ಶಿರಸಿ:
ಕಾರ್ಯಕರ್ತ ರಾಜೇಶ ಶೆಟ್ಟಿ, ನಮ್ಮನ್ನು ಬಿಜೆಪಿಗೆ ಕರೆದುಕೊಂಡು ಬಂದವರೇ ನೀವು. ಮುಂದಿನ ೫ ವರ್ಷ ಲೋಕಸಭೆ ಪ್ರತಿನಿಧಿಯಾಗಿ ನೀವು ಇರಬೇಕು. ಒಂದೊಮ್ಮೆ ಸ್ಪರ್ಧಿಸಲು ನಿರಾಕರಿಸಿದರೆ ಆಮರಣಾಂತ ಉಪವಾಸ ಮಾಡುತ್ತೇವೆ ಎಂದು ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಕಾಡಿನಲ್ಲಿ ಹುಲಿ ಇದ್ದರೆ ಗತ್ತು ಇರುತ್ತದೆ. ಸಂಸತನಲ್ಲಿ ನಮ್ಮ ಉತ್ತರಕನ್ನಡದ ಹುಲಿ ಇರಬೇಕು ಎಂದು ಆಗ್ರಹಿಸಿದರು. ಜಿಪಂ ಮಾಜಿ ಸದಸ್ಯೆ ರೇಖಾ ಹೆಗಡೆ ಭಟ್ಕಳದಲ್ಲಿ ಒಂದು ಹೆಣ್ಣು ಮಗಳು ನಿರ್ಭಯವಾಗಿ ಓಡಾಡುವ ಇಂದಿನ ಸ್ಥಿತಿಗೆ ಅನಂತಕುಮಾರ ಹೆಗಡೆ ಕಾರಣ. ಇದುವರೆಗೂ ರಾಜಕೀಯ ವ್ಯಕ್ತಿಯಾಗದೇ ಆತ್ಮೀಯವಾಗಿ ನಮ್ಮನ್ನೆಲ್ಲ ಕಂಡವರು. ನೀವು ಸ್ಪರ್ಧಿಸಲೇಬೇಕು ಎಂದು ಆಗ್ರಹಿಸಿದರು. ನಗರಸಭೆ ಮಾಜಿ ಅಧ್ಯಕ್ಷ ರಮೇಶ ಆಚಾರಿ, ಸಿಪಿ ಪಾಟೀಲ, ಗಣೇಶ ಸಣ್ಣ ಲಿಂಗಣ್ಣ, ಪ್ರಕಾಶ ಸಾಲೇರ್ ಇತರರು ಇದೇ ಆಗ್ರಹ ಮಾಡಿದರು.ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.
ರಾಜ್ಯ ಸರ್ಕಾರಕ್ಕೆ ಕೇಂದ್ರ ಅನುದಾನ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅನಂತಕುಮಾರ ಹೆಗಡೆ, ಸೋಗಲಾಡಿತನದ ಬದಲು ಸರಿಯಾದ ಯೋಜನೆಗಳನ್ನು ರೂಪಿಸಿಕೊಂಡು ಪ್ರಧಾನಿ ಭೇಟಿ ಮಾಡಿದ್ದರೆ ಸೂಕ್ತ ಅನುದಾನ ಬಿಡುಗಡೆ ಆಗುತ್ತಿತ್ತು. ಯಾವುದೋ ಯೋಜನೆ ಹಾಕಿಕೊಂಡು ಒಸಿ ಚೀಟಿ ತರಹ ಕೇಂದ್ರಕ್ಕೆ ಕಳಿಸಿದರೆ ಇದೇ ರೀತಿ ಆಗುತ್ತದೆ. ಯಾವುದೇ ಚೌಕಟ್ಟು ಇರದ ಯೋಜನೆ ಕಳಿಸಿದರೆ ಬಿಡುಗಡೆ ಮಾಡಲು ಹಣ ಸಿದ್ದರಾಮಯ್ಯನ ಅಪ್ಪನ ಆಸ್ತಿಯೇನೂ ಅಲ್ಲ. ಕೇಂದ್ರ ಸರ್ಕಾರಕ್ಕೆ ಯೋಜನೆಗಳನ್ನು ಸಲ್ಲಿಸುವಾಗ ಅದಕ್ಕೊಂದು ವಿಧಿ ವಿಧಾನಗಳಿರುತ್ತವೆ. ಸರಿಯಾಗಿ ಯೋಚನೆ ಮಾಡಿ ಸಿದ್ದರಾಮಯ್ಯ ಮಾತನಾಡಲಿ ಎಂದರು.