ಮಹಿಳೆ ಮೀಸಲಾತಿ ಮಸೂದೆ ಸೋಲು: ಕಾಂಗ್ರೇಸ್‌ ವಿರುದ್ದ ಪ್ರತಿಭಟನೆ

KannadaprabhaNewsNetwork |  
Published : Apr 26, 2026, 03:15 AM IST
ಪೋಟೊ25ಕೆಪಿಎಲ್20:‌ ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್ ವಿರುದ್ದ ನಾರಿಶಕ್ತಿ ಪೋರಂನಿಂದ  ಮಹಿಳೆಯರು ಪ್ರತಿಭಟನೆ ನಡೆಸಿ ಕಾಂಗ್ರೇಸ್‌ ಪಕ್ಷದವರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎಂಬ ಉದ್ದೇಶದಿಂದ ನಾರಿ ವಂದನ್ ಮಸೂದೆ ಸಂಸತ್ತಿನಲ್ಲಿ ಮಂಡನೆ ಮಾಡಿತ್ತು

ಕೊಪ್ಪಳ: ಮಹಿಳಾ ಮೀಸಲಾತಿ ಮಸೂದೆ ಸೋಲಿಸಿದ ಕಾಂಗ್ರೆಸ್ ವಿರುದ್ಧ ನಗರದ ಬಸವೇಶ್ವರ ವೃತ್ತದಲ್ಲಿ ನಾರಿಶಕ್ತಿ ಪೋರಂನಿಂದ ಮಹಿಳೆಯರು ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಮೀಸಲಾತಿ ಕೊಡಬೇಕು ಎಂಬ ಉದ್ದೇಶದಿಂದ ನಾರಿ ವಂದನ್ ಮಸೂದೆ ಸಂಸತ್ತಿನಲ್ಲಿ ಮಂಡನೆ ಮಾಡಿತ್ತು. ಆದರೆ ಕಾಂಗ್ರೆಸ್ ಮಹಿಳೆಯರಿಗೆ ಮೀಸಲಾತಿ ಸಿಗಬಾರದು ಎಂಬ ಕಾರಣಕ್ಕೆ ಮಸೂದೆ ಸಂಸತ್‌ನಲ್ಲಿ ಸೋಲಿಸಿದೆ. ಇದರಿಂದ ಕಾಂಗ್ರೆಸ್ ಇಡೀ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು.

ಮಹಿಳೆಯರ ಏಳ್ಗೆ ಕಾಂಗ್ರೆಸ್ ಸಹಿಸುತ್ತಿಲ್ಲ. ೬೦ ವರ್ಷದಿಂದ ಆಡಳಿತ ನಡೆಸಿದ್ದ ಕಾಂಗ್ರೆಸ್ ಮಹಿಳೆಯರ ಪ್ರಗತಿಗೆ ಒತ್ತು ನೀಡಿಲ್ಲ. ಮೋದಿ ಸರ್ಕಾರ ಒತ್ತು ನೀಡಿ ಇತ್ತೀಚೆಗೆ ಮಸೂದೆ ಮಂಡನೆ ಮಾಡಿದರೆ ಕಾಂಗ್ರೆಸ್ ಒಳಗೊಂಡಂತೆ ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಹಾಕಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಪ್ರತಿಭಟನೆಯಲ್ಲಿ ರತ್ನಕುಮಾರಿ, ಶೋಭಾ ನಗರಿ, ಪ್ರತಿಮಾ ಪಟ್ಟಣಶಟ್ಟಿ, ಗೀತಾ ಬಳ್ಳಾರಿ, ಜಯಶ್ರೀ ಗೊಂಡಬಾಳ, ಶಿವಲಿಲಾ ದಳವಾಯಿ, ಸುನಂದಾ ಅಂಚಿನಾಳ, ಕೀರ್ತಿ ಪಾಟೀಲ್, ಗೀತಾ ಮುತ್ತಾಳ, ರೇವತಿ ಮಟ್ಟಿ, ಶೈಲಜಾ ಬಾಗಲಿ, ಸರೋಜಾ ಬಾಕಳೆ, ಭಾರತಿ, ಸಂತೋಷಿ ಜೋಶಿ, ಅನುರಾಧ, ಗೌರಮ್ಮ ಹಾದಿಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್