ಮೂಡಿಗೆರೆ, ಕಳಸದಲ್ಲಿ ಅಕ್ರಮವಾಗಿ ಪಿಡಿಒ ಜವಾಬ್ದಾರಿ: ಸಲಾವುದ್ದೀನ್

KannadaprabhaNewsNetwork |  
Published : Nov 16, 2026, 02:00 AM IST
ಪೋಟೋ | Kannada Prabha

ಸಾರಾಂಶ

ಚಿಕ್ಕಮಗಳೂರುಮೂಡಿಗೆರೆ ಮತ್ತು ಕಳಸ ತಾಲೂಕುಗಳಲ್ಲಿ ಕಳೆದ 2 ವರ್ಷಗಳಿಂದ ಸರ್ಕಾರದ ನಿಯಮ ಉಲ್ಲಂಘಿಸಿ ಗ್ರೇಡ್-1 ಮತ್ತು ಗ್ರೇಡ್-2 ಪಂಚಾಯಿತಿ ಕಾರ್ಯದರ್ಶಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜವಾಬ್ದಾರಿ ನೀಡಲಾಗಿದೆ. ಈ ಹುದ್ದೆಗಳನ್ನು ಲಕ್ಷಾಂತರ ರು. ಪಡೆದು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹುದ್ದೆಗಳನ್ನು ಲಕ್ಷಾಂತರ ರು. ಪಡೆದು ಮಾರಾಟ: ಆರೋಪ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮೂಡಿಗೆರೆ ಮತ್ತು ಕಳಸ ತಾಲೂಕುಗಳಲ್ಲಿ ಕಳೆದ 2 ವರ್ಷಗಳಿಂದ ಸರ್ಕಾರದ ನಿಯಮ ಉಲ್ಲಂಘಿಸಿ ಗ್ರೇಡ್-1 ಮತ್ತು ಗ್ರೇಡ್-2 ಪಂಚಾಯಿತಿ ಕಾರ್ಯದರ್ಶಿಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಜವಾಬ್ದಾರಿ ನೀಡಲಾಗಿದೆ. ಈ ಹುದ್ದೆಗಳನ್ನು ಲಕ್ಷಾಂತರ ರು. ಪಡೆದು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿ ರಾಜ್ಯ ಉಪಾಧ್ಯಕ್ಷ ಎಂ.ಎ. ಸಲಾವುದ್ದೀನ್ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಡಿಎಸ್-2 ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಸರ್ಕಾರಿ ನಿಯಮದ ಪ್ರಕಾರ ಗ್ರೇಡ್-2 ಕಾರ್ಯದರ್ಶಿಗಳಿಗೆ ಯಾವುದೇ ಸಂದರ್ಭದಲ್ಲೂ ಪಿಡಿಒ ಜವಾಬ್ದಾರಿ ನೀಡಲು ಅವಕಾಶವಿಲ್ಲ. ಆದರೂ ಕಳಸ ತಾಲೂಕಿನ ಕಳಸ ಪಟ್ಟಣ, ಸಂಸೆ ಮತ್ತು ಮರಸಣಿಗೆ ಗ್ರಾಪಂಗಳಲ್ಲಿ ಗ್ರೇಡ್-2 ಕಾರ್ಯ ದರ್ಶಿಗಳಿಗೆ ಹಾಗೂ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಪಂಯಲ್ಲಿ ನಿಯಮಬಾಹಿರವಾಗಿ ಪಿಡಿಒ ಜವಾಬ್ದಾರಿ ನೀಡಲಾಗಿದೆ ಎಂದು ದೂರಿದ್ದಾರೆ.ಸುಂಕಸಾಲೆಯಿಂದ 50 ಕಿ.ಮೀ. ದೂರದ ಹೆಸ್ಗಲ್ ಗ್ರಾಪಂನ ಗ್ರೇಡ್-1 ಕಾರ್ಯದರ್ಶಿಯನ್ನು ಅಲ್ಲಿ ನಿಯೋಜಿ ಸಿರುವುದು ಕರ್ತವ್ಯ ಲೋಪಕ್ಕೆ ಸಾಕ್ಷಿ. ಮಾಕೋನಹಳ್ಳಿ ಗ್ರಾಪಂನ ಹಾಲಿ ಪಿಡಿಒರನ್ನು ಕಳೆದ ಮೂರು ವರ್ಷಗಳಿಂದ ಕಾನೂನುಬಾಹಿರವಾಗಿ ಲೆಕ್ಕಾಧಿಕಾರಿಯಾಗಿ (ಅಕೌಂಟ್ ಆಫೀಸರ್) ನೇಮಿಸಲಾಗಿದೆ. ಮೂಡಿಗೆರೆ ತಾಪಂನಲ್ಲಿ ವ್ಯವಸ್ಥಾಪಕರ ಹುದ್ದೆಯನ್ನು ಪಿಡಿಒಗಳಿಗೆ ಪ್ರಭಾರ ಮಾಡುವ ಅವಕಾಶವಿದ್ದರೂ ಆಡಳಿತಾತ್ಮಕ ಕೆಲಸ ಕುಂಠಿತವಾಗಲು ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ.ಬಹುತೇಕ ಗ್ರಾಪಂಗಳಲ್ಲಿ ಬಜೆಟ್‌ನಲ್ಲಿ ಒಂದು ರೀತಿ ಲೆಕ್ಕ , ಕಾಮಗಾರಿ ಮತ್ತೊಂದು ರೀತಿಯಲ್ಲಿ ಮಾಡಲಾಗಿದೆ. ಪ್ರತಿ ಪಂಚಾಯಿತಿಯಿಂದ ಲಕ್ಷಾಂತರ ರು. ಲಂಚ ಪಡೆದಿರುವುದಕ್ಕೆ ಇವು ಸಾಕ್ಷಿ. ಈ ಎಲ್ಲ ಅಕ್ರಮಗಳ ಕುರಿತು ಡಿಸಿ ಹಾಗೂ ಜಿಪಂ ಸಿಇಒಗೆ ದಾಖಲೆ ಸಹಿತ ದೂರು ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ದೂರಿದ್ದಾರೆ.

-- ಬಾಕ್ಸ್--ಒಂದು ವಾರದ ಗಡುವು:ಒಂದು ವಾರದೊಳಗೆ ಈ ಪ್ರಕರಣಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮೂಡಿಗೆರೆಯಲ್ಲಿ ಡಿಸಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅಣಕು ಶವಯಾತ್ರೆ ನಡೆಸಿ ತಾಲೂಕು ಪಂಚಾಯಿತಿ ಕಚೇರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎಂ.ಎ. ಸಲಾವುದ್ದೀನ್ ಎಚ್ಚರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ