ಕನ್ನಡಪ್ರಭ ವಾರ್ತೆ, ತರೀಕೆರೆ
ಸಾಗುವಳಿ ಮಾಡುತ್ತಿರುವ ಹಾಗೂ ಅನುಭವದಲ್ಲಿರುವ ರೈತರು ಫೋಡಿ ದುರಸ್ತಿ ಮಾಡಿಸಲು ತರೀಕೆರೆ ಭೂನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಿದರೆ. ಅವರು ಅರಣ್ಯ ಇಲಾಖೆ ಅನುಮತಿ ಕೇಳುತ್ತಿದ್ದಾರೆ. ಹಾಗಾಗಿ ದಯಮಾಡಿ ಕೂಡಲೇ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಸರ್ವೆ ಮಾಡಿ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಸೇರಿಸಿರುವ ನಮ್ಮ ಅನುಭವದಲ್ಲಿರುವ ಮತ್ತು ಸಾಗುವಳಿ ಪತ್ರ ಪಡೆದ ಎಲ್ಲಾ ರೈತರ ಜಮೀನನ್ನು ಪುನಃ ನಿಷ್ಪಕ್ಷಪಾ ಸರ್ವೆ ಮಾಡಿಸಿ ಪರಿಭಾವಿತ ಅರಣ್ಯ ಪ್ರದೇಶಕ್ಕೆ ಸೇರಿಸಿರುವ ಜಮೀನು ಕೈಬಿಟ್ಟು ರೈತರಿಗೆ ಪೋಡಿ ಮತ್ತು ದುರಸ್ತಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತರೀಕೆರೆ ವಿಧಾನ ಸಭಾ ಕ್ಷೇತ್ರ ದರ್ಶನ್ ಕೆ.ವಿ. ಜಿಲ್ಲಾಧ್ಯಕ್ಷ ತಿಪ್ಪೇಶ್, ಕಾರ್ಯಾಧ್ಯಕ್ಷ ದೇವರಾಜ್ ಟಿ.ಎಸ್.ರಂಗನೇಹಳ್ಳಿ ಆನಂದ್, ವಿನೋದ್ ಕೆಂಚಾಪುರ, ಶರತ್, ಮೋಹನ್, ರಂಜಿತ್, ಕಿರಣ್, ಯಶವಂತ್, ಜೋಸೆಫ್, ಉಮೇಶ್ ಭಾಗವಹಿಸಿದ್ದರು,5ಕೆಟಿಅರ್.ಕೆ.1ಃ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತರೀಕೆರೆ ವಿಧಾನ ಸಭಾ ಕ್ಷೇತ್ರ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ವಿನಂತಿ ಪತ್ರ ಸಲ್ಲಿಸಲಾಯಿತು.