ಅಕ್ರಮ ಸಿಲಿಂಡರ್ ಮಾರಾಟ ಪ್ರಕರಣ: ಆರೋಪಿಗಳಿಗೆ ದಂಡ ಮತ್ತು ಶಿಕ್ಷೆ

KannadaprabhaNewsNetwork |  
Published : Apr 26, 2026, 03:15 AM IST
 ಅಕ್ರಮ ಸಿಲಿಂಡರ್‌ ಮಾರಾಟ ಪ್ರಕರಣ | Kannada Prabha

ಸಾರಾಂಶ

ರಾಣಿಬೆನ್ನೂರು ನಗರದಲ್ಲಿ ಆಟೋಗಳಿಗೆ ಅಕ್ರಮವಾಗಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಶನಿವಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಹಂತೇಶ ಭುಸಗೋಳ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಶಿವಕುಮಾರ ಚನ್ನಯ್ಯ ಹಿರೇಮಠ, ನಾಗರಾಜ ನಾಗಯ್ಯ ಹನಗೋಡಿಮಠ ಶಿಕ್ಷೆಗೆ ಒಳಗಾದ ಆರೋಪಿಗಳು.

ರಾಣಿಬೆನ್ನೂರು: ನಗರದಲ್ಲಿ ಆಟೋಗಳಿಗೆ ಅಕ್ರಮವಾಗಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ಶನಿವಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಹಂತೇಶ ಭುಸಗೋಳ ದಂಡ ಮತ್ತು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಶಿವಕುಮಾರ ಚನ್ನಯ್ಯ ಹಿರೇಮಠ, ನಾಗರಾಜ ನಾಗಯ್ಯ ಹನಗೋಡಿಮಠ ಶಿಕ್ಷೆಗೆ ಒಳಗಾದ ಆರೋಪಿಗಳು. ಆರೋಪಿಗಳು ಆಟೋ ರಿಕ್ಷಾಗಳಿಗೆ ಬಳಸುವ ಸಣ್ಣ ಸಿಲಿಂಡರ್‌ಗಳಿಗೆ ಯಂತ್ರದ ಮೂಲಕ ಗ್ಯಾಸ್ ತುಂಬುತ್ತಿದ್ದರು. ಈ ಹಿನ್ನೆಲೆಯಲ್ಲಿ 2-10-2013ರಂದು ಆಹಾರ ಇಲಾಖೆ ಸಹಯೋಗದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳಿಗೆ ತಲಾ ಐದು ವರ್ಷ ಶಿಕ್ಷೆ ಹಾಗೂ 80 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಸಂತೋಷಕುಮಾರ ಎಸ್.ಎಂ. ವಾದ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್