ಸಂಸ್ಕೃತಿ, ಕಲೆ ಉಳಿಸುವುದು ಎಲ್ಲರ ಕರ್ತವ್ಯ: ಡಾ. ಬಲ್ಲಾಳ್

KannadaprabhaNewsNetwork |  
Published : Mar 07, 2026, 01:00 AM IST
ಹಿರಿಯ ರಂಗಕರ್ಮಿ ಪ್ರಸನ್ನ ಅವರಿಗೆ ಉಡುಪಿ ರಂಗಭೂಮಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು | Kannada Prabha

ಸಾರಾಂಶ

ನಮ್ಮ ಪ್ರಾಚೀನ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.

ಉಡುಪಿ: ನಮ್ಮ ಪ್ರಾಚೀನ ಸಂಸ್ಕೃತಿ, ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.

ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಇದರ ರಂಗಭೂಮಿ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ರಂಗಕಲೆ, ಯಕ್ಷಗಾನ, ಹಾಗೂ ಪ್ರಾಚೀನ ಸಂಸ್ಕೃತಿ, ಸಂಪ್ರದಾಯ, ಕಲಾ ಪ್ರಕಾರಗಳನ್ನು ಬೆಳೆಸಲು ಮಾಹೆ ಮಹತ್ತರ ಕೊಡುಗೆ ನೀಡುತ್ತಿದೆ. ರಂಗಭೂಮಿ ಉಡುಪಿ ಸಂಸ್ಥೆ ಕಳೆದ 60 ವರ್ಷಗಳಿಂದ ರಂಗಭೂಮಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ತಲ್ಲೂರು ಶಿವರಾಮ ಶೆಟ್ಟರ ನೇತೃತ್ವದಲ್ಲಿ ನಾಟಕೋತ್ಸವ ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.ಪ್ರಶಸ್ತಿ ಪ್ರದಾನ: 2026ನೇ ಸಾಲಿನ ರಂಗಭೂಮಿ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ

ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ 20,000 ರು. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.ರಂಗಭೂಮಿ ಉಡುಪಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ಹುಣಸವಾಡಿ ರಾಜನ್ ಅಭಿನಂದನಾ ಭಾಷಣ ಮಾಡಿದರು . ಮಾಜಿ ಶಾಸಕ ಕೆ. ರಘುಪತಿ ಭಟ್‌, ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಕಿದಿಯೂರು, ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತಾ ಮಯ್ಯ ಉಪಸ್ಥಿತರಿದ್ದರು.ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಗೀತಂ ಗಿರೀಶ್ ಪ್ರಶಸ್ತಿ ಪತ್ರ ವಾಚಿಸಿದರು. ಪೂರ್ಣಿಮಾ ಸುರೇಶ್ ನಿರೂಪಿಸಿ, ವಿವೇಕಾನಂದ ಎನ್. ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅರುಣ್‌ ಲಾಲ್‌ ನಿರ್ದೇಶನದ ‘ಕುಹೂ’ ನಾಟಕ ಪ್ರದರ್ಶನಗೊಂಡಿತು. ಯಂತ್ರ ನಾಗರಿಕತೆ ಹಾಗೂ ಅತಿಯಾದ ಧಾರ್ಮಿಕತೆ ಎರಡೂ ಸದಾ ಅಪಾಯಕಾರಿ. ಇಂದು ಯಂತ್ರಕ್ಕೂ ದೇವರಿಗೂ ವ್ಯತ್ಯಾಸವೇ ಇಲ್ಲದಾಗಿದೆ. ಹೇಗೆ ಸತ್ಯದ ದಾರಿಯಲ್ಲಿ ಬದುಕಬಹುದು ಎಂಬುನ್ನು ಯೋಚಿಸುವುದು ಇಂದಿನ ಅಗತ್ಯವಾಗಿದೆ. ನಾಟಕ ಸತ್ಯದರ್ಶನದ ಮಾಧ್ಯಮವಾಗಿದೆ. ನಾಟಕದ ಅಪಹಾಸ್ಯ ನಿಲ್ಲಬೇಕು. ಸಿನೆಮಾ, ಧಾರವಾಹಿ, ರೀಲ್ಸ್‌ ಇತ್ಯಾದಿಗಳ ನಡುವೆ ನಿಜವಾದ ನಟನೆ, ನಾಟಕ, ಯಕ್ಷಗಾನಗಳನ್ನು ಜೀವಂತವಾಗಿಟ್ಟುಕೊಳ್ಳಬೇಕು. -ಪ್ರಸನ್ನ, ಹಿರಿಯ ರಂಗಕರ್ಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಿಂದ ರೋಶನಿ ನಿಲಯದಲ್ಲಿ ಅಂ.ರಾ. ‘ಫೋರೆನ್ಸಿಕ್‌ ಫ್ಯೂಷನ್’
ಆಯುರ್ವೇದ ಸಂಶೋಧನೆಗಳು ವ್ಯಾಪಾರ ಅವಕಾಶಗಳಾಗಿ ರೂಪುಗೊಳ್ಳಲಿ: ಡಾ.ಲಕ್ಷ್ಮೀ ನಾರಾಯಣ ಶೆಣೈ