ ಒತ್ತಡ ನಿವಾರಣೆಗೆ ಸ್ಫೂರ್ತಿಯಾದರು.