ದೇವರ ವೇಷ ಧರಿಸಿದರೆ ದೈವತ್ವದ ನೆಮ್ಮದಿ ಸಿಗಲಿದೆ

KannadaprabhaNewsNetwork |  
Published : Sep 04, 2024, 01:54 AM IST
೦೩ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ದಿವ್ಯಭಾರತಿ ಮಹಿಳಾ ಮಂಡಳಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಕೃಷ್ಣ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸಿ.ಪಿ.ರಮೇಶ್, ಜ್ಯೋತಿ, ಸಾಗರ್, ವೆಂಕಟೇಶ್‌ಭಟ್, ವಿದ್ಯಾಪೈ, ಸವಿತಾ, ಕವಿತಾ, ವೈಶಾಲಿ, ವಿದ್ಯಾಶೆಟ್ಟಿ ಇದ್ದರು. | Kannada Prabha

ಸಾರಾಂಶ

ಮುಗ್ಧ ಮನಸ್ಸಿನ ಮಕ್ಕಳಿಗೆ ದೇವರ ವೇಷಭೂಷಣಗಳನ್ನು ಧರಿಸಿ ಆನಂದಪಡುವುದರಿಂದ ಪೋಷಕರ ಮನಸ್ಸಿಗೆ ನೆಮ್ಮದಿ ಲಭಿಸಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಹೇಳಿದರು. ಪಟ್ಟಣದ ದಿವ್ಯಭಾರತಿ ಮಹಿಳಾ ಮಂಡಳಿ ವತಿಯಿಂದ ರೋಟರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಮುಗ್ಧ ಮನಸ್ಸಿನ ಮಕ್ಕಳಿಗೆ ದೇವರ ವೇಷಭೂಷಣಗಳನ್ನು ಧರಿಸಿ ಆನಂದಪಡುವುದರಿಂದ ಪೋಷಕರ ಮನಸ್ಸಿಗೆ ನೆಮ್ಮದಿ ಲಭಿಸಲಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಹೇಳಿದರು. ಪಟ್ಟಣದ ದಿವ್ಯಭಾರತಿ ಮಹಿಳಾ ಮಂಡಳಿ ವತಿಯಿಂದ ರೋಟರಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಟಾಣಿ ಮಕ್ಕಳಿಗೆ ದೇವರ ವೇಷಭೂಷಣಗಳನ್ನು ಹಾಕಿದಾಗ ಅವರು ನಿಜವಾದ ದೇವರ ರೂಪದಲ್ಲಿಯೇ ಕಾಣುತ್ತಾರೆ. ಆಗ ಅವರನ್ನು ನೋಡುವುದೇ ಒಂದು ಆನಂದ. ಮಹಿಳಾ ಮಂಡಳಿಯು ಈ ನಿಟ್ಟಿನಲ್ಲಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯವಾಗಿದೆ ಎಂದರು.ದಿವ್ಯ ಭಾರತಿ ಮಹಿಳಾ ಮಂಡಳಿ ಅಧ್ಯಕ್ಷ ಜ್ಯೋತಿ ಮೂರ್ತಿ ಮಾತನಾಡಿ, ಮಕ್ಕಳಲ್ಲಿ ದೇವರ ಪ್ರತಿರೂಪವನ್ನು ಕಾಣಬೇಕು ಎಂಬ ಉದ್ದೇಶದಿಂದ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿದ್ದು, ಐವತ್ತಕ್ಕೂ ಅಧಿಕ ಪುಟಾಣಿಗಳು ಸಕ್ರಿಯವಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಪುಟಾಣಿ ಮಕ್ಕಳು ದೇವರ ಸ್ವರೂಪವಾಗಿದ್ದು, ಅವರುಗಳು ವೇಷ ಧರಿಸಿದಾಗ ಪೋಷಕರಿಗೆ ಆಗುವ ಸಂತಸಸಕ್ಕೆ ಬೆಲೆ ಕಟ್ಟಲು ಅಸಾಧ್ಯವಾಗಿದೆ ಎಂದರು.

ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಎಸ್. ಸಾಗರ್, ಖಜಾಂಚಿ ಎಚ್.ಕೆ. ವೆಂಕಟೇಶ್‌ ಭಟ್, ಮಹಿಳಾ ಮಂಡಳಿ ಕಾರ್ಯದರ್ಶಿ ವಿದ್ಯಾ ಪೈ. ಖಜಾಂಚಿ, ಸವಿತಾ, ಸದಸ್ಯರಾದ ಕವಿತಾ, ತಾಸೀನ್, ವಿದ್ಯಾಶೆಟ್ಟಿ, ವೈಶಾಲಿ ಕುಡ್ವ, ಪ್ರಮೀಳಾ, ಆಶಾಭಟ್, ವರ್ಷಾ ಮತ್ತಿತರರು ಹಾಜರಿದ್ದರು.-----೦೩ಬಿಹೆಚ್‌ಆರ್: ಬಾಳೆಹೊನ್ನೂರಿನ ದಿವ್ಯಭಾರತಿ ಮಹಿಳಾ ಮಂಡಳಿ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಕೃಷ್ಣ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸಿ.ಪಿ.ರಮೇಶ್, ಜ್ಯೋತಿ, ಸಾಗರ್, ವೆಂಕಟೇಶ್‌ಭಟ್, ವಿದ್ಯಾಪೈ, ಸವಿತಾ, ಕವಿತಾ, ವೈಶಾಲಿ, ವಿದ್ಯಾಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ