ಕನ್ನಡಪ್ರಭ ವಾರ್ತೆ ಕೆಜಿಎಫ್ಯಾವುದೇ ಅಸೆ ಅಕಾಂಕ್ಷೆಗಳಿಗೆ ಒಳಗಾಗದೆ ಜನರ ಸೇವೆ ಮಾಡಿದಾಗ ದೇವರು ಯಾವ ಸಂದರ್ಭದಲ್ಲಿ ಏನು ಕೊಡಬೇಕು ಅದನ್ನು ಕೊಡುತ್ತಾನೆ ಎಂದು ನಗರಸಭೆಯ ನೂತನ ಸ್ಥಾಯಿ ಸಮಿತಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಅವರಿಗೆ ಪರೊಕ್ಷವಾಗಿ ಶಾಸಕಿ ರೂಪಕಲಾ ಶಶಿಧರ್ ಕಿವಿಮಾತು ಹೇಳಿದರು.
ನಗರಸಭೆ ಕಚೇರಿಯಲ್ಲಿ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ದೇವರು ಅವಕಾಶ ಕೊಟ್ಟಾಗ ತಾಯಿ ಸೇವೆ ಮಾಡುತ್ತೇನೆಂದು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ದೇವರು ರಕ್ಷಿಸುತ್ತಾನೆ ಎಂದರು.ಜವಾಬ್ದಾರಿಯಿಂದ ಸೇವೆ ಸಲ್ಲಿಸಿ
ನೀವು ನಿಮ್ಮ ಮನೆಯಲ್ಲಿ ತಾಯಿ ಮತ್ತು ನಿಮ್ಮ ಮಗಳಿಗೆ ಯಾವ ರೀತಿ ದ್ರೋಹ ಮಾಡೊದಿಲ್ಲವೊ ಅದೇ ರೀತಿ ನಿಮ್ಮ ಪಕ್ಷದ ವಿಷಯದಲ್ಲಿಯೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ಪರೋಕ್ಷವಾಗಿ ಸೂಚಿಸಿದರು. ಕಳೆದ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ವಳ್ಳಲ್ ಮುನಿಸ್ವಾಮಿ ಅನ್ಯ ಪಕ್ಷದ ಮುಖಂಡರ ಜೊತೆ ಗುರುತಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು, ಈ ಹಿನ್ನೆಲೆಯಲ್ಲಿ ವಳ್ಳಲ್ ಮುನಿಸ್ವಾಮಿ ಅವರ ಪತ್ನಿ ಶಾಂತಿ ವಳ್ಳಲ್ ಮುನಿಸ್ವಾಮಿ ಅವರಿಗೆ ಅಧ್ಯಕ್ಷೆ ಆಗುವ ಅವಕಾಶ ತಪ್ಪಿಹೋಗಿತ್ತು. ಈ ಹಿನ್ನೆಲೆಯಲ್ಲಿ ವಳ್ಳಲ್ ಮುನಿಸ್ವಾಮಿ ಶಾಸಕರ ವಿರುದ್ದ ಮುನಿಸಿಕೊಂಡು ಯಾವುದೇ ಸಭೆ ಸಮಾರಂಭಗಳಿಗೆ ಹೋಗದೆ ಅಂತರವನ್ನು ಕಾಯ್ದುಕೊಂಡಿದ್ದರು. ವಳ್ಳಲ್ ಮುನಿಸ್ವಾಮಿಗೆ ಪಟ್ಟನಗರಸಭೆ ಆಡಳಿತವು ಶಾಸಕರು ಅಂದುಕೊಡಂತೆ ಚುರುಕಿನಿಂದ ಸಾಗಲಿಲ್ಲ, ನಗರಸಭೆ ಆಡಳಿತವು ದಿಕ್ಕುತಪ್ಪಿರುವುದನ್ನು ಅರಿತು ಶಾಸಕರು ಮತ್ತೆ ತಮ್ಮ ಹಿಂಬಾಲಕರ ಮೂಲಕ ವಳ್ಳಲ್ ಮುನಿಸ್ವಾಮಿ ಅವರನ್ನು ಮನವೊಲಿಸಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿ ನಗರಸಭೆ ಆಡಳಿತಕ್ಕೆ ವೇಗ ನೀಡಲು ತೀರ್ಮಾನಿಸಿದ್ದರು.
೩೦ ತಿಂಗಳ ನಗರಸಭೆ ಆಡಳಿತವನ್ನು ಉತ್ತಮವಾಗಿ ನಿಭಾಯಿಸಿ ಶಾಸಕರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದ್ದರು, ವಳ್ಳಲ್ ಮುನಿಸ್ವಾಮಿ ಅವರಿಗೆ ಸ್ಥಾಯಿ ಸಮಿತಿ ಹುದ್ದೆಯಲ್ಲಿ ಕೂರಿಸಿದರೆ ನಗರಸಭೆ ಆಡಳಿತವನ್ನು ಬಿಗಿ ಮಾಡಿ ಸೂಸತ್ರವಾಗಿ ನಡೆಸಲು ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳನ್ನು ಹಾಕಿ ವಳ್ಳಲ್ ಮುನಿಸ್ವಾಮಿ ಅವರನ್ನು ಸಮಾಧಾನಪಡಿಸುವುದರ ಜೊತೆಗೆ ನಗರಸಭೆ ಅಡಳಿತಕ್ಕೆ ವೇಗ ನೀಡಬಹುದು ಎಂಬುದು ಶಾಸಕಿ ರೂಪಕಲಾ ಲೆಕ್ಕಾಚಾರವಾಗಿದೆ.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಸದಸ್ಯರಾದ ಮಾಣಿಕ್ಯಂ, ಕರುಣಾಕರನ್, ಪೌರಾಯುಕ್ತ ಪವನ್‌ಕುಮಾರ್, ಎಇಇ ಮಂಜುನಾಥ್ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.