ಕನ್ನಡ ಪ್ರಭ ವಾರ್ತೆ ಕೆಜಿಎಫ್ ರಾಜ್ಯದ ಇತಿಹಾಸದಲ್ಲೇ ಕೆಜಿಎಫ್ ತಾಲೂಕಿನ ತಹಸೀಲ್ದಾರ್ ಒಬ್ಬರು ಕೋಟ್ಯತರ ರುಪಾಯಿ ಮೌಲ್ಯ ೫೨೩ ಎಕರೆ ಬಗರ್ ಹುಕ್ಕಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿ ಖಾತೆಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಕೋಲಾರ ಲೋಕಾಯುಕ್ತ ಪೊಲೀಸ್‌ರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ:ಕೆಜಿಎಫ್ ತಾಲೂಕಿನ ಅಂಡ್ರಸನ್‌ಪೇಟೆಯ ಗಂಗದೊಡ್ಡಿ ಗ್ರಾಮದ ನಿವಾಸಿಯಾದ ವೆಂಕಟೇಶ್‌ಗೌಡ ಎಂಬುವವರು ಬಗರ್‌ಹುಕಂ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿರುವ ದಿನಪತ್ರಿಕೆಗಳ ವರದಿಯನ್ನಾಧಿರಿಸಿ ಕೋಲಾರ ಲೋಕಾಯುಕ್ತ ಪೊಲೀಸ್‌ರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸ್ ತನಿಖೆಕೆಜಿಎಫ್ ತಾಲೂಕಿನಲ್ಲಿ ಬಗರ್‌ಹುಕುಂ ಜಮೀನು ಮಂಜೂರು ಮಾಡುವಾಗ ನಿಯಮಗಳನ್ನು ಉಲ್ಲಂಘಿಸಿ ೫೨೩ ಎಕರೆ ಭೂಮಿಯನ್ನು ೨೨೯ ಅನರ್ಹ ಫಲಾನುಭವಿಗಳಿಗೆ ಮಂಜೂರು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ೧೫.೬೯ ಕೋಟಿ ರುಪಾಯಿಗಳ ನಷ್ಟವುಂಟು ಮಾಡಿರುವುದು ಲೋಕಾಯುಕ್ತ ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಈ ಬಗ್ಗೆ ತಹಸೀಲ್ದಾರ್ ಕೆ.ಎನ್.ಸುಜಾತ, ಶಿರಸ್ತೆದಾರ ಕೆ.ಸಿ.ಸುರೇಶ್, ದ್ವೀತಿಯ ದರ್ಜೆ ಸಹಾಯಕ ಆರ್ ಪವನ್‌ಕುಮಾರ್ ವಿರುದ್ದ ಹೆಚ್ಚಿನ ತನಿಖೆ ನಡೆಸಲು ಕೋಲಾರ ಜಿಲ್ಲೆಯ ಲೋಕಾಯುಕ್ತ ವೃತ್ತ ನೀರಿಕ್ಷಕಿ ಹಾಗೂ ತನಿಖಾಧಿಕಾರಿ ರೇಣುಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.