ಯಾದಗಿರಿ: ಅಕ್ರಮ ಮದ್ಯ ಮಾರಾಟ, ಸಂಗ್ರಹಣೆ, ಸಾಗಾಣಿಕೆ ನಿಷೇಧ ಆದೇಶ ಉಲ್ಲಂಘಿಸಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ 12.960 ಲೀ. ಮದ್ಯ ಹಾಗೂ 7.800 ಲೀ. ಬಿಯರ್ ವಶಕ್ಕೆ ಪಡೆಯಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಶಹಾಪುರ ಪಟ್ಟಣದ ಡಿಗ್ರಿ ಕಾಲೇಜು ಹತ್ತಿರ ಗಸ್ತು ಮಾಡುತ್ತಿರುವಾಗ ಬೈಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದದ್ದು ಕಂಡು ಬಂದ ಪ್ರಯುಕ್ತ ಅಬಕಾರಿ ದಾಳಿ ಮಾಡಿ 12.960 ಲೀ. ಮದ್ಯ ಹಾಗೂ 7.800 ಲೀ. ಬಿಯರ್ ವಶಕ್ಕೆ ಪಡೆದು, ವಾಹನ ಸಮೇತ ಆರೋಪಿ ದೇವರಾಜ್‌ನನ್ನು ಬಂಧಿಸಿದ್ದಾರೆ. ಅಬಕಾರಿ ನಿರೀಕ್ಷಕರು ಉಪ ವಿಭಾಗ ಶಹಾಪುರ ಈ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.