ಪುರಸಭೆಯ ಆಸ್ತಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಕೆ

KannadaprabhaNewsNetwork |  
Published : Jul 24, 2024, 12:27 AM ISTUpdated : Jul 24, 2024, 12:37 PM IST
ಪೊಟೋ-ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಹಿಂದೂ ಮಹಾಗಣಪತಿ ಸೇವಾ ಮಂಡಳದ ವತಿಯಿಂದ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಯಾವುದೇ ಪರವಾನಗಿ ಪಡೆದುಕೊಳ್ಳದೆ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತೆರವುಗೊಳಿಸಬೇಕು

ಲಕ್ಷ್ಮೇಶ್ವರ: ಪಟ್ಟಣದ ಭರಮದೇವರ ಸರ್ಕಲ್ ಹತ್ತಿರ ಇರುವ ಪುರಸಭೆಯ ಆಸ್ತಿಯಲ್ಲಿ ಹಲವರು ಅಕ್ರಮ ಕಟ್ಟಡ ನಿರ್ಮಾಣ ಮಾಡುವದನ್ನು ತಡೆಹಿಡಿಯಬೇಕು ಎಂದು ಫಕ್ಕಿರೇಶ ಅಣ್ಣಿಗೇರಿ ಆಗ್ರಹಿಸಿದರು.

ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದಗೆ ಪಟ್ಟಣದ ಹಿಂದು ಮಹಾಗಣಪತಿ ಸೇವಾ ಮಂಡಳದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದರು.

ಪಟ್ಟಣದ ಭರಮದೇವರ ಸರ್ಕಲ್ ಹತ್ತಿರ ಇರುವ ಪುರಸಭೆಯ ದೇಸಾಯಿ ಬಣದ ಸಿಟಿಎಸ್ ನಂ,1155 ಉರ್ದು ಶಾಲೆಯ ಪಕ್ಕದಲ್ಲಿನ ಸಂಖ್ಯೆ 21/1 ಎ ನೇದ್ದರಲ್ಲಿ 6 ಮಳಿಗೆ ಕಟ್ಟಲು ಹಲವರು ಪುರಸಭೆಯಿಂದ ಯಾವುದೇ ಪರವಾನಗಿ ಪಡೆದುಕೊಳ್ಳದೆ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತೆರವುಗೊಳಿಸಬೇಕು ಎಂದರು.

ಪುರಸಭೆ ಜಾಗೆಯಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತೆರವುಗೊಳಿಸಿ ಆ ಜಾಗೆಯಲ್ಲಿ ಗ್ರಂಥಾಲಯ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಹೇಳಿದ ಅವರು, ಅಕ್ರಮವಾಗಿ ಕಟ್ಟುತ್ತಿರುವ ಕಟ್ಟಡವನ್ನು 15 ದಿನಗಳೊಳಗಾಗಿ ತೆರವುಗೊಳಿಸದಿದ್ದರೆ ಹಿಂದೂ ಮಹಾ ಗಣಪತಿ ಸೇವಾ ಮಂಡಳ ಹಾಗೂ ಹಿಂದೂ ಸನಾತನ ಯುವಕ ಮಂಡಳದ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪುರಸಭೆ ಜಾಗೆಯಲ್ಲಿ ಯಾವುದೇ ಅಕ್ರಮ ಕಟ್ಟಡ ಕಟ್ಟಲು ಅವಕಾಶ ನೀಡುವುದಿಲ್ಲ, ಪಟ್ಟಣದ ಭರಮಪ್ಪನ ಸರ್ಕಲ್ ಹತ್ತಿರ ಅಕ್ರಮ ಕಟ್ಟಡ ಕಟ್ಟುತ್ತಿರುವುದನ್ನು ಈಗಾಗಲೆ ತಡ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಎಲ್ಲ ರೀತಿಯಿಂದ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೆ ಕಟ್ಟಡ ಕಟ್ಟುತ್ತಿರುವವರಿಗೆ ತಮ್ಮಲ್ಲಿ ಇರುವ ದಾಖಲೆ ತಂದು ತೋರಿಸಬೇಕು ಎಂದು ಸೂಚನೆ ನೀಡಲಾಗಿದೆ, ಅಲ್ಲದೆ ನಮ್ಮ ಪುರಸಭೆಯಲ್ಲಿನ ಈ ಆಸ್ತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಬಸವರಾಜ ಚಕ್ರಸಾಲಿ, ಮಂಜು ತಮ್ಮಣ್ಣವರ, ಮಹಾಂತೇಶ ಕುಂಬಾರ, ನವೀನ ಕುಂಬಾರ, ಅಮಿತ್ ಗುಡಗೇರಿ, ಸೋಮು ಗೌರಿ, ಫಕ್ಕೀರೇಶ ಬಸವಾ ನಾಯ್ಕರ್, ಮುತ್ತು ಗೊಜನೂರ, ಹನಮಂತಪ್ಪ ರಾಮಗೇರಿ, ಕಿರಣ ಚಿಲ್ಲೂರಮಠ, ವಿಶ್ವನಾಥ ದಾನಿ, ಮಂಜುನಾಥ ಬಳಗಾನೂರ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ