ಅಕ್ರಮ ಬೀಟೆ ನಾಟಗಳ ವಶ: ಆರೋಪಿಗಳು ಪರಾರಿ

KannadaprabhaNewsNetwork |  
Published : Mar 07, 2026, 01:00 AM IST
ಅಕ್ರಮ ಬೀಟಿ ನಾಟಗಳ ವಶ: ಆರೋಪಿಗಳು ಪರಾರಿ: ಅರಣ್ಯ ಇಲಾಖೆಯಿಂದ ಮೊಕದ್ದಮೆ ದಾಖಲು | Kannada Prabha

ಸಾರಾಂಶ

ಸೋಮವಾರಪೇಟೆ ವಲಯದ ಬ್ಯಾಡಗೊಡ್ಡ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೀಟೆ ನಾಟಗಳನ್ನು ಅರಣ್ಯ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ವಲಯದ ಬ್ಯಾಡಗೊಡ್ಡ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೀಟೆ ನಾಟಗಳನ್ನು ಅರಣ್ಯ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.ಬ್ಯಾಡಗೊಟ್ಟ ಗ್ರಾಮದ ಬಿ.ಡಿ.ಅಣ್ಣಯ್ಯ ಮತ್ತು ವಾಹನ ಮಾಲಿಕ ಬಿ.ವಿ.ಚಂದ್ರ ಎಂಬವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಆರೋಪಿ ಅಣ್ಣಯ್ಯ ಅವರ ಸೀಗೆಹೊಸೂರು ಗ್ರಾಮದ ಜಮೀನಿನಲ್ಲಿ ಮರಗಳನ್ನು ಕಡಿದು ನಾಟಗಳನ್ನಾಗಿ ಪರಿವರ್ತಿಸಿ ವಾಹನದಲ್ಲಿ ತುಂಬಿಸಿಕೊಂಡು ಮಲ್ಲೇನಹಳ್ಳಿ ಗ್ರಾಮದ ತನ್ನ ಗೋದಾಮಿನಲ್ಲಿ ನಿಲ್ಲಿಸಿದ್ದರು. ಮಾಹಿತಿ ಪಡೆದ ಸೋಮವಾರಪೇಟೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ ಬೀಟೆ ನಾಟಾಗಳು ಮತ್ತು ವಾಹನವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಶೈಲೇಂದ್ರಕುಮಾರ್, ಡಿಆರ್‌ಎಫ್‌ಒ ಬಿ.ಎನ್.ಗುರುಪ್ರಸಾದ್, ಸಿಬ್ಬಂದಿಗಳಾದ ವರುಣ್, ಜೀವನ್, ದರ್ಶನ್, ವಿಕಾಸ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಿಂದ ರೋಶನಿ ನಿಲಯದಲ್ಲಿ ಅಂ.ರಾ. ‘ಫೋರೆನ್ಸಿಕ್‌ ಫ್ಯೂಷನ್’
ಆಯುರ್ವೇದ ಸಂಶೋಧನೆಗಳು ವ್ಯಾಪಾರ ಅವಕಾಶಗಳಾಗಿ ರೂಪುಗೊಳ್ಳಲಿ: ಡಾ.ಲಕ್ಷ್ಮೀ ನಾರಾಯಣ ಶೆಣೈ